ಕೋವಿಡ್-19 ಪಾಸಿಟಿವ್ ಗರ್ಭಿಣಿ ಮಹಿಳೆಯ ಹೆರಿಗೆ: ವೈದ್ಯರ ಸಾಧನೆಗೆ ಜನಮೆಚ್ಚುಗೆ

ವಿಜಯಪುರ ಮೇ.18: ಮಹಾರಾಷ್ಟ್ರ ರಾಜ್ಯದ ನವಿಮುಂಬೈಯಿಂದ ವಿಜಯಪುರಕ್ಕೆ ಆಗಮಿಸಿದ್ದ ಕೋವಿಡ್-19 ರೋಗಿ ಸಂಖ್ಯೆ 1176 ಗಬರ್ಿಣಿ ಮಹಿಳೆಗೆ ಹೆರಿಗೆ ಮಾಡಿಸುವುವ ಮೂಲಕ ಇಲ್ಲಿಯ ವೈದ್ಯರು ಮತ್ತೊಂದು ಸಾಧನೆಗೆ ಪಾತ್ರರಾಗುವುದರ ಜೊತೆಗೆ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. 

ಮೇ 13 ರಂದು ವಿಜಯಪುರ ಜಿಲ್ಲೆಗೆ ಖಾಸಗಿ ವಾಹನದ ಮೂಲಕ ಆಗಮಿಸಿದ್ದ 7 ಜನರಲ್ಲಿ 5 ಜನರಿಗೆ ಕೋವಿಡ್-19 ಸೋಂಕು ದೃಡಪಟ್ಟಿದ್ದು, ಇವರಲ್ಲಿ ಒರ್ವ ಗಬರ್ಿಣಿ ಮಹಿಳೆ ಸಹ ಒಳಗೊಂಡಿದ್ದಾರೆ. ಜಿಲ್ಲೆಗೆ ಆಗಮಿಸಿದ್ದ ಈ ಮಹಿಳೆಗೆ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ತೀವ್ರ ವೇದನೆಯಿಂದಾಗಿ ದಾಖಲಾಗಿದ್ದ ಈ ಗಬರ್ಿಣಿಗೆ ಕೋವಿಡ್-19 ರೋಗಿಗಳಿಗಾಗಿ ಇರುವ ಎಂ.ಸಿ.ಎಚ್ ಆಸ್ಪತ್ರೆಯ ವಿಶೇಷ ಹೆರಿಗೆ ಕೋಣೆಯಲ್ಲಿ ನಾರ್ಮಲ್ ಹೆರಿಗೆ ಮಾಡಲಾಗಿದ್ದು, ಜನಿಸಿದ ಮಗುವಿನ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಸ್ಪಷ್ಟ ಪಡಿಸಿದ್ದಾರೆ.

ಮಹಾರಾಷ್ಟ್ರದ ನವಿಮುಂಬೈಯಲ್ಲಿ ಸಾಂಸ್ಥಿಕ ಕ್ವಾರಂಟೈನ್ದಿಂದ ಇಲ್ಲಿಗೆ ಆಗಮಿಸಿದ್ದ ಈ ಗಬರ್ಿಣಿ ಮಹಿಳೆಗೆ ಹೆರಿಗೆ ಮಾಡಿಸುವ ಸಂದರ್ಭದಲ್ಲಿ ಎಲ್ಲ ತಜ್ಞವೈದ್ಯರು ಮತ್ತು ಇತರೆ ಸಿಬ್ಬಂಧಿಗಳು ಪಿಪಿಇ ಕಿಟ್ ಮತ್ತು ಎನ್95 ಮಾಸ್ಕ್ ಸೇರಿದಂತೆ  ಅವಶ್ಯಕ ಮುನ್ನೆಚ್ಚರಿಕೆಯೊಂದಿಗೆ ನಾರ್ಮಲ್ ಹೆರಿಗೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 

