ಚೆನ್ನೈ, ಏ 17, ತಮಿಳುನಾಡಿನ ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ರಷ್ಯಾ ಮತ್ತು ಚೀನಾದಿಂದ ಆಗಮಿಸಿರುವ ಫೇಸ್ ಮಾಸ್ಕ್ ಗಳು ಮತ್ತು ಇತರ ಉಪಕರಣಗಳನ್ನೊಳಗೊಂಡ 146 ಆಮದು ರವಾನೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಸರಕು ಟರ್ಮಿನಲ್ ನಲ್ಲಿ ತೆರಿಗೆ ಅಧಿಕಾರಿಗಳು ಹಸಿರು ನಿಶಾನೆ ತೋರಿದೆ. ವಿಮಾನ ತೆರಿಗೆ ವಿಭಾಗದ ಅಧಿಕಾರಿಗಳು 99 ಪಾರ್ಸೆಲ್ ಗಳಲ್ಲಿ ಫೇಸ್ ಮಾಸ್ಕ್ ಮತ್ತು ರಕ್ತ ಗ್ಲೂಕೋಸ್ ತಪಾಸಣಾ ಪಟ್ಟಿಗಳು ರಷ್ಯಾದಿಂದ ಆಗಮಿಸಿದ್ದು, ಅವುಗಳಿಗೆ ಆದ್ಯತೆ ಮೇರೆಗೆ ಸಮ್ಮತಿ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.ಅದೇ ರೀತಿ ಫೇಸ್ ಮಾಸ್ಕ್ 35 ಇನ್ ಫ್ರಾರೆಡ್ ಥರ್ಮೋಮೀಟರ್ ಗಳನ್ನು ಚೀನಾದಿಂದ ತರಿಸಲಾಗಿದ್ದು, ಅದನ್ನು ಕೂಡ ಅನುಮತಿ ನೀಡಲಾಗಿದೆ.