ಬೆಂಗಳೂರು,
ಏ.13, ಇಲ್ಲಿನ ಮಲ್ಲೇಶ್ವರಂನ ಕೆ. ಸಿ. ಜನರಲ್ ಆಸ್ಪತ್ರೆ ಗೆ ಕೊರೊನಾ
ವೈರಸ್ ಸೋಂಕಿನಿಂದ ದಾಖಲಾಗಿದ್ದ ವ್ಯಕ್ತಿಯೊಬ್ಬರು ಗುಣಮುಖರಾಗಿ ಮನೆಗೆ ತೆರಳುವ
ಮುನ್ನ ಆಸ್ಪತ್ರೆಯ ಸಿಬ್ಬಂದಿ ಚಪ್ಪಾಳೆ ತಟ್ಟಿ ಅವರನ್ನು ಬೀಳ್ಕೊಟ್ಟಿದ್ದಾರೆ.ಈ ವೀಡಿಯೋವನ್ನು ಆರೋಗ್ಯ ಸಚಿವ ಶ್ರೀರಾಮುಲು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್‌ಲೋಡ್ ಮಾಡಿ, ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಕೋವಿಡ್–19ನಿಂದ ಚೇತರಿಸಿಕೊಂಡ ವ್ಯಕ್ತಿಯು, ಚಿಕಿತ್ಸೆ ನೀಡಿದ ವೈದ್ಯರ ಕಾಲಿಗೆ ಬಿದ್ದು ಧನ್ಯವಾದ ಅರ್ಪಿಸಿಸುತ್ತಿರುವುದು ವೀಡಿಯೋದಲ್ಲಿದೆ. ಕೆ.ಸಿ
ಜನರಲ್ ಆಸ್ಪತ್ರೆಯಲ್ಲಿ ಕೋವಿಡ್–19ನಿಂದ ಗುಣಮುಖರಾಗಿ ಹೊರಟಾಗ, ವೈದ್ಯರು ಮತ್ತು
ಸಿಬ್ಬಂದಿ ಈ ವ್ಯಕ್ತಿಯನ್ನು ಪ್ರೀತಿಪೂರ್ವಕವಾಗಿ ಬೀಳ್ಕೊಡುತ್ತಾರೆ. ಈ
ಸಂದರ್ಭದಲ್ಲಿ, ವ್ಯಕ್ತಿಯು ಹಗಲಿರುಳು ತನ್ನ ಸೇವೆಗೈದು ಗುಣಪಡಿಸಿದ ವೈದ್ಯರ
ಕಾಲಿಗೆರಗುತ್ತಾರೆ. ನಮ್ಮ ಭಾರತೀಯ ಸಂಸ್ಕೃತಿಯೆಂದರೆ ಇದಲ್ಲವೇ ನಿಜಕ್ಕೂ
ಹೆಮ್ಮೆಯೆನಿಸುತ್ತದೆ.' ಎಂದು ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.