ನವದೆಹಲಿ, ಎಪ್ರಿಲ್ 1, ಕೊರೊನವೈರಸ್ ಸೋಂಕಿನ ಕಾರ್ಮೋಡದ ನಡುವೆಯೂ ಭಾರತ ತನ್ನ ಮಹತ್ವಾಕಾಂಕ್ಷೆಯ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸುವ ಗುರಿಯನ್ನು ಜೀವಂತವಾಗಿರಿಸಿಕೊಂಡಿದೆ.ಹೊಸ ಹಣಕಾಸು ವರ್ಷ (2020-21) ಆರಂಭದಲ್ಲಿ ಅನೇಕ ಕೈಗಾರಿಕೋದ್ಯಮಿಗಳು, ಕೃಷಿಕರು ಮತ್ತು ರಿಯಲ್ ಎಸ್ಟೇಟ್ ಸಲಹೆಗಾರರು ಆರ್ಥಿಕತೆ ಸದೃಢವಾಗುವ ಆಶಾಭಾವವನ್ನು ವ್ಯಕ್ತಪಡಿಸಿದ್ದಾರೆ. ‘ಭಾರತ ಈಗಾಗಲೇ ಕಾರ್ಮೋಡಗಳ ಮಧ್ಯೆ ಪರಿವರ್ತನೆಯ ಹಾದಿಯಲ್ಲಿದೆ. ಆದರೂ, 2020-24ರ ವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕ ಗುರಿಯನ್ನು ಸಾಧಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಇವರೆಲ್ಲಾ ಪ್ರತಿಪಾದಿಸಿದ್ದಾರೆ.
ಕೆಲ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಮಂಗಳವಾರ ಕಡಿಮೆಗೊಳಿಸಿರುವುದ ನಡುವೆ ಈ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಆರ್ಥಿಕತೆ ವೇಗದ ಮಂದಗತಿಯನ್ನು ನಿಭಾಯಿಸಲು ಇದು ಪರಿಹಾರದ ಕ್ರಮವಾಗಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ದೇಶದಲ್ಲಿನ ಸದ್ಯದ ಆರ್ಥಿಕ ಸನ್ನಿವೇಶದ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿಯ ಹಿರಿಯ ಮುಖಂಡರೊಬ್ಬರು, ಸೇವಾ ಕ್ಷೇತ್ರವಲ್ಲದೆ, ಕೃಷಿ, ಕೈಗಾರಿಕಾ ಮತ್ತು ಉತ್ಪಾದನಾ ವಲಯ ಈಗಾಗಲೇ ಬೆಳವಣಿಗೆಯ ಹಾದಿಯಲ್ಲಿರುವುದರಿಂದ ಮುಂದೆಯೂ ಬೆಳವಣಿಗೆಗೆ ಪೂರಕ ವಾತಾವರಣವಿರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.‘ಜವಳಿ ಮತ್ತು ವಿನ್ಯಾಸ, ಆಹಾರ, ಸಿಹಿ ತಿನಿಸು ಉದ್ಯಮ, ಪಾನೀಯ, ಲಾಜಿಸ್ಟಿಕ್ಸ್, ಮೂಲಸೌಕರ್ಯ, ರಿಯಾಲ್ಟಿ, ಆರೋಗ್ಯ ರಕ್ಷಣೆ, ಆತಿಥ್ಯ, ವಿದ್ಯುತ್ ಮತ್ತು ಇಂಧನ ಹಾಗೂ ಆಭರಣಗಳಂತಹ ಕ್ಷೇತ್ರಗಳಲ್ಲಿ ಹೆಚ್ಚು ಹೂಡಿಕೆಗಳನ್ನು ಆಕರ್ಷಿಸುವುದಕ್ಕೆ ಹಿಂದಿನ ಪ್ರಗತಿ ಸಹಕಾರಿಯಾಗಲಿದೆ. ಎಂದು ಅವರು ಗಮನಸೆಳೆದಿದ್ದಾರೆ.
‘ಭಾರತ ಬೆಳವಣಿಗೆಗೆ ಅಪಾರ ಸಾಮರ್ಥ್ಯವನ್ನು ಹೊಂದಿದೆ. ಸದ್ಯದ 2.8 ಟ್ರಿಲಿಯನ್ ಡಾಲರ್ ಆರ್ಥಿಕತೆಯಿಂದ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಮಹತ್ವಾಕಾಂಕ್ಷೆ ಈಡೇರಲು ಭಾರತ ಸಾಮರ್ಥ್ಯವನ್ನು ಹೊಂದಿದೆ ಎಂದು ಐಟಿಸಿ ಲಿಮಿಟೆಡ್ ಸಿಎಂಡಿ ಸಂಜೀವ್ ಪುರಿ ಹೇಳಿದ್ದಾರೆ. ಭಾರತದ ಶೇ 50 ರಷ್ಟು ಜನರು ಕೃಷಿಯಲ್ಲಿ ತೊಡಗಿದ್ದಾರೆ. ಈ ವಲಯ ಜಿಡಿಪಿಯಲ್ಲಿ ಕೇವಲ ಶೇ 15ರಷ್ಟಿದೆ ಎಂದು ಕೃಷಿ ತಜ್ಞ ಅಶೋಕ್ ತಲ್ವಾರ್ ಹೇಳಿದ್ದಾರೆ. ಭಾರತದಲ್ಲಿ ಬಳಕೆಯ ಬೆಳವಣಿಗೆ ಮುಂದಿನ ಹಂತಕ್ಕೆ ಸಾಗಬೇಕಾದರೆ ಕೃಷಿ ಕ್ಷೇತ್ರದಲ್ಲಿ ಆದಾಯ ಹೆಚ್ಚಾಗಬೇಕಿದೆ ಎಂದು ತಲ್ವಾರ್ ಅಭಿಪ್ರಾಯಪಟ್ಟಿದ್ದಾರೆ.