ಕೋವಿಡ್: ಶಿಮ್ಲಾದಲ್ಲಿ ಸಾವನ್ನಪ್ಪಿದ 19 ವರ್ಷದ ಹುಡುಗನಿಗೆ ಸೋಂಕು ದೃಢ

ಶಿಮ್ಲಾ, ಜೂನ್‍ 14,ತೀವ್ರವಾಗಿ ಗಾಯಗೊಂಡು ಇಲ್ಲಿನ ಐಜಿಎಂಸಿ ಆಸ್ಪತ್ರೆಗೆ ದಾಖಲಾಗಿ ನಂತರ ಸಾವನ್ನಪ್ಪಿದ್ದ 19 ವರ್ಷ ವಯಸ್ಸಿನ ಹುಡುಗನಿಗೆ ಸಾರ್ಸ್‍-ಕೊವಿಡ್-2 ಸೋಂಕು ದೃಢಪಟ್ಟಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೃತ ಬಾಲಕ ದೆಹಲಿಯಿಂದ ಶಿಮ್ಲಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡೀಸ್ (ಐಐಎಎಸ್) ಕ್ಕೆ ಬಂದಿದ್ದ.  ಐಐಎಎಸ್‌ನಲ್ಲಿ ಶೆಡ್ ನಿರ್ಮಾಣದಲ್ಲಿ ಕೆಲ ಗುತ್ತಿಗೆದಾರರೊಂದಿಗೆ ಬಾಲಕ ಕೆಲಸ ಮಾಡುತ್ತಿದ್ದ. ಭಾರವಾದ  ಕಲ್ಲನ್ನು ವಾಹನದಿಂದ ಇಳಿಸುವಾಗ ಕಾಲಿಗೆ ತೀವ್ರ ಪೆಟ್ಟಾಗಿತ್ತು ಜಿಲ್ಲಾಡಳಿತ ನೀಡಿದ ಮಾಹಿತಿ ತಿಳಿಸಿದೆಶನಿವಾರ ಮಧ್ಯರಾತ್ರಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ವೇಳೆ  ಬಾಲಕನಿಗೆ ಕೋವಿಡ್ -19 ಪರೀಕ್ಷೆಯನ್ನು ಮಾಡಲಾಗಿತ್ತು. ಆದರೆ, ಬಾಲಕ ಮಧ್ಯರಾತ್ರಿ 2.30ರ ಸುಮಾರಿಗೆ ಮೃತಪಟ್ಟಿದ್ದಾನೆ. ಕೊವಿಡ್‍ ಪರೀಕ್ಷೆಯಲ್ಲಿ ಕೊವಿಡ್‍-19 ಸೋಂಕು ಇರುವುದು ಸಹ ದೃಢಪಟ್ಟಿದೆ. ಮೃತ ಬಾಲಕ ದೆಹಲಿಯ ಓಕ್ಲಾ ಪ್ರದೇಶದ ವಾಸಿಯೆಂದು ಗುರುತಿಸಲಾಗಿದೆ.ಇದರೊಂದಿಗೆ, ಹಿಮಾಚಲ ಪ್ರದೇಶದಲ್ಲಿ ಸಾವಿನ ಸಂಖ್ಯೆ ಏಳಕ್ಕೆ ಏರಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 503 ಕ್ಕೆ ತಲುಪಿದೆ.