ಕುರಣಿವಾಡಿ: ಇಂದು ಮಾರುತಿದೇವರ ಪ್ರಾಣ ಪ್ರತಿಷ್ಠಾಪನೆ, ಅಂಬಲಿ ಬಿಂದಿಗೆ ಕಾರ್ಯಕ್ರಮ
Kuraniwadi: Maruti Dev's funeral today, Ambali Bindi program
ಲೋಕದರ್ಶನ ವರದಿ
ಯಮಕನಮರಡಿ 20: ಸಮಿಪದ ಕುರಣಿವಾಡಿ ಗ್ರಾಮದ ಪ್ರಭುದೇವರ ಮಲ್ಲಿಕಾರ್ಜುನ ದೇವರ ಹಾಗೂ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ಮಾರುತಿದೇವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಮಾರ್ಚ್ 19 ರಿಂದ ಆರಂಭವಾಗಿದ್ದು, 24ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಡಗರ ಸಂಭ್ರಮದಿಂದ ಜರುಗಲಿದೆ. 21ರಿಂದ ಸೂರ್ಯೋದಯದ ಸಮಯದಲ್ಲಿ ಮಾರುತಿದೇವರ ಪ್ರಾಣ ಪ್ರತಿಷ್ಠಾಪನೆ, ಊರಿನ ತಾಯಂದಿರಿಂದ ಅಂಬಲಿ ಬಿಂದಿಗೆ ಕಾರ್ಯಕ್ರಮ ಜರಗುವುದು ದಿವ್ಯ ಸ್ಯಾನಿಧ್ಯ ಮಹೇಶಾನಂದ ಸ್ವಾಮಿಗಳು ಹಾಗೂ ಸಾನಿಧ್ಯ ಜಗದ್ಗುರು ರಾಚೋಟೇಶ್ವರ ಶಿವಾಚಾರ್ಯರ ಮಹಾಸ್ವಾಮಿಗಳು ಇವರಿಂದ ಆಶೀರ್ವಚನ ಕಾರ್ಯಕ್ರಮ ಹನ್ನೆರಡು ಗಂಟೆಗೆ ಮಹಾಪ್ರಸಾದ ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮ ಜರುಗುವುದು. 22ರಂದು ವಿವಿಧ ಮನೋರಂಜನ ಸ್ಪರ್ಧೆಗಳು ಜರಗುವುದು ಕುದುರೆ ಗಾಡಿ ಷರತ್ತು ಎತ್ತಿನಗಾಡಿ ಶರ್ತು ಟಗರಿನ ಕಾಳಗ ಇನ್ನಿತರ ಕಾರ್ಯಕ್ರಮವು ಜರುಗುವುದು.
23ರಂದು ಬೆಳಿಗ್ಗೆ ಸೂರ್ಯೋದಯಕ್ಕೆ ಪ್ರಭುದೇವರ ಹಾಗೂ ಮಲ್ಲಿಕಾರ್ಜುನ ದೇವರಿಗೆ ಅಭಿಷೇಕ, ಎಂಟು ಗಂಟೆಗೆ ಸಕಲ ವಾದ್ಯ ಮೇಳ ಗಳೊಂದಿಗೆ ಗ್ರಾಮದ ತಾಯಂದಿರಿಂದ ಅಂಬಲಿ ಬಿಂದಿಗೆ ತರುವುದು ದಿವ್ಯ ಸಾನಿಧ್ಯ ಸಿದ್ಧಬಸವ ದೇವರ ಆಶೀರ್ವಚನ ಅಧ್ಯಕ್ಷತೆ ಸತೀಶಣ್ಣ ಜಾರಕಿಹೊಳಿ ಹಾಗೂ ಮುಖ್ಯ ಅತಿಥಿಗಳಾಗಿ ಪ್ರಿಯಾಂಕಾ ಜಾರಕಿಹೊಳಿ ಹಾಗೂ ರಮೇಶಣ್ಣ ಕತ್ತಿ, ಶಶಿಕಾಂತ ಗುರೂಜಿ, ಚೂನ್ನಪ್ಪ ಪೂಜಾರಿ ಭಾಗವಹಿಸುವರು ಮಧ್ಯಾಹ್ನ 12ಗೆ ಮಹಾಪ್ರಸಾದ ಹಾಗೂ ಸಾಯಂಕಾಲ ರಾಧಾಕೃಷ್ಣ ಬೈಲಾಟ ನಡೆಯುವುದು. 24ರಂದು ಬೆಳಿಗ್ಗೆ 6ಗೆ ಶ್ರೀಲಕ್ಷ್ಮಿ ದೇವಿಗೆ ಅಭಿಷೇಕ ಸಾಯಂಕಾಲ 6:30ಕ್ಕೆ ಗ್ರಾಮದ ಸುಮಂಗಲೆಯರಿಂದ ಶ್ರೀಲಕ್ಷ್ಮಿ ದೇವಿಗೆ ಉಡಿ ತುಂಬುವ ಕಾರ್ಯಕ್ರಮ 9 ಗಂಟೆಗೆ ಮಹಾಪ್ರಸಾದ 10 ಗಂಟೆಗೆ ಲಪಂಗರಾಜ ತಂಡದಿಂದ ರಸಮಂಜರಿ ಕಾರ್ಯಕ್ರಮ ಜರುಗುವುದು.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 