ನವಿಮುಂಬೈಯಿಂದ ಆಗಮಿಸಿರುವ ಒಟ್ಟು 7 ಜನರಲ್ಲಿ 5 ಜನರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಡ ಪಟ್ಟಿದೆ. ಇನ್ನೂ ಇಬ್ಬರ ಗಂಟಲು ದ್ರವ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಪಾಸಿಟಿವ್ ರೋಗಿಗಳನ್ನು ಆಸ್ಪತ್ರೆ ಕ್ವಾರಂಟೈನ್ ಮಾಡಲಾಗಿದ್ದು, ಇನ್ನುಳಿದ ಇಬ್ಬರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ರೋಗಿ ಸಂಖ್ಯೆ 1176 (19 ವರ್ಷ) ಮಹಿಳೆ, ರೋಗಿ ಸಂಖ್ಯೆ 1177 (45 ವರ್ಷ) ಪುರುಷ, ರೋಗಿ ಸಂಖ್ಯೆ 1183 (10 ವರ್ಷ) ಬಾಲಕ, ರೋಗಿ ಸಂಖ್ಯೆ 1184 (20 ವರ್ಷದ ಯುವತಿ), ರೋಗಿ ಸಂಖ್ಯೆ 1211 (22 ವರ್ಷ) ಯುವಕ, ಪಾಸಿಟಿವ್ ರೋಗಿಗಳಾಗಿದ್ದು, ಅಂತರರಾಜ್ಯದ ಮಹಾರಾಷ್ಟ್ರ ಮತ್ತು ಮುಂಬೈ ಪ್ರಯಾಣದ ಹಿನ್ನಲೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರ. 

ಜಿಲ್ಲೆಗೆ 12500 ಕ್ಕೂ ಹೆಚ್ಚು ಜನರು ವಿವಿಧ ರಾಜ್ಯಗಳಿಂದ ಆಗಮಿಸಿದ್ದು, ಅವರೆಲ್ಲರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ಇಂದು 820 ವಲಸೆ ಕಾಮರ್ಿಕರು ಚಿಪ್ಲೂನ್ದಿಂದ ಶ್ರಮಿಕ ಎಕ್ಸ್ಸ್ಪ್ರೇಸ್ ಮೂಲಕ ಜಿಲ್ಲೆಗೆ ಆಗಮಿಸಿದ್ದು, ಅವರೆಲ್ಲರನ್ನು ಸಾಂಸ್ಥಿಕ ಕ್ವಾರಂಟೈನ್ಗೆ ಅವಶ್ಯಕ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. 

ಜಿಲ್ಲೆಯಲ್ಲಿ ವಿದೇಶ ಸೇರಿದಂತೆ ಇತರ ಪ್ರದೇಶಗಳಿಂದ ಒಟ್ಟು 2425 ಜನರು ಆಗಮಿಸಿದ ಬಗ್ಗೆ ವರದಿಯಾಗಿದೆ. 1540 ಜನರು 28 ದಿನಗಳ ಐಸೊಲೇಷನ್ ಅವಧಿ ಪೂರ್ಣಗೊಳಿಸಿದ್ದಾರೆ. 845 ಜನರು 1 ರಿಂದ 28 ದಿನಗಳ ರಿಪೋಟರ್ಿಂಗ್ ಅವಧಿಯಲ್ಲಿದ್ದಾರೆ. ಈವರೆಗೆ 2741 ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದ್ದು ಅದರಲ್ಲಿ 2649 ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಇನ್ನೂ 194 ಜನರ ವರದಿ ಬರಬೇಕಾಗಿದೆ. ಈವರೆಗೆ 59 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ಇದರಲ್ಲಿ 37 ಜನರು ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಆಸ್ಪತ್ರೆಯಲ್ಲಿ ಸಧ್ಯಕ್ಕೆ 19 ಸಕ್ರೀಯ ರೋಗಿಗಳು ಇದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಅವರು ಇದ್ದರು.