ಕುಮಾರೇಶ್ವರ ಆಸ್ಪತ್ರೆ ಮಧುಮೇಹಿ ಮಕ್ಕಳಿಗೊಂದು ಆಶಾಕಿರಣ
Kumareshwara Hospital is a ray of hope for diabetic children
ಬಾಗಲಕೋಟೆ 03: ಕುಮಾರೇಶ್ವರ ಆಸ್ಪತ್ರೆಯಲ್ಲಿ ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ ಎಂಡೋಕ್ರೈನಾಲಾಜಿ ವಿಭಾಗದ ತಜ್ಞವೈದ್ಯರಾದ ಡಾ.ಅನಿಲ ಸತ್ಯರಡ್ಡಿ ಮತ್ತು ಡಾ. ನವೀನ ವೀ. ಚರಂತಿಮಠ ಅವರು ಚಿಕಿತ್ಸೆ ನೀಡುತ್ತಿರುವರು. ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 1 ನೇ ಮಂಗಳವಾರದಂದು ಹೊರರೋಗಿಗಳ ವಿಭಾಗ ಒಂದರಲ್ಲಿ ಮಕ್ಕಳನ್ನು ತಪಾಸಿಸಿ ಉಚಿತವಾಗಿ ಇನ್ಸುಲಿನ್ ಓಷಧಿಯನ್ನು ನೀಡುವುದರ ಜೊತೆಗೆ ಮಕ್ಕಳಿಗೆ ದೈನಂದಿನ ಚಟುವಟಿಕೆ, ಆಹಾರ ಪದ್ಧತಿಗಳನ್ನು ಕಲಿಸಿಕೊಡುತ್ತಿರುವರು. 2021 ರಿಂದ ಇಲ್ಲಿಯವರೆಗೆ 960 ಮಕ್ಕಳಿಗೆ ಮಧುಮೇಹ ಕಾಯಿಲೆ ಗುರುತಿಸಿ ಉಚಿತ ಇನ್ಸುಲಿನ್ ಓಷಧಿಯನ್ನು ನೀಡಿರುವರು. ಈ ವಿಭಾಗದಲ್ಲಿ ಮಧುಮೇಹಿ ಮಕ್ಕಳಿಗೆ ಉಚಿತ ರಕ್ತ ತಪಾಸಣೆ ಹಾಗೂ ಮಧುಮೇಹಿ ಸಂಬಂಧಿತ ಸಂಪೂರ್ಣ ಕಾಯಿಲೆಗೆ ಚಿಕಿತ್ಸೆ ಉಚಿತವಾಗಿ ನೀಡಲಾಗುತ್ತಿದೆ.
ಪ್ರತಿ ತಿಂಗಳಿನಂತೆ ಈ ತಿಂಗಳ ಒಂದನೇ ಮಂಗಳವಾರ ದಿನಾಂಕ 02.09.2025 ರಂದು ಕುಮಾರೇಶ್ವರ ಆಸ್ಪತ್ರೆಯಲ್ಲಿ ಮಧುಮೇಹದಿಂದ ಬಳಲುತ್ತಿರುವ ಒಟ್ಟು 60 ಮಕ್ಕಳಿಗೆ ಏರಿಸ್ ಲೈಫ್ ಸೈನ್ಸ್ ಕಂಪನಿ ಕೊಡಮಾಡಿದ ಇನ್ಸುಲಿನ್ ಓಷಧಿ ಕಿಟ್‌ಗಳನ್ನು ಉಚಿತವಾಗಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಭುವನೇಶ್ವರಿ ಯಳಮಲಿ ಅವರು ಮಾತನಾಡಿ ‘ಕುಮಾರೇಶ್ವರ ಆಸ್ಪತ್ರೆ ಮಧುಮೇಹಿ ಮಕ್ಕಳಿಗೆ ಆಶಾಕಿರಣವಾಗಿದೆ. ಎಂಡೋಕ್ರೈನಾಲಜಿ ವಿಭಾಗದಲ್ಲಿ ತಜ್ಞ ವೈದ್ಯರು ಮಧುಮೇಹಿ ಮಕ್ಕಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡುತ್ತಿರುವರು. ಪ್ರತಿತಿಂಗಳ ಮೊದಲ ಮಂಗಳವಾರದಂದು ಮಕ್ಕಳಿಗೆ ಉಚಿತ ಇನ್ಸುಲಿನ್ ಓಷಧಿ ವಿತರಿಸಲಾಗುತ್ತಿದೆ. ಸಾರ್ವಜನಿಕರು ಈ ವೈದ್ಯಕೀಯ ಸೌಲಭ್ಯದ ಸದುಪಯೋಗ ಪಡೆಯಬೇಕು’ ಎಂದು ಹೇಳಿದರು.
ಮಧುಮೇಹ ತಜ್ಞವೈದ್ಯರಾದ ಡಾ. ಅನೀಲ ಸತ್ಯರೆಡ್ಡಿ ಪ್ರಸ್ತಾವಿಕ ಮಾತನಾಡಿದರು. ಏರಿಸ್ ಲೈಫ್ ಸೈನ್ಸ್ ಕಂಪನಿಯ ಮಲ್ಲಿಕಾರ್ಜುನ ಬಗಲಿ ಸ್ವಾಗತಿಸಿದರು. ವೇದಿಕೆಯ ಮೇಲೆ ಮಧುಮೇಹ ತಜ್ಞವೈದ್ಯರಾದ ಡಾ. ನವೀನ ವೀ. ಚರಂತಿಮಠ, ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಅಶೋಕ ಬಡಕಲಿ, ಡಾ.ರಮೇಶ ಪೋಳ, ಡಾ.ವಿನಯಕುಮಾರ ಮತ್ತು ಡಾ.ಅರುಣ ಕಟ್ಟಿ ಉಪಸ್ಥಿತರಿದ್ದರು.
ಬ.ವಿ.ವಿ ಸಂಘದ ಮಾನ್ಯ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಸಿ.ಚರಂತಿಮಠ ಹಾಗೂ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷರಾದ ಶ್ರೀ.ಅಶೋಕ ಎಮ್. ಸಜ್ಜನ (ಬೇವೂರ) ರವರು ಈ ಕಾರ್ಯಕ್ರಮವನ್ನು ಆಯೋಜಿಸಿದ ಎಂಡೋಕ್ರೈನಾಲಾಜಿ ವಿಭಾಗದ ತಜ್ಞವೈದ್ಯರನ್ನು ಶ್ಲಾಘಿಸಿರುವರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 