ಗುರುದ್ವಾರದ ಮೇಲಿನ ದಾಳಿಗೆ ಕುಮ್ಮಕ್ಕು, ಇಮ್ರಾನ್ ಚಿಸ್ತಿ ಬಂಧನ

ಇಸ್ಲಾಮಾಬಾದ್,  ಜ 6         ಸಿಖ್ಖರ ಪವಿತ್ರ ಯಾತ್ರಾಸ್ಥಳ, ಪಾಕಿಸ್ತಾನದಲ್ಲಿರುವ ನನ್ ಕಾನಾ ಸಾಹಿಬ್ ಗುರುದ್ವಾರದ ಮೇಲಿನ ದಾಳಿಗೆ  ಕುಮ್ಮಕ್ಕು,   ಪ್ರಚೋದನೆ ನೀಡಿದ  ಆರೋಪದಡಿ ಇಮ್ರಾನ್ ಚಿಸ್ತಿಯನ್ನು ಪೊಲೀಸರು  ಬಂಧಿಸಿರುವುದಾಗಿ ವರದಿಯಾಗಿದೆ . 

ನನ್ ಕಾನಾ ಸಾಹಿಬ್ ಗುರುದ್ವಾರದ ಮೇಲೆ ದಾಳಿ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳದ ಪಾಕಿಸ್ತಾನದ ವಿರುದ್ಧ ಭಾರೀ ಪ್ರತಿಭಟನೆ, ಟೀಕೆ ವ್ಯಕ್ತವಾದ ಹಿನ್ನಲೆಯಲ್ಲಿ  ಚಿಸ್ತಿಯನ್ನು ಬಂಧಿಸಲಾಗಿದೆ ಎಂದೂ ವರದಿ ಹೇಳಿದೆ.  

ಘಟನೆಗೆ ಸಂಬಂಧಿಸಿದಂತೆ ಚಿಸ್ತಿ ಮನೆಯಿಂದಲೇ ಕ್ಷಮಾಪಣೆಯ ವೀಡಿಯೋವನ್ನು ಬಿಡುಗಡೆ ಮಾಡಿರುವುದಾಗಿ ವರದಿಯಾಗಿದೆ.   

ಸ್ಥಳೀಯ ನಿವಾಸಿಗಳ ಜತೆಗೂಡಿ ಚಿಸ್ತಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿ ನನ್ ಕಾನಾ ಗುರುದ್ವಾರ ಸಾಹಿಬ್ ಮೇಲೆ ಕಲ್ಲುತೂರಾಟ ನಡೆಸಿ ದಾಂಧಲೆ ನಡೆಸಿರುವ ಘಟನೆ ನಡೆದಿತ್ತು.  

ಚಿಸ್ತಿ ಈಶಾನಾ ಸಹೋದರನಾಗಿದ್ದು, ಈತ ಸಿಖ್ಖ ಯುವತಿ ಜಗ್ಜೀತ್ ಕೌರ್ ಅಪಹರಣದ ಆರೋಪಿಯಾಗಿದ್ದಾನೆ. ನನ್ ಕಾನಾ ಗುರುದ್ವಾರದ ಮೇಲೆ ದಾಳಿ ನಡೆಸಿದ ಗುಂಪು ಸಿಖ್  ವಿರೋಧಿ ಘೋಷಣೆ ಕೂಗಿರುವುದಾಗಿಯೂ  ವರದಿಯಾಗಿದೆ.