ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಸಮೀಪದಲ್ಲಿ ಕೃಷ್ಣಾ ನದಿ ಮೈದುಂಬಿ ನಿಂತಿದೆ

Krishna river: Manjari village of Chikkodi taluk

ವರದಿ: ಸಂತೋಷಕುಮಾರ ಕಾಮತ್  

ಮಾಂಜರಿ 10: ಬೇಸಿಗೆ ಕಾಲ ಸದ್ಯದಲ್ಲಿಯೇ ಆರಂಭವಾಗುತ್ತಿದ್ದು ಈ ಬೇಸಿಗೆಯಲ್ಲಿ ಕುಡಿಯಲು ಹಾಗೂ ನದಿ ಪಾತ್ರಕ್ಕೆ ಅಂಟಿಕೊಂಡಿರುವ ರೈತರ ಜಮೀನುಗಳಿಗೆ ನೀರಿನ ಕೊರತೆ ಆಗುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ. 

ಪ್ರತಿ ವರ್ಷ ಮಾರ್ಚ್‌ ಮೊದಲ ವಾರದಲ್ಲಿಯೇ ಕೇವಲ 2 ಟಿಎಂಸಿ ಯಷ್ಟು ಮಾತ್ರ ಹಿಪ್ಪರಗಿ ಜಲಾಶಯದಲ್ಲಿ ನೀರು ಸಂಗ್ರಹವಿರುತ್ತಿತ್ತು. ಆದರೆ ಈ ಭಾರಿ ಮಾರ್ಚ್‌ ಮೊದಲ ವಾರದಲ್ಲಿ3.5 ಟಿಎಂಸಿ ನೀರು ಸಂಗ್ರಹವಿದೆ. ಆದರೂ ಬಳಕೆ ಮಾಡುವವರು ಹಿತಮಿತವಾಗಿ ಬಳಸಿದರೆ ಈ ಬೇಸಿಗೆಯಲ್ಲಿ ಯಾವುದೇ ಕುಡಿಯುವ ನೀರಿನ ಕೊರತೆ ಕಂಡುಬರುವುದಿಲ್ಲ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. 

ಹಿಪ್ಪರಗಿ ಜಲಾಶಯ ಒಟ್ಟು 6 ಟಿಎಂಸಿ ಸಾಮರ್ಥ್ಯಹೊಂದಿದೆ. ಈಗ ಎಲ್ಲಾ 12 ಗೇಟ್ ಗಳನ್ನು ಬಂದಮಾಡಲಾಗಿದೆ. ಜಲಾಶಯದಲ್ಲಿ ಈಗ ಒಟ್ಟು 3.5 ಟಿಎಂಸಿ ನೀರು ಸಂಗ್ರಹವಿದ್ದು, ಇದೇ ನೀರನ್ನು ಜಮಖಂಡಿ ಅಥಣಿ ರಾಯಬಾಗ್ ಕಾಗವಾಡ ಚಿಕ್ಕೋಡಿ ತಾಲೂಕಿನ  ನಗರದ ಹಾಗೂ ಬಹುಹಳ್ಳಿ ಕುಡಿವ ನೀರಿನ ಯೋಜನೆ ಸೇರಿದಂತೆ ಚಿಕ್ಕೋಡಿ  ಪಟ್ಟಣಗೆ ನದಿ ನೀರನ್ನೆ ಅವಲಿಂಬಿಸಿವೆ. ಈಗಿರುವನೀರು ಸಮರ​‍್ಕವಾಗಿ ಬಳಸಿಕೊಂಡರೆ ಬೇಸಿಗೆ ಮುಗಿಯುವರೆಗೂ ನೀರಿನ ತೊಂದರೆಯಾಗುವುದಿಲ್ಲ. 

