ಟಿಪ್ಪು ಸುಲ್ತಾನ ಜಯಂತ್ಯೋತ್ಸವ: ಕೌಮಿ ಏಕತಾ ಸಮ್ಮೇಳನ

ಟಿಪ್ಪು ಸುಲ್ತಾನ ಜಯಂತ್ಯೋತ್ಸವ: ಕೌಮಿ ಏಕತಾ ಸಮ್ಮೇಳನ Koumi Ekta Sammelan

ಲೋಕದರ್ಶನ ವರದಿ 

ಜಮಖಂಡಿ 22: ಹಜರತ್ ಟಿಪ್ಪು ಸುಲ್ತಾನ ಜಯಂತ್ಯೋತ್ಸವ ಹಿನ್ನಲೆಯಲ್ಲಿ ಡಿ.23 ರಂದು ಸಾಯಂಕಾಲ 5 ಗಂಟೆಗೆ ಕೌಮಿ ಏಕತಾ ಸಮ್ಮೇಳನ (ಸರ್ವಧರ್ಮ ಸಮ್ಮೇಳನ) ಹಮ್ಮಿಕೊಳ್ಳಲಾಗಿದೆ ಎಂದು ಶಹೀದ ಹಜರತ ಟಿಪ್ಪು ಸುಲ್ತಾನ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಮಾಜಿ ಜವಳಿ ನಿಗಮದ ಉಪಾಧ್ಯಕ್ಷ ನಜೀರ ಕಂಗನೊಳ್ಳಿ ಹೇಳಿದರು. 

ನಗರದ ಅಬುಬಕರ ದರ್ಗಾದಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಐತಿಹಾಸಿಕ ಸರ್ವಧರ್ಮಗಳ ಶೃದ್ದಾಕೇಂದ್ರ ಅಬುಬಕರ ದರ್ಗಾವಾಗಿದೆ. ದರ್ಗಾದಲ್ಲಿ ನಡೆಯುವ ಸರ್ವಧರ್ಮಗಳ ಸಮ್ಮೇಳನದಲ್ಲಿ ಬಿಹಾರದ ಮೌಲಾನಾ ಅಬ್ದುಲ್ಲಾಸಾಲೀಂ ಕಮರ ಚತುರ್ವೇದಿ, ಉತ್ತರ ಪ್ರದೇಶದ ಮೌಲಾನಾ ಹಜರತ್‌ಪೀರ ಸೈಯದ ಕಾಶಿಮ್ ಆಶ್ರಫ, ಹಾವೇರಿಯ ಉತ್ತರ ಕರ್ನಾಟಕ ಅಹಿಂದ ಗುರುಪೀಠ ಪೀಠಾಧ್ಯಕ್ಷರು ಮಹೇಶ್ವರಾನಂದ ಸ್ವಾಮೀಜಿ, ರುದ್ರಾವಧೂತ ಮಠದ ಸಹಜಾನಂದ ಅವಧೂತರು, ಓಲೇಮಠದ ಆನಂದ ದೇವರು, ಬಾಗಲಕೋಟೆ ಸುನ್ನತವಲ್ಲ ಜಮಾತ ಜಿಲ್ಲಾ ಅಧ್ಯಕ್ಷ ಕಾರಿ ಸಮಿವುಲ್ಲಾ ಖಾದ್ರಿ, ರೆವರೆಂಡ್ ಫಾದರ ಲಕ್ಷ್ಮಣ ಬಿ, ಹಜರತ ಮೌಲಾನಾ ಮೋಹಸೀನಾಹ್ಮದ ಇನಾಮಿ ಸಾನ್ನಿದ್ಯವಹಿಸುವರು ಎಂದರು. 

