ಶಂಕರಲಿಂಗ ಮಠದಲ್ಲಿ ಮಣ್ಣಿನಲ್ಲಿ ತಯಾರಿಸಿದ ಕೋಟಿಲಿಂಗ ಪೂಜೆ

ಶಂಕರಲಿಂಗ ಮಠದಲ್ಲಿ ಮಣ್ಣಿನಲ್ಲಿ ತಯಾರಿಸಿದ ಕೋಟಿಲಿಂಗ ಪೂಜೆ  Kotilinga puja made of clay at Shankaralinga Mutt

ಸಂಕೇಶ್ವರ 23: ಪುರಾತನ ಕಾಲದಿಂದಲೂ ಐತಿಹಾಸಿಕ ಧಾರ್ಮಿಕ ಹೆಸರುವಾಸಿಯಾಗಿದ್ದ ಜಗದ್ಗುರು ಶಂಕರಾಚಾರ್ಯ ಮಠದಲ್ಲಿ ಶ್ರಾವಣ ಮಾಸದ ನಿಮಿತ್ಯ ಬರುವ ಬರುವ 25ರಿಂದ ಅಗಸ್ಟ 23ರವರೆಗೆ ಶ್ರೀಮಠದಲ್ಲಿ ಕೋಟಿಲಿಂಗ ಪೂಜೆ ಭವ್ಯ ಅನುಷ್ಠಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಠದ ಸಚ್ಚಿದಾನಂದ ಅಭಿನವ ವಿದ್ಯಾನರಸಿಂಹ ಭಾರತಿ ಸ್ವಾಮಿಜಿಯವರು ತಿಳಿಸಿದರು. 

ಲೋಕದರ್ಶನ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು ಇದು ಕೇವಲ ಶಂಕರಾಚಾರ್ಯ ಮಠದಲ್ಲಿ ಈ ಪರಂಪರೆಯನ್ನು ಮುಂದುವರೆಸುತ್ತಾ ಬರಲಾಗಿದ್ದು ದಿನಾಲು ಮಣ್ಣಿನಲ್ಲಿ ಶಿವಲಿಂಗವನ್ನು ತಯಾರಿಸಿ ಅದರ ಪ್ರಾಣ ಪ್ರತಿಷ್ಠೆ ಪಂಚಾಮೃತ ಅಭಿಷೇಕ ಬಿಲ್ವ ಪತ್ರಿ ಅರೆ​‍್ಣ ಮಹಾನೈವೇದ್ಯ ಮುಂತಾದ ಕಾರ್ಯಕ್ರಮಗಳು ಅತಿ ಶಾಸ್ತ್ರಬದ್ಧವಾಗಿ ಜರುಗಲಿವೆ.  

ದೇಶದಲ್ಲಿ ಶಂಕರಾಚಾರ್ಯ ಮಠವು ಎಲ್ಲ ಪ್ರಮುಖ ಮಠಗಳಲ್ಲಿ ಒಂದಾದ ಮಠವು ತಿಂಗಳುಗಟ್ಟಲೆ ಮಣ್ಣಿನಲ್ಲಿ ತಯಾರಿಸಿ ಕೋಟಿ ಲಿಂಗಾರ್ಚನೆ ಪೂಜೆ ಮಾಡಿದಲ್ಲಿ ಕೋಟಿ ಕೋಟಿ ಪುಣ್ಯ ಲಭಿಸುವುದಾಗಿ ಪುರಾಣಗಳಲ್ಲಿ ಮಾಹಿತಿ ಲಭ್ಯವಿದೆ. ಈ ವರ್ಷ ಚತುರ್ಮಾಸಕ್ಕಾಗಿ ಆಗಮಿಸಿದ ಯತಿವರ್ಯ ಸಾನಿಧ್ಯ ದೊರಕಲಿದ್ದು ಅವರ ದಿವ್ಯ ಸಾನಿಧ್ಯದಲ್ಲಿ ಭಕ್ತಿ ಪೂರ್ಣ ವಾತಾವರಣದಲ್ಲಿ ಅನುಷ್ಠಾನ ನಡೆಯಲಿದೆ. ಸದ್ಭಕ್ತರು ದಿನಾಲು ಪೂಜೆಯಲ್ಲಿ ದರ್ಶನ ಪಡೆದು ಶಿವನ ಕೃಪೆಗೆ ಪಾತ್ರರಾಗಬೇಕೆಂದು ಹೇಳಿದಲ್ಲದೇ ಭಕ್ತರು ಪ್ರಸಾದ ಸ್ವೀಕರಿಸಬೇಕೆಂದು ಭಕ್ತರಲ್ಲಿ ತಿಳಿಸಿದ್ದಾರೆ. ಶ್ರಾವಣ ಮಾಸದ ಈ ಕಾರ್ಯಕ್ರಮಗಳು ಅನಂತ ಚತುರ್ಥಿ ಹಾಗೂ ಪೂರ್ಣಿಮೆ ಸಪ್ಟೆಂಬರ 6ರಂದು ಮುಕ್ತಾಯಗೊಳ್ಳುತ್ತವೆ. 

