ಕೃಷಿ ಭಾಗ್ಯ ಯೋಜನೆ ಆರಂಭ

ಕೃಷಿ ಭಾಗ್ಯ ಯೋಜನೆ ಆರಂಭ Krishi Bhagya scheme launched

ಲೋಕದರ್ಶನ ವರದಿ 

ಗೋಕಾಕ 18:  ಗೋಕಾಕ ಹಾಗೂ ಮೂಡಲಗಿ ತಾಲ್ಲೂಕುಗಳಲ್ಲಿ ರೈತರಿಗಾಗಿ ಕೃಷಿ ಭಾಗ್ಯ ಯೋಜನೆ ಆರಂಭಗೊಂಡಿದೆ. ಎರಡೂ ತಾಲೂಕಿನ ರೈತರು ಸದುಪಯೋಗ ಪಡೆಯಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಎಮ್‌. ಎಮ್‌. ನದಾಫ್ ಅವರು ರೈತರಲ್ಲಿ ಕೋರಿದ್ದಾರೆ. 

ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಸನ್ 2026-27 ನೇಯ ಸಾಲಿನಲ್ಲಿ ಕೃಷಿ ಇಲಾಖೆಯಿಂದ ಎಲ್ಲಾ ವರ್ಗಗಳ ರೈತರಿಗೆ ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ, ಬದು ನಿರ್ಮಾಣ, ಪಾಲಿಥಿನ್ ಹೊದಿಕೆ, ಕೃಷಿ ಹೊಂಡದ ಸುತ್ತಲು ತಂತಿ ಬೇಲಿ ಹಾಗೂ ಡೀಜೆಲ್ ಇಂಜಿನ್ ಗಳನ್ನು ರಿಯಾಯಿತಿ ದರದಲ್ಲಿ ಮಾಡಿಕೊಳ್ಳಲು ಅವಕಾಶವಿದೆ.  ಸಾಮಾನ್ಯ ರೈತರಿಗೆ ಶೇಕಡಾ 80ಅ ಸಹಾಯಧನ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ ಶೇಕಡಾ 90ಅ ಸಹಾಯಧನ ನೀಡಲಾಗುತ್ತಿದೆ.   

ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ಹಾಗೂ ಇತರೆ ಘಟಕಗಳನ್ನು ಮಾಡಿಕೊಳ್ಳವ ಆಸಕ್ತ  ರೈತರು ಸಮೀಪದ ರೈತ ಸಂಪರ್ಕ ಕೇಂದ್ರ ಗೋಕಾಕ, ಅರಭಾವಿ ಮತ್ತು ಕೌಜಲಗಿ ಗಳಲ್ಲಿ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ಮಾಡಲು  ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.