ಕೊಪ್ಪಳ ಡಿಸಿಪಿಯು: ಕಾಣೆಯಾದ ಬಾಲಕರ ಪತ್ತೆಗೆ ಮನವಿ

ಕೊಪ್ಪಳ ಡಿಸಿಪಿಯು: ಕಾಣೆಯಾದ ಬಾಲಕರ ಪತ್ತೆಗೆ ಮನವಿ Koppal DCPU: Appeal to find missing boys

ಕೊಪ್ಪಳ: ಬಾಲಕರ ವಸತಿ ನಿಲಯಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆಗೆ ದರಪಟ್ಟಿ ಆಹ್ವಾನ 

ಕೊಪ್ಪಳ  05:  ಡಾ. ಬಿ.ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ವೃತ್ತಿಪರ ಬಾಲಕರ ವಸತಿ ನಿಲಯ ಕೊಪ್ಪಳ ವಸತಿ ನಿಲಯಕ್ಕೆ ಫೆಬ್ರವರಿ-2026 ರಿಂದ ಏಪ್ರಿಲ್‌-2026 ರವರೆಗೆ (3 ತಿಂಗಳಿಗೆ ಮಾತ್ರ) ಶುದ್ಧ ಕುಡಿಯುವ ನೀರು (ಫಿಲ್ಟರ್ ವಾಟರ್) ಪೂರೈಸಲು ದರಪಟ್ಟಿಗಳನ್ನು ಆಹ್ವಾನಿಸಲಾಗಿದೆ.ಡಾ. ಬಿ.ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ವೃತ್ತಿಪರ ಬಾಲಕರ ವಸತಿ ನಿಲಯ ಕೊಪ್ಪಳ ವಸತಿ ನಿಲಯಕ್ಕೆ ಫೆಬ್ರವರಿ-2026 ರಿಂದ ಏಪ್ರಿಲ್‌-2026 ರವರೆಗೆ (3 ತಿಂಗಳಿಗೆ ಮಾತ್ರ) ಶುದ್ಧ ಕುಡಿಯುವ ನೀರು (ಫಿಲ್ಟರ್ ವಾಟರ್)ಪೂರೈಸಲು ಇಚ್ಛೆಯುಳ್ಳ ನೀರು ಸರಬರಾಜು ಮಾಡುವ ಪೂರೈಕೆದಾರರು ಫೆ. 12 ರೊಳಗಾಗಿ ಸಹಾಯಕ ನಿರ್ದೇಶಕರು(ಗ್ರೇಡ್‌-1) ಸಮಾಜ ಕಲ್ಯಾಣ ಇಲಾಖೆ, ಕೊಪ್ಪಳ ಈ ಕಾರ್ಯಾಲಯಕ್ಕೆ ದರಪಟ್ಟಿಗಳನ್ನು ಸಲ್ಲಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು (ಗ್ರೇಡ್‌-1) ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಎಸ್‌ಬಿಐ ನಿಂದ ಫೆ.9 ರಿಂದ 13 ರವರೆಗೆ ಆರ್ಥಿಕ ಸಾಕ್ಷರತಾ ಸಪ್ತಾಹ 

ಕೊಪ್ಪಳ   05 :  ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ಸಾರ್ವಜನಿಕರಲ್ಲಿ ಬ್ಯಾಂಕಿಂಗ್ ವ್ಯವಹಾರ ಹಾಗೂ ಆರ್ಥಿಕ ಶಿಸ್ತಿನ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಫೆ. 9 ರಿಂದ 13 ರವರೆಗೆ ಜಿಲ್ಲೆಯಾದ್ಯಂತ "ಐದು ದಿನಗಳ ಆರ್ಥಿಕ ಸಾಕ್ಷರತಾ ಸಪ್ತಾಹ" ಹಮ್ಮಿಕೊಳ್ಳಲಾಗಿದೆ.ಹಣಕಾಸು ಸೇವೆಗಳ ಇಲಾಖೆ ಹಾಗೂ ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌.ಬಿ.ಐ) ನಿರ್ದೇಶನದಂತೆ ಜಿಲ್ಲಾ ಮಾರ್ಗದರ್ಶಕ ಬ್ಯಾಂಕ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು,  ಫೆ.9 ರಂದು ಜಿಲ್ಲಾ ಆಡಳಿತಾಧಿಕಾರಿಗಳಿಂದ ಸಪ್ತಾಹದ ಪೋಸ್ಟರ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಗುವುದು. ಜಿಲ್ಲೆಯಾದ್ಯಂತ ಇರುವ 188 ಬ್ಯಾಂಕ್ ಶಾಖೆಗಳಲ್ಲೂ ಆರ್ಥಿಕ ಸಾಕ್ಷರತಾ ಸಪ್ತಾಹದ ಅಂಗವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ಎನ್ನುವುದು ಈ ಆರ್ಥಿಕ ಸಪ್ತಾಹದ ವಿಷಯವಾಗಿದ್ದು, ಕೆವೈಸಿಯ ಪ್ರಾಮುಖ್ಯತೆ ಹಾಗೂ ಒವಿಡಿ ಅಧಿಕೃತವಾಗಿ ಮಾನ್ಯವಾದ ದಾಖಲೆಗಳ ಬಗ್ಗೆ ವಿಚಾರಗಳು, ರೀಕೆವೈಸಿ, ವಿಡಿಯೋ ಕೆವೈಸಿ, ಸಿಕೆವೈಸಿ ಆಧಾರ ಓಟಿಪಿ ಆಧಾರಿತ ಇ-ಕೆವೈಸಿಗಳ ಬಗ್ಗೆ ಮಾಹಿತಿಯನ್ನು ಜಿಲ್ಲೆಯಾದ್ಯಂತ ಇರುವ ಹಣಕಾಸು ಸಾಕ್ಷರತಾ ಕೇಂದ್ರಗಳು (ಎಫ್‌ಎಲ್‌ಸಿ) ಹಾಗೂ ಸಿಎಫ್‌ಎಲ್‌ಗಳು ಪ್ರತಿದಿನ ಒಂದೊಂದು ಕಾರ್ಯಕ್ರಮ ಏರಿ​‍್ಡಸುವ ಮೂಲಕ ಪ್ರಚುತಪಡಿಸಲಿದ್ದಾರೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಮಾರುತಿ.ಕೆ. ಕರಪಾನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಪ್ಪಳ ಡಿಸಿಪಿಯು: ಕಾಣೆಯಾದ ಬಾಲಕರ ಪತ್ತೆಗೆ ಮನವಿ 