ಜಿಲ್ಲಾ ಉಸ್ತುವಾರಿ ಸಚಿವ ಆರ್,ಬಿ,ತಿಮ್ಮಾಪೂರ, ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ, ಬೃಹತ ಕೈಗಾರಿಕಾ ಸಚಿವ ಎಂ,ಬಿ, ಪಾಟೀಲ, ಇಂಡಿಯನ್ ಟ್ರೇಡ್ ಯೂನಿಯನ್ ನ್ಯಾಶನಲ್ ಕಾಂಗ್ರೆಸ್ ರಾಜ್ಯಾಧ್ಯಕ್ಷರ ಟಿ,ವೈ,ಕುಮಾರ, ಎಐಎಂಐಎಂ ಪಕ್ಷದ ರಾಜ್ಯಾಧ್ಯಕ್ಷ ಲಥೀಪಖಾನ್ ಪಠಾಣ, ಮಾಜಿ ಶಾಸಕ ಆನಂದ ನ್ಯಾಮಗೌಡ, ತೇರದಾಳ ಶಾಸಕ ಸಿದ್ದು ಸವದಿ, ಬೀಳಗಿ ಶಾಸಕ ಜೆ.ಟಿ.ಪಾಟೀಲ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ಬದಾಮಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ, ಮಾಜಿ ಸಚಿವರಾದ ಎಸ್‌.ಆರ್‌.ಪಾಟೀಲ ಸೇರಿದಂತೆ ಅನೇಕ ರಾಜಕೀಯ ಮುಖಂಡರು, ಸರ್ವಧರ್ಮದ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಆಗಮಿಸಲಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಬಿತ್ತಿ ಪತ್ರಗಳನ್ನುಬಿಡುಗಡೆಗೊಳಿಸಿದರು. 

ನಗರದಲ್ಲಿ ಹಮ್ಮಿಕೊಂಡಿರುವ ಕೌಮಿ ಏಕತಾ ಸಮ್ಮೇಳನಕ್ಕೆ ಅಂದಾಜು 5 ಸಾವಿರಕ್ಕೂ ಅಧಿಕ ಜನರು ಸೇರುವ ನೀರಿಕ್ಷೆ ಇದೆ, ಆ ನಿಟ್ಟಿನಲ್ಲಿ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ನಮ್ಮ ರಾಷ್ಟ್ರ- ದೇಶ ಅಭಿವೃದ್ಧಿ ಹೊಂದಬೇಕಾದರೆ ನಾವೆಲ್ಲರೂ ಭಾರತೀಯರು ಎಂಬ ಭಾವನೆಯಿಂದ ಕೆಲಸ ಮಾಡಬೇಕು. ಜಾತೀಯತೆ ಕೇವಲ ದ್ವೇಷವನ್ನು ಬಿತ್ತುತ್ತದೆ, ಒಗ್ಗಟ್ಟು ದೇಶವನ್ನು ಕಟ್ಟುತ್ತದೆ. ಬಡವ-ಬಲ್ಲಿದ ಎಂಬ ವ್ಯತ್ಯಾಸ ಹೋಗಲಾಡಿಸಲು ನಮಗೆ ಜಾತೀಯತೆ ಮೀರಿದ ಮಾನವೀಯತೆ ಮೈಗೂಡಿಸಿಕೊಳ್ಳಬೇಕು. ಸುಂದರ ಸಮಾಜಕ್ಕೆ ಶಾಂತಿ ಅಡಿಪಾಯ, ಆ ಶಾಂತಿಗೆ ಒಗ್ಗಟ್ಟೇ ಮದ್ದಾಗಿದೆ, ಅದಕ್ಕೆ ನಮ್ಮ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್, ಕ್ರಾಂತಿಕಾರಿ ಬಸವಣ್ಣನವರು, ಮತ್ತು ಕನಕದಾಸರಂತಹ ಮಹಾನ್ ವ್ಯಕ್ತಿಗಳು ಅಂದೇ ಹೇಳಿದ್ದಾರೆ ಎಂದರು.  

ಸುದ್ದಿಗೋಷ್ಠಿಯಲ್ಲಿ ಅಲ್ತಾಪ ಸಗರ, ಸಮೀರ ಕಂಗನೊಳ್ಳಿ, ರಿಯಾಜ ಅವಟಿ, ಅಬ್ದುಲ ಜಮಾದಾರ, ಇಸಾ ಇನಾಮದಾರ, ಅಬುಬಕರ ಕುಡಚಿ, ಮಹಿಬೂಬ ಪೆಂಡಾರಿ, ಸಾಧಿಕ ಬಂಟನೂರ, ರೇಹಮಾನ ಜಮಖಂಡಿ, ಯಾಸೀನ ಲೋದಿ, ಮುಸ್ತಾಪ ಕರಜಗಿ,  ಮುಸ್ತಾಕ ಝಂಡೆ ಸೇರಿದಂತೆ ಅನೇಕರು ಇದ್ದರು.