ಕೊವಿದ್‍ -19 ದಿಢೀರ್ ಉಲ್ಬಣ ಹಿನ್ನೆಲೆ: ಶ್ರೀಲಂಕಾದಲ್ಲಿ ರಾಷ್ಟ್ರವ್ಯಾಪಿ ಕರ್ಫ್ಯೂ ಘೋಷಣೆ

ಕೊಲಂಬೊ, ಮಾರ್ಚ್ 20,ದ್ವೀಪ ದೇಶದಲ್ಲಿ ಕೊವಿದ್‍-19 ಹರಡುವುದನ್ನು ತಡೆಯಲು ಶ್ರೀಲಂಕಾ ಸರ್ಕಾರ ರಾಷ್ಟ್ರವ್ಯಾಪಿ ಕರ್ಫ್ಯೂ ಘೋಷಿಸಿದ್ದು,  ಇದು ಶುಕ್ರವಾರ ಸಂಜೆ 6:00 ರಿಂದ ಜಾರಿಗೆ ಬರಲಿದ್ದು,  ಸ್ಥಳೀಯ ಕಾಲಮಾನ ಸೋಮವಾರ ಬೆಳಿಗ್ಗೆ 6 ಗಂಟೆಗೆ ಕೊನೆಗೊಳ್ಳುತ್ತದೆ.
ದೇಶದ ಎಲ್ಲ ಜನರು ಕರ್ಫ್ಯೂಗೆ ಬದ್ಧರಾಗಿ ಮನೆಯೊಳಗೆ ಇರಬೇಕೆಂದು ಅಧ್ಯಕ್ಷರ ಕಚೇರಿ ಹೇಳಿಕೆಯಲ್ಲಿ ಸೂಚಿಸಿದೆ.ಶುಕ್ರವಾರದಿಂದ ಏಳುದಿನ ಮನೆಯಿಂದಲೇ ಕಚೇರಿ ಕೆಲಸ ನಿರ್ವಹಿಸುವಂತೆ ಶ್ರೀಲಂಕಾ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ಗುರುವಾರ ಘೋಷಿಸಿದ್ದರು. ಮಾರ್ಚ್ 27 ರವರೆಗೆ ಈ ನಿಯಮ ಜಾರಿಯಲ್ಲಿರುತ್ತದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಶ್ರೀಲಂಕಾದಲ್ಲಿ ಇದುವರೆಗೆ ಕೊವಿದ್‍ -19ನ 59 ಪ್ರಕರಣಗಳು ದೃಢಪಟ್ಟಿದ್ದು, ಇತರ 230 ಕ್ಕೂ ಹೆಚ್ಚು ಶಂಕಿತ ಪ್ರಕರಣಗಳ ಮೇಲೆ ದೇಶದ ವಿವಿಧ ಆಸ್ಪತ್ರೆಗಳಲ್ಲಿ ನಿಗಾವಹಿಸಲಾಗಿದೆ.