ಮುಷಾಯೆರಾ ಕಾರ್ಯಕ್ರಮದ ಯಶಸ್ವಿನ ರೂವಾರಿ ಬದಿಯುದ್ದೀನ್ ಅಹಮದ್ ನವೀದ ಗೆ ಸನ್ಮಾನ
Kudos to Ruwari Badiuddin Ahmed Naveeda for the success of the Mushayera program
ಕೊಪ್ಪಳ 04: ಫೀರ್ ದೋಸ ಸಾಂಸ್ಕೃತಿಕ ಕ್ರೀಡೆ ಹಾಗೂ ತರಬೇತಿ ಸಂಸ್ಥೆ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಜರುಗಿದ ಅಖಿಲ ಭಾರತ ಕವಿ ಸಮ್ಮೇಳನ ಹಾಗೂ ಉರ್ದು ಮುಷಾಯೆರಾ ಕಾರ್ಯಕ್ರಮದ ಯಶಸ್ವಿನ ರೂವಾರಿ ಉರ್ದು ಸಾಹಿತಿ ಹಾಗೂ ವಾಗ್ಮಿ ಮೊಹಮ್ಮದ್ ಬದಿಯುದ್ದೀನ್ ಅಹಮದ್ ನವೀದ ರವರಿಗೆ ಆಲ್ ಇಂಡಿಯಾ ಮುಷಾಯೆರಾ ಕಮಿಟಿ ಕೊಪ್ಪಳ ವತಿಯಿಂದ ಅದ್ದೂರಿಯಾಗಿ ಸನ್ಮಾನಿಸಿ ಶುಭ ಕೋರಲಾಯಿತು.
ಸೋಮವಾರ ರಾತ್ರಿ ವೇಳೆಯಲ್ಲಿ ಉರ್ದು ಕವಿ ವಿಜಾರತ್ ಅಲಿ ತಾಯರ್ ಇವರ ಹಣ್ಣಿನ ಅಂಗಡಿ ಆವರಣದಲ್ಲಿ ಏರಿ್ಡಸಿದ ಅಭಿನಂದನಾ ಸಭೆಯಲ್ಲಿ ಕಾರ್ಯಕ್ರಮಕ್ಕೆ ಶ್ರಮಿಸಿದ ಪ್ರತಿಯೊಬ್ಬರಿಗೂ ಅಭಿನಂದಿಸಿದ ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ರೂವಾರಿ ಯಾಗಿರುವ ಹಾಗೂ ಮುಶಾಯೆರಾ ಕಾರ್ಯಕ್ರಮ ದ ನಿರೂಪಣೆ ಯ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಿ ಕಾರ್ಯಕ್ರಮವನ್ನು ನೀರೀಕ್ಷೆಗೂ ಮೀರಿ ಯಶಸ್ವಿಗೊಳಿಸಿರುವುದಕ್ಕೆ ಮೊಹಮ್ಮದ್ ಬದಿಯುದ್ದೀನ್ ಅಹಮದ್ ನವೀದ ರವರ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಲಾಯಿತು ಹಾಗೂ ಅವರನ್ನು ಸಮಾಜದ ಪರವಾಗಿ ಅಭಿನಂದಿಸಿ ಶುಭ ಕೋರಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಉರ್ದು ಸಾಹಿತಿ ಹಾಗೂ ನಿವೃತ್ತ ಪ್ರಾಧ್ಯಾಪಕ ಅನ್ವರ್ ಹುಸೇನ್, ಹಿರಿಯ ಸಮಾಜ ಸೇವಕ ಸಮದ ಸಿದ್ದಿಕಿ ,ಉರ್ದು ಕವಿ ವಿಜಾರತ್ ಅಲಿ ತಾಯರ, ನಗರ ಸಭೆಯ ಮಾಜಿ ಸದಸ್ಯ ಎಂ ಮಾನ್ವಿ ಪಾಶಾ, ಸಮಾಜದ ಮುಖಂಡ ಹುಸೇನ್ ಪೀರ ಮುಜಾವರ್, ಯುವ ನಾಯಕ ಹಬೀಬ್ ಖಾನ್ , ಗಾಯಕ ದಾವುದ ಹುನಗುಂದ , ಮಿಲ್ಲತ್ ಶಿಕ್ಷಣ ಸಂಸ್ಥೆಯ ಕಾರ್ಯ ಅಧ್ಯಕ್ಷ ಸಯ್ಯದ್ ಇಮಾಮ್ ಹುಸೇನ್ ಸಿಂದೋಗಿ , ಕಾರ್ಯನಿರ್ವಾಹಕ ಸಂಚಾಲಕ ಅಬ್ದುಲ್ ಅಜೀಜ್ ಮಾನ್ವಿ ಕರ್, ಯುವ ನಾಯಕ ಸಿರಾಜ್ ಲಾಠಿ ಗಾಯಕ ಹಾಗೂ ಜೂನಿಯರ್ ಮೊಮ್ಮದ್ ರಫಿ ಸಿದ್ದಿಕ ಹುಸೇನ್ ಕರ್ಕಿಹಳ್ಳಿ ಮತ್ತು ಫಿರ್ ದೋಸ್ ಸಂಸ್ಥೆಯ ಕಾರ್ಯದರ್ಶಿ ಹಾಗೂ ಭಾವಿ ಅಧ್ಯಕ್ಷ ಮೊಹಮ್ಮದ್ ಏಜಾಜ್ ಅಹಮದ್ ಹಾಗೂ ಹಿರಿಯ ಪತ್ರಕರ್ತ ಎಂ ಸಾಧಿಕ್ ಅಲಿ ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು,
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 