ಕುರುಹಿನಶೆಟ್ಟಿ ಸೊಸಾಯಿಟಿ ಪ್ರತಿವರ್ಷವೂ ಪ್ರಗತಿಯಲ್ಲಿ ಸಾಗುತ್ತಿದೆ: ಸುಭಾಸ ಬೆಳಕೂಡ
Kuruhinashetty Society is progressing every year: Subhasa Belakuda
ಮೂಡಲಗಿ ಮೇ 01 : ಪಟ್ಟಣದ ಪ್ರತಿಷ್ಠಿತ ಸೊಸಾಯಿಟಿಗಳಲ್ಲಿ ಒಂದಾದ ಕುರುಹಿನಶೆಟ್ಟಿ ಅರ್ಬನ ಕೋ-ಆಪ ಕ್ರೆಡಿಟ್ ಸೊಸಾಯಿಟಿಯು ಆರ್ಥಿಕ ವರ್ಷ 2025-26ನೇ ಯ ಮಾರ್ಚ್ ಅಂತ್ಯಕ್ಕೆ 7.45 ಕೋಟಿ ನಿವ್ವಳ ಲಾಭಗಳಿಸಿದೆ. ಕುರುಹಿನ ಶೆಟ್ಟಿ ಸೊಸಾಯಿಟಿಯ ಸಭಾ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷರಾದ ಸುಭಾಸಗೆ ಬೆಳಕೂಡಯವರು 2025-26ನೇ ಸಾಲಿನ ಸೊಸಾಯಿಟಿಯ ಅಭಿವೃದ್ಧಿ ಬಗ್ಗೆ ತಿಳಿಸಿಕೊಟ್ಟರು.
ಈ ವರ್ಷ 7.45 ಕೋಟಿ ಲಾಭ ಮಾರ್ಚ ಅಂತ್ಯಕ್ಕೆ. 4.73 ಕೋಟಿ ಶೇರು ಬಂಡವಾಳ, 333.89 ಕೋಟಿ ಠೇವುಗಳು, 30.84 ಕೋಟಿ ನಿಧಿಗಳನ್ನು ಹೊಂದಿ, ವಿವಿಧ ಬ್ಯಾಂಕುಗಳಲ್ಲಿ ಠೇವಣಿದಾರರ ಭದ್ರತೆಗಾಗಿ 118.46 ಕೋಟಿ ಗುಂತಾವಣಿ ಮಾಡಿ, 237.54 ಕೋಟಿ ರೂ ಸಾಲ ವಿತರಿಸಿದ್ದು, ದುಡಿಯುವ ಬಂಡವಾಳ 391.46 ಕೋಟಿ ಹಾಗೂ ಒಟ್ಟು ವರ್ಷದ 1742 ಕೋಟಿ ರೂಪಾಯಿ ವಹಿವಾಟು ಮತ್ತು ಶೇರುದಾರರಿಗೆ 15ಅ ಲಾಭಾಂಶ ನೀಡಲಾಗಿದೆ ಎಂದರು. ಪ್ರತಿ ವರ್ಷ ಲಾಭದತ್ತ/ಅಭಿವೃದ್ಧಿ ಆಗಲು ಠೇವುದಾರರು, ಶೇರುದಾರರು, ಸಿಬ್ಬಂದಿಗಳು, ಸಲಹಾ ಸಮಿತಿ ಮತ್ತು ಆಡಳಿತ ಮಂಡಳಿಯವರ ಈ ಎಲ್ಲ ವರ್ಗದವರಿಂದ ಸಹಕಾರ ಇದ್ದಿದ್ದರಿಂದ ಪ್ರಗತಿಯಲ್ಲಿ ಸಾಗುವುದು ಅಂತ ಹೇಳುವುದರ ಮೂಕಾಂತರ ಎಲ್ಲರನ್ನು ಅಭಿನಂದಿಸಿದರು.
ಸೊಸಾಯಿಟ ಸದಸ್ಯರಾದ ಬಸಪ್ಪ ಚಿ.ಮುಗಳಖೋಡ ತಮ್ಮ ಸಂಘದ ಸಂಕ್ಷಿಪ್ತವಾಗಿ ಮಾಹಿತಿ ವಿವರಿಸಿದರು. 5 ಸ್ವಂತ ಕಟ್ಟಡ ಮತ್ತು ಮುಂದಿನ ದಿನಗಳಲ್ಲಿ ಐದು(5) ಹೊಸದಾಗಿ ಶಾಖೆಗಳನ್ನು ತೆರೆಯುವ ಗುರಿ ಹೊಂದಲಾಗಿದೆ. ಸಂಘವು ಪ್ರಧಾನ ಕಛೇರಿ ಬಿಟ್ಟು, 18 ಶಾಖೆಗಳನ್ನು ಹೊಂದಿ, ಬಹುತೇಕ ಎಲ್ಲ ಶಾಖೆಗಳಲ್ಲಿ ಲಾಭಾಂಶ ಹೆಚ್ಚಳವಾಗಿದೆ ಶ್ಲಾಘಿಸಿದರು.
ಉಪಾಧ್ಯಕ್ಷರಾದ ಇಸ್ಮಾಯಿಲ್ ಮೇಕಳ್ಳಿಮನಿ, ಸಂಘದ ನಿರ್ದೇಶಕರಾದ ಲಕ್ಕಪ್ಪ ಲ.ಪೂಜೇರಿ, ಗೊಡಚಪ್ಪ ಕ.ಮುರಗೋಡ, ಬಸವರಾಜ ಬ.ಬೆಳಕೂಡ, ವಿಶಾಲ ಸಿ.ಶೀಲವಂತ, ರಾಮಪ್ಪ ಧೂ.ಬಳಿಗಾರ, ಮಾಲಾ ಮೋ.ಬೆಳಕೂಡ, ರುಕ್ಮವ್ವ ಲ.ಪೂಜೇರಿ, ಶಾಂತವ್ವ ಬಾ.ಬೋರಗಲ್, ವ್ಯಾಲೆಂಟೈನ್ ಕೊಡತೆ, ಉಮಾ ಬಾ.ಬೆಳಕೂಡ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಛೇರಿಯ ಪ್ರಧಾನ ವ್ಯವಸ್ಥಾಪಕ ರಮೇಶ್.ವಂಟಗೂಡಿ ಸ್ವಾಗತಿಸಿದರು, ನಿರೂಪಿಸಿದರು ಮತ್ತು ಸೊಸಾಯಿಟಿಯ ಸಿಬ್ಬಂದಿಗಳು ಭಾಗಿಯಾಗಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 