ಗೋರಖ್‌ಪುರ ಎಡಿಜಿಪಿಗೆ ಸನ್ಮಾನ
Kudos to Gorakhpur ADGP
ಹುಬ್ಬಳ್ಳಿ 31: ನಗರದ ಜೈನ್ ಮರುಧರ್ ಸಂಘದಲ್ಲಿ ಚಾತುರ್ಮಾಸ ಕೈಗೊಂಡಿರುವ ಸಾಧ್ವಿ ಮೋಕ್ಷ ಮಾಲಾಶ್ರೀ ಅವರ ಪೂರ್ವಾಶ್ರಮದ ಸಹೋದರರು ಹಾಗೂ ಉತ್ತರ ಪ್ರದೇಶ ಕೆಡರ್‌ನ ಗೋರಖ್‌ಪುರ್ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ ಮಾಂಗೀಲಾಲಜಿ ಜೈನ್ (ಆಹೋರ್) ದಂಪತಿಗಳು ಹುಬ್ಬಳ್ಳಿಗೆ ಆಗಮಿಸಿದ್ದರು.
ಸಾಧ್ವೀಜಿಯವರನ್ನು ಭೇಟಿಯಾಗಿ ದರ್ಶನ ವಂದನೆ ನೆರವೇರಿಸಿ ಪ್ರವಚನ ಆಲಿಸಿದರಲ್ಲದೇ ಮರುಧರ್ ಸಂಘದಿಂದ ನಡೆಯುತ್ತಿರುವ ಧರ್ಮಕಾರ್ಯ ಮತ್ತು ಸಮಾಜಸೇವಾ ಚಟುವಟಿಕೆಗಳನ್ನು ಪ್ರಶಂಸಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಇಂದರ್‌ಮಲ್ ಜೈನ್, ಕಾರ್ಯದರ್ಶಿ ದಿನೇಶ ಸಂಘವಿ, ಟ್ರಸ್ಟಿಗಳಾದ ಚಂಪಲಾಲ್ ಜೈನ್, ವೀರಚಂದ್ ಜೈನ್, ಪಾರಸಮಲ್ ಭನ್ಸಾಲಿ, ವೀನೀತ್ ಜೈನ್, ಸುರೇಶ್ ಜೈನ್ ಮತ್ತು ಸಮಾಜಸೇವಕರು ಹಾಗೂ ಪ್ರಧಾನಮಂತ್ರಿ 15 ಸೂತ್ರಿಯ ಅಲ್ಪಸಂಖ್ಯಾತ ಕಲ್ಯಾಣ ಕಾರ್ಯಕ್ರಮ ಸಮಿತಿ ಸದಸ್ಯ ಮಹೇಂದ್ರ ಸಿಂಘಿ ಮುಂತಾದವರು ಇದ್ದರು. ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 