ಲೋಕದರ್ಶನ ವರದಿ
ಜಾಮ್ ಪರೀಕ್ಷೆಯಲ್ಲಿ ಕೊಪ್ಪಳದ ಎಸ್.ಜಿ. ಕಾಲೇಜ್ ವಿದ್ಯಾರ್ಥಿಗಳ ಸಾಧನೆ
ಕೊಪ್ಪಳ 19: ನಗರದ ಗವಿಸಿದ್ಧೇಶ್ವರ ಕಾಲೇಜಿನ ವಿದ್ಯಾರ್ಥಿಗಳಾದ ಕು. ವೆನಿಲಾ ಹಾಲ್ಕುರಿಕೆ ಮತ್ತು ಕು. ಬಿ.ಎನ್.ದೀಕ್ಷಿತ್ ಇವರುಗಳು ಭೌತಶಾಸ್ತ್ರ ವಿಷಯದ ಜಾಮ್ (ಜಾಯಿಂಟ್ ಅಡ್ಮಿಷನ್ ಫಾರ್ ಮಾಸ್ಟರ್ಸ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಅರ್ಹತೆ ಪಡೆದಿರುತ್ತಾರೆ.
ಇವರ ಈ ಸಾಧನೆಗೆ ಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟಿನ ಕಾರ್ಯದರ್ಶಿಗಳಾದ ಡಾ. ಆರ್.ಮರೇಗೌಡ, ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಚನ್ನಬಸವ, ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಮಂಜುನಾಥ ಎಂ. ಹಾಗೂ ಶರಣಪ್ಪ ಚೌವ್ಹಾಣ ಮತ್ತು ಮಹಾವಿದ್ಯಾಲಯದ ಸರ್ವ ಸಿಬ್ಬಂದಿಗಳು ಶುಭ ಹಾರೈಸಿದ್ದಾರೆ.