ಏ.18 ರಂದು ಕೋರ ಚಿತ್ರ ಬಿಡುಗಡೆ: ಸಿದ್ದು ಮಣ್ಣಿನವರ್

Kora movie to release on April 18: Sidhu Muttiyavar

ಏ.18 ರಂದು ಕೋರ ಚಿತ್ರ ಬಿಡುಗಡೆ: ಸಿದ್ದು ಮಣ್ಣಿನವರ್

ಕೊಪ್ಪಳ 16: ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ ಪಿ. ಮೂರ್ತಿ ಅವರು ನಿರ್ಮಿಸಿ ಅಭಿನಯಿಸಿದ ಚಲನಚಿತ್ರ ಇದೇ ಏಪ್ರಿಲ್ 18ರಂದು ಬಿಡುಗಡೆಗೊಳ್ಳಲಿದ್ದು ಚಿತ್ರವನ್ನು ಪ್ರೇಕ್ಷಕರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ವೀಕ್ಷಿಸಿ ಯಶಸ್ವಿಗೊಳಿಸುವಂತೆ ಅಂಬೇಡ್ಕರ್ ಸೇನೆಯ ಕೊಪ್ಪಳ ಜಿಲ್ಲಾ ಅಧ್ಯಕ್ಷ ಸಿದ್ದು ಮಣ್ಣಿನವರ್ ಮನವಿ ಮಾಡಿದರು.  

ಅವರು ಬುಧವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಕೋರ ಚಲನಚಿತ್ರವು ಗ್ರಾಮೀಣ ಸೋ ಗಾಡಿನ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸುಂದರ ಚಿತ್ರವಾಗಿದ್ದು, ಸಮಾಜಕ್ಕೆ ಸಂದೇಶವನ್ನು ನೀಡುವ ಉತ್ತಮ ಚಿತ್ರವಾಗಿದೆ, ಈ ಚಿತ್ರವು ರಾಜ್ಯಾದಾದ್ಯಂತ ಇದೇ ಏಪ್ರಿಲ್ 18ರಂದು ಬಿಡುಗಡೆಗೊಳ್ಳಲಿದ್ದು, ಕೊಪ್ಪಳದ ಶಿವ ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆಗೊಂಡು ಪ್ರದರ್ಶನಗೊಳ್ಳಲಿದ್ದು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಪ್ರೇಕ್ಷಕರು, ಅಭಿಮಾನಿಗಳು ಚಿತ್ರವನ್ನು ವೀಕ್ಷಿಸಿ ಯಶಸ್ವಿಗೊಳಿಸಿ ಚಿತ್ರ ನೂರು ದಿನವನ್ನು ಪೂರೈಸಲಿ ಎಂದು ಶುಭ ಹಾರೈಸಿದರು. 

 ಸುದ್ದಿಗೋಷ್ಠಿಯಲ್ಲಿ ಅಂಬೇಡ್ಕರ್ ಸೇನೆಯ ಮುಖಂಡರಾದ ರಮೇಶ್ ದೊಡ್ಡಮನಿ, ಯಂಕಪ್ಪ ಹೊಸಳ್ಳಿ, ನಿಂಗಪ್ಪ ಗದ್ದಿ, ವೀರಭದ್ರ​‍್ಪ ನಾಯಕ ವಕೀಲರು, ಮರಿಸ್ವಾಮಿ ಪೂಜಾರ ಉಪಸ್ಥಿತರಿದ್ದರು.