ಮಾ.13 ಮತ್ತು ಮಾ. 14 ಹೋಳಿ ಹಬ್ಬ ಇರುವುದರಿಂದ ಸಾರ್ವಜನಿಕರು ಬಣ್ಣದ ನೀರು ಹಾಗೂ ಬಟ್ಟೆ ಒಗೆಯುವುದು ಹಾಗೂ ಬಣ್ಣ ಹಚ್ಚಿಕೊಂಡು ನೀರೊಳಗೆ ಇಳಿದು ಸ್ನಾನ ಮಾಡುವುದು ಮಾಡಬಾರದು, ಯಾಕೆಂದರೆ ನೀರು ಹರಿಯುವುದಿಲ್ಲ, ನಿಂತನೀರಾಗಿರುವುದರಿಂದ ಅದರಲ್ಲಿ ಹಾನಿಕಾರಕ ಕೆಮಿಕಲ್ ಮಿಶ್ರಣವಾಗುವ ಸಾಧ್ಯತೆ ಇದೆ. ಅದೇ ನೀರು ಅವಳಿ ನಗರಕ್ಕೆ ಕುಡಿಯಲು ಬರುತ್ತದೆ. ಇದರಿಂದ ಆರೋಗ್ಯದ ಮೇಲೆ ಹಾನಿಯಾಗುವ ಸಾಧ್ಯತೆ ಇದೆ. ಒಂದುವೇಳೆ ನೀರೊಳಗೆ ಇಳಿದು ಸ್ನಾನ ಮಾಡಿದರೆ ನಗರಸಭೆ ಕಾನೂನು ಕ್ರಮ ಜರುಗಿಸಲಾಗುವುದು, ಮತ್ತು ನದಿದಡದಲ್ಲಿ ಕಾವಲುಗಾರರನ್ನು ಕೂಡಾ ನಿಲ್ಲಿಸಿ ದಂಡವಿಧಿಸಲಾಗುವುದು. ನೀರು ತೆಗೆದುಕೊಂಡು ಹೊರಗಡೆ ಸ್ನಾನ ಮಾಡಬಹುದು ಎಂದು  ಅಧಿಕಾರಿಗಳು ತಿಳಿಸಿದಾರೆ. 

ನದಿಯಲ್ಲಿ ಈಗ ಸಂಗ್ರಹವಿರುವ ನೀರು ಬೇಸಿಗೆವರೆಗೂ ಸಾಕಾಗುತ್ತದೆ. ಒಂದುವೇಳೆ ಕೊರತೆ ಬಿದ್ದರು ಕೋಯ್ತಾ ಹಾಗೂ ಹಿಡಕಲ್ ಜಲಾಶಗಳಿಂದ ನೀರು ಬಿಡುವ ಆಶಾಭಾವವಿದೆ. ಚಿಕ್ಕೋಡಿ  ನಗರದ ಹಲವಾರು ವಾರ್ಡ್‌ ಗಳಲ್ಲಿಕೊಳವೆ ಬಾವಿಗಳು ಮತ್ತು ನೀರು ತುಂಬಿರುವ ಬಾವಿಗಳಿಂದ ತಾತ್ಕಾಲಿಕ ಪೈಪ್ ಲೈನ್ ವ್ಯವಸ್ಥೆ ಈಗಾಗಲೇ ಸಜ್ಜಾಗಿದೆ. ಹಾಗೂ ಬರನಿರ್ವಹಣೆ ಅನುದಾನ ಕೂಡಾ ಇರುವುದರಿಂದ, ನೀರಿನ ಕೊರತೆಯಾಗದ ಹಾಗೆ ಪೂರ್ವನಿಯೋಜಿತವಾಗಿ ಕ್ರಿಯಾ ಯೋಜನೆಗಳನ್ನು ತಯಾರಿಸಿ ಕುಡಿಯುವ ನೀರಿನ ಯಾವುದೇ ತೊಂದರೆಯಾಗದ ಹಾಗೆ ನಗರಸಭೆ ಈಗಾಗಲೇ ಸಂಪೂರ್ಣ ಸನ್ನದ್ದವಾಗಿದೆ. ಸಾರ್ವಜನಿಕರು ಸಂಬಂಧಪಟ್ಟ ಗ್ರಾಮ ಪಂಚಾಯತ್ ಮತ್ತು ಪಟ್ಟಣಗಳಿಗೆ  ಕೈಜೋಡಿಸಿ ಹಿತಮಿತವಾಗಿ ನೀರು ಬಳಸಿದರೆ ಈ ಬೇಸಿಗೆಯನ್ನು ಯಶಸ್ವಿಯಾಗಿ ನಿಭಾಯಿಸಲಾಗುತ್ತದೆ. 

ಸುಭಾಷ್ ಸಂಪಗಾವಿ  ಉಪವಿಭಾಗೀಯ ಅಧಿಕಾರಿಗಳು ಚಿಕ್ಕೋಡಿ