ಪಾರ್ವತಿ ಲೇಓಟ್ ರಾಧಾಕೃಷ್ಣ ನಗರದಲ್ಲಿ ಕೃಷ್ಣ ಜನ್ಮಾಷ್ಟಮಿ
Krishna Janmashtami at Parvati Layout Radhakrishna Nagar
ಹರಿದು ಬಂದ ಭಕ್ತ ಸಾಗರ, ಜನಾಕರ್ಷಿಸಿದ ರಾಧೆ ಕೃಷ್ಣ ವೇಷಧಾರಿ ಮಕ್ಕಳು
ರಾಣೇಬೆನ್ನೂರು 17: ಇಲ್ಲಿನ ಹುಣಸಿಕಟ್ಟಿ ರಸ್ತೆಯ, ಪಾರ್ವತಿ ಲೇಓಟ್ ನಗರದಲ್ಲಿರುವ ನಗರದ, ಏಕೈಕ ರಾಧಾ-ಕೃಷ್ಣ ಮಂದಿರದಲ್ಲಿ, ಶನಿವಾರ, ಅತ್ಯಂತ ಭಕ್ತಿ ಭಾವ, ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕೃಷ್ಣ ಜನ್ಮಾಷ್ಟಮಿ ಧಾರ್ಮಿಕ ಕಾರ್ಯಕ್ರಮವು ಸಡಗರ ಮತ್ತು ಸಂಭ್ರಮದೊಂದಿಗೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ, ದೇವಸ್ಥಾನದ ಧರ್ಮದರ್ಶಿ ಕೊಟ್ರೇಶ್ ರಂಗನಾಥ ಮೆಹರವಾಡೆ ಅವರು, ಭಾರತೀಯ ಇತಿಹಾಸ ಪರಂಪರೆಯಲ್ಲಿ, ಆಯಾ ಸಂದರ್ಭಕ್ಕನುಸಾರವಾಗಿ, ಧರ್ಮ ಜ್ಞಾನಕ್ಕಾಗಿ, ಪುಣ್ಯ, ಪುರುಷರು, ಶರಣರು, ಸಂತರು, ಮಠ ಪೀಠಾಧಿಪತಿಗಳು ಸಂತ ಶರಣರು ಅವತರಿಸಿ ಬಂದಿದ್ದಾರೆ.
ಶ್ರೀ ಕೃಷ್ಣ ರು ಮನುಕುಲದ ಉದ್ಧಾರಕ್ಕಾಗಿ ತಮ್ಮದೇ ಆದ ರೂಪದಲ್ಲಿ ಮಾನವ ಕುಲದ ಉದ್ಧಾರಕ್ಕಾಗಿ, ನೀತಿ ಮತ್ತು ಧರ್ಮ ನಿಯಮಾವಳಿ ಸೂಕ್ಷ್ಮತೆಯಿಂದ ಘೋಷಿಸಿ ಕೌಶಲ್ಯತೆಯ ಮಾರ್ಗದರ್ಶನ ನೀಡಿದ್ದಾರೆ. ಎಂದ ಅವರು ಶ್ರೀ ಕೃಷ್ಣನು ನಂಬಿದ ಭಕ್ತರಿಗೆ ಎಂದಿಗೂ ಕೈ ಬಿಡುವುದಿಲ್ಲ ಎಂದರು. ತಮ್ಮ ಕುಟುಂಬದವರು ಎಂದಿನಿಂದಲೂ ಧಾರ್ಮಿಕ ಸೇವಾ ಮನೋಭಾವದವರು, ಅಂದು ಕುಟುಂಬದವರು ಸಂಕಲ್ಪಿಸಿದಂತೆ, ಭಗವಂತನ ಇಚ್ಛೆಯಂತೆ, ಕಳೆದ 9 ವರ್ಷಗಳ ಹಿಂದೆ ದೇವಾಲಯವು ನಿರ್ಮಿಸಲಾಗಿದ್ದು, ರಾಧೆ ಮತ್ತು ಕೃಷ್ಣನ ಆರಾಧನೆಯ ಮೂಲಕ ಧಾರ್ಮಿಕ ಸೇವಾ ಕಾರ್ಯದಲ್ಲಿ ಮುಂದಾಗಿದ್ದೇವೆ ಎಂದರು.
ಜನ್ಮಾಷ್ಟಮಿ ನಿಮಿತ್ತ ಮಂದಿರದಲ್ಲಿ ಮಹಾ ರುದ್ರಾಭಿಷೇಕ, ಅಲಂಕಾರ, ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿಸಲಾಯಿತು, ಸಾವಿರಾರು ಭಕ್ತರಿಗೆ ಮಹಾಪ್ರಸಾದ ವಿತರಿಸಲಾಯಿತು. ನೂರಾರು ಮಕ್ಕಳು ಶ್ರೀ ಕೃಷ್ಣ ಮತ್ತು ರಾಧೆಯ ವೇಷಧಾರಿ ರೂಪಕಗಳು ಮಂದಿರದ ಆವರಣದಲ್ಲಿ ಧಾವಿಸಿ ಪ್ರದರ್ಶನ ನೀಡಿದ್ದು, ಸೇರಿದ್ದ ಭಕ್ತರ ಗಮನ ಸೆಳೆದವು. ಸೇವಾ ಕಾರ್ಯದ ಮುಂಚೂಣಿಯಲ್ಲಿ ಭಕ್ತ ಧರ್ಮದರ್ಶಿಗಳಾದ, ರಾಜೇಶ ಮೆಹರವಾಡೆ, ಜಗದೀಶ ಮೆಹರವಾಡೆ, ವೆಂಕಟೇಶ್ ಮೆಹರವಾಡೆ, ಅನ್ನಪೂರ್ಣ ಬಾಯಿ ಮೆಹರವಾಡೆ, ಎಸ್.ಆರ್. ಪ್ರತಾಪ್, ವಿಶ್ವನಾಥ ಬ್ಯಾಡಗಿ, ದೀಪಕ ಕಟಗಿಹಳ್ಳಿಮಠ, ಲಿಂಗರಾಜ ಅರಕೇರಿ, ಶ್ಯಾಮ ಗುಪ್ತಾ, ಮುಕೇಶ ಸಂಘವಿ ಸೇರಿದಂತೆ ಮತ್ತಿತರ ಗಣ್ಯರು, ಸೇವಾ ಕಾರ್ಯಕರ್ತರು ಸಾವಿರಾರು ಭಕ್ತರು, ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 