ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ

ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ Krishna Janmashtami at Shri B. M. Patil Public School

ವಿಜಯಪುರ 17: ನಗರದ ಬಿ. ಎಲ್‌. ಡಿ. ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಕೃಷ್ಣ ಜನ್ಮಾಷ್ಟಮಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.    

ಪ್ರಾಥಮಿಕ ಹಂತದ ಮಕ್ಕಳು ರಾಧಾ ಕೃಷ್ಣನ ವೇಷದಲ್ಲಿ ಬಂದು ನರ್ತಿಸಿದರೆ, ದ್ವಾಪರ ಯುಗವೇ ದರೆಗಿಳಿದಂತಾಗಿತ್ತು.  ನಂತರ ಪ್ರೌಢಶಾಲೆ ವಿಭಾಗದ ನಾಲ್ಕೂ ಸದನಗಳ ವಿದ್ಯಾರ್ಥಿಗಳಿಗೆ ಮೊಸರಿನ ಮೊಡಕೆ ಒಡೆಯುವ ಸ್ಪರ್ಧೆಯನ್ನು ಏರಿ​‍್ಡಸಲಾಗಿತ್ತು.  ಪಿರಾಮಿಡ್ ಆಕೃತಿಯಲ್ಲಿ ಒಬ್ಬರ ಮೇಲೊಬ್ಬರು ನಿಂತು, ಮೊಸರಿನ ಮೊಡಕೆ ಒಡೆಯುವ ಸನ್ನೀವೇಶವಂತೂ ಮೈನವಿರೇಳುವಂತೆ ಮಾಡಿತು.  ಮೊಸರಿನ ಮೊಡಕೆ ಒಡೆಯಲು ಹತ್ತುವ ಬೀಳುವ ಮೋಜು ಎಲ್ಲರಿಗೂ ಮನರಂಜನೆಯನ್ನುಂಟು ಮಾಡಿತು.  ಅಲ್ಲದೇ, ಎಲ್ಲ ವಿದ್ಯಾರ್ಥಿಗಳು ಬಾಲಗೋಪಾಲನಂತೆ ಕಂಗೊಳಿಸಿದರು.   

ಈ ಸಂದರ್ಭದಲ್ಲಿ ಶಾಲೆಯ ಪ್ರಾಚಾರ್ಯ ಡಾ. ಶೈಜು ಕೆ. ನಾಯರ, ಹಿರಿಯ ಕಾರ್ಯ ಸಂಯೋಜಕಿ ದೀಪಾ ಜಂಬೂರೆ, ವಿದ್ಯಾರ್ಥಿಗಳು, ಪೋಷಕರು, ಶಾಲೆಯ ಬೋಧಕ ಹಾಗೂ ಬೋಧಕರ ಹೊರತಾದ ಸಿಬ್ಬಂದಿ ಉಪಸ್ಥಿತರಿದ್ದರು.