ಶಂಕರಲಿಂಗ ಮಠದಲ್ಲಿ ಶ್ರೀಗಳ ಹುಟ್ಟು ಹಬ್ಬದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಮತ್ತು ಉಚಿತ ಓಷಧ ವಿತರಣೆ ಕಾರ್ಯಕ್ರಮವು ರವಿವಾರ ದಿನಾಂಕ 27 ರಂದು ಮುಂಜಾನೆ 9.00 ಗಂಟೆಯಿಂದ ಮಧ್ಯಾಹ್ನ 1.00 ಗಂಟೆಯವರೆಗೆ ಜರುಗುವುದು ಸದ್ಭಕ್ತರು ತಮ್ಮ ಆರೋಗ್ಯಗಳನ್ನು ತಪಾಸಣೆ ಮಾಡಿಕೊಂಡು ಈ ಶಿಬಿರದ ಲಾಭವನ್ನು ಪಡೆಯಬೇಕು ಎಂದು ಶ್ರೀಗಳು ತಿಳಿಸಿದ್ದಾರೆ.  

ಜುಲೈ 28ರಂದು ಮಠದ ಶ್ರೀಗಳು ಸಚ್ಚಿದಾನಂದ ಅಭಿನವ ವಿದ್ಯಾನರಸಿಂಹ ಭಾರತಿ ಸ್ವಾಮಿಜಿಯವರು ಶಂಕರಲಿಂಗ ಮಠಕ್ಕೆ ಬಂದು ಪಟ್ಟಾಭಿಷೇಕ ಮಾಡಿಕೊಂಡು ಹತ್ತು ವರ್ಷಗಳಲ್ಲಿ ಶ್ರೀಗಳು ತಮ್ಮ ಸೇವೆಯನ್ನು ಮುಂದುವರೆಸುತ್ತಿದ್ದಾರೆ ಕಳೆದ ಒಂಬತ್ತು ವರ್ಷಗಳಲ್ಲಿ ಮಠದ ಅಭಿವೃದ್ಧಿ ಸಾಕಷ್ಟು ಪ್ರಮಾಣದಲ್ಲಿ ಜರುಗಿದೆ. ಸುಮಾರು 1.5 ಕೋಟಿ ಮೇಲ್ಪಟ್ಟು ರೂಪಾಯಿಗಳ ವೆಚ್ಚದಲ್ಲಿ ಶಂಕರಲಿಂಗ ಮಠದ ಪ್ರಾಚೀನ ಮೊದಲಿನ ಗತವೈಭವ ಹನುಮಾನ ಮಂದಿರ ನಗಾರಖಾನೆ ಶ್ರೀಗಳ ವಿಶ್ರಾಂತಿ ಪಡೆಯುವ ಹೊಸ ಕಟ್ಟಡ ನದಿ ತೀರದಲ್ಲಿ ಇರುವ ತಗಡಿಯನ ಮೇಲ್ಛಾವಣಿಗಳನ್ನು ನಿರ್ಮಾಣ ಮಾಡಿಸಿದ್ದಾರೆ ಮತ್ತು ಶಾರದಂಬಾ ದೇವಿಯ ಮಂದಿರ ಜಿರ್ಣೋದ್ಧಾರ ಹಾಗೂ ಇನ್ನಿತರ ಮಠದ ಅಭಿವೃದ್ಧಿ ಕೆಲಸಗಳನ್ನು ಶ್ರೀಗಳು ಮುಂದುವರೆಸಿಕೊಂಡು ಸಾಗುತ್ತಿದ್ದಾರೆ.