ದ್ವಿತೀಯ ಪಿಯುಸಿ ವಿಜ್ಞಾನ ಪರೀಕ್ಷೆಯಲ್ಲಿ ಕುಮಾರಿ ದೀಕ್ಷಾ ಬಂಡಿ ಗೆ ಅತ್ಯುನ್ನತ ಶ್ರೇಣಿ

ದ್ವಿತೀಯ ಪಿಯುಸಿ ವಿಜ್ಞಾನ ಪರೀಕ್ಷೆಯಲ್ಲಿ ಕುಮಾರಿ ದೀಕ್ಷಾ ಬಂಡಿ ಗೆ ಅತ್ಯುನ್ನತ ಶ್ರೇಣಿ  Kumari Deeksha Bandi secures highest rank in Second PUC Science Examination

ಕೊಪ್ಪಳ 10: ಜಿಲ್ಲೆಯ ಗಂಗಾವತಿ ನಗರದ ಶ್ರೀ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಕಾಲೇಜಿ ನಲ್ಲಿ ಪಿಯುಸಿ ದ್ವಿತೀಯ ವಿಜ್ಞಾನ ಪ್ರಸಕ್ತ ಸಾಲಿನ ಪರೀಕ್ಷೆ ಯಲ್ಲಿ 6 ಕ್ಕೆ 582ಅಂಕ ಪಡೆದು  ಶೇಕಡ 97. ಅಂಕಗಳಿಸಿ  ಅತ್ಯುನ್ನತ ಶ್ರೇಣಿ (ಡಿಸ್ಟಿಂಕ್ಷನ್) ಫಲಿತಾಂಶ ಪಡೆದು ಕಾಲೇಜಿಗೆ ಜಿಲ್ಲೆಗೆ ಮತ್ತು ಬಂಡಿ ಕುಟುಂಬಕ್ಕೆ ಕೀರ್ತಿ ತರುವಲ್ಲಿ ಯಶಸ್ವಿಯಾಗಿದ್ದಾಳೆ, ಕುಮಾರಿ ದೀಕ್ಷಾ ಎಂ ,ಬಂಡಿ ಯವರು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನೌಕರರ ಸಹಕಾರ ಪತ್ತಿನ ಸಂಘದ ಕೊಪ್ಪಳ ಕಚೇರಿಯ ಎಫ್ ಡಿ ಎ  ಯಾಗಿ ಕಾರ್ಯ ನಿರ್ವಹಿಸುತ್ತಿರುವ ಮಲ್ಲಿಕಾರ್ಜುನ ಗೌಡ ಬಂಡಿ ಯವರ  ಸುಪುತ್ರೀ ಯಾಗಿದ್ದು ಸದರಿ ವಿದ್ಯಾರ್ಥಿನಿ  ಪಕ್ಕದ ಗದಗ್ ನಿವಾಸಿಯಾಗಿದ್ದು ತನ್ನ ಎಸ್‌ಎಲ್ಸಿ ವಿದ್ಯಾಭ್ಯಾಸ ಗದುಗಿನ ಗುರುಬಸವ ಶಾಲೆಯಲ್ಲಿ ಪಡೆದು ಅಲ್ಲಿಯೂ ಕೂಡ ಉನ್ನತ ಶ್ರೇಣಿಯಲ್ಲಿ ಪಾಸಾಗಿ ನಂತರ ಪಿಯುಸಿ ಪ್ರಥಮ ಮತ್ತು ದ್ವಿತೀಯ ವಿಜ್ಞಾನ  ವ್ಯಾಸಂಗದ ವಿದ್ಯಾಭ್ಯಾಸವನ್ನು ಗಂಗಾವತಿ ನಗರದ ಶ್ರೀ ವಿದ್ಯಾನಿಕೇತನ ಕಾಲೇಜಿನಲ್ಲಿ ಪೂರೈಸಿ  ಪ್ರಸಕ್ತ ಸಾಲಿನಲ್ಲಿ ಪಿಯುಸಿ ವಿಜ್ಞಾನ ದ್ವಿತೀಯ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳಿಸಿ ಗಣನೀಯ ಸಾಧನೆ ಮಾಡಿ ಕೀರ್ತಿ ತರುವಲ್ಲಿ ಯಶಸ್ವಿ ಯಾಗಿರುವ ಸದರಿ ವಿದ್ಯಾರ್ಥಿನಿಯ ಸಾಧನೆಗೆ ಕೊಪ್ಪಳ  ಮತ್ತು ಗದಗ್ ಜಿಲ್ಲೆಯ  ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಿ ಉತ್ತಮ ವ್ಯಾಸಂಗ ಮಾಡಿ ಉನ್ನತ ಮಟ್ಟದ ಸ್ಥಾನವನ್ನು ಅಲಂಕರಿಸಿ ಜಿಲ್ಲೆಗೆ ಮತ್ತು ಈ ನಾಡಿಗೆ ಕೀರ್ತಿ ತರುವಂತಾಗಲಿ  ಎಂದು ಬಂಡಿ ಕುಟುಂಬದ ಸದಸ್ಯರು ಸೇರಿದಂತೆ ಹಲವರು ಶುಭ ಹಾರೈಸಿದ್ದಾರೆ,