ಕೊಪ್ಪಳ   05 :  ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015 ರಡಿಯಲ್ಲಿ  ನೋಂದಾಯಿತವಾಗಿ ಪೋಷಣೆ ಮತ್ತು ರಕ್ಷಣೆ ಅವಶ್ಯವಿರುವ ಮಕ್ಕಳಿಗಾಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಲ್ವಾರಿ ಚಾಪೆಲ್‌ನ ನಂಬಿಕೆ ಮನೆಯಲ್ಲಿ ಆಶ್ರಯ ಪಡೆದಿದ್ದ ದಿನೇಶ(17 ವರ್ಷ 1 ತಿಂಗಳು) ಹಾಗೂ ಕುಮಾರಸ್ವಾಮಿ(16 ವರ್ಷ 7 ತಿಂಗಳು) ಎಂಬ ಇಬ್ಬರು ಬಾಲಕರು ಜನವರಿ 8 ರಂದು ಬೆಳಿಗ್ಗೆ 9.45 ಗಂಟೆಯಿಂದ ನಾಪತ್ತೆಯಾಗಿದ್ದು, ಬಾಲಕರನ್ನು ಅಪಹರಣ ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 04/2026, ಭಾರತೀಯ ನ್ಯಾಯ ಸಂಹಿತೆ ಕಲಂ 137(2) ಅಡಿ ಪ್ರಕರಣ ದಾಖಲಿಸಲಾಗಿದೆ. 

ಕಾಣೆಯಾದ ಬಾಲಕರ ಚಹರೆ ವಿವರ: 

ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಗೊರೆಬಾಳದ ದಿನೇಶ ತಂದೆ ನಿಂಗಪ್ಪ ಎಂಬ 17 ವರ್ಷದ ಬಾಲಕ 158 ಸೆಂಟಿ ಮೀಟರ್ ಎತ್ತರವಿದ್ದು, ತೆಳುವಾದ ಮೈಕಟ್ಟು, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದಾನೆ. ಕನ್ನಡ ಭಾಷೆ ಮಾತನಾಡುತ್ತಾನೆ. ಕಾಣೆಯಾದಾಗ  ಕಡು ಗ್ರೇ ಬಣ್ಣದ ಸ್ವೆಟರ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದನು. ಯಲಬುರ್ಗಾ ತಾಲ್ಲೂಕಿನ ಮಾರನಾಳ ಗ್ರಾಮದ ಕುಮಾರಸ್ವಾಮಿ ತಂ.ಯಮನೂರ​‍್ಪ ಎಂಬ  ವರ್ಷದ ಬಾಲಕ 167 ಸೆಂಟಿ ಮೀಟರ್ ಎತ್ತರವಿದ್ದು, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ಕೋಲು ಮುಖ ಹೊಂದಿದ್ದಾನೆ. ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾನೆ. ಕಾಣೆಯಾದಾಗ ತಿಳಿ ಹಸಿರು ಬಣ್ಣದ ಶರ್ಟ್‌ ಮತ್ತು ಕ್ರೀಂ ಬಣ್ಣದ ಪ್ಯಾಂಟ್ ಧರಿಸಿದ್ದನು. 

ಮೇಲ್ಕಂಡ ಚಹರೆಯ ಬಾಲಕರ ಬಗ್ಗೆ ಯಾರಿಗಾದರೂ ಮಹಿತಿ ಇದ್ದಲ್ಲಿ ಅಥವಾ ದೊರೆತಲ್ಲಿ ಮಹಿಳಾ ಪೊಲೀಸ್ ಠಾಣೆ ದೂ.ಸಂ: 08539-221233, ಪಿ.ಐ: 8073476715, ತನಿಖಾಧಿಕಾರಿ ಸೂರ್ಯಕಾಂತ, ಎ.ಎಸ್‌.ಐ: 97438421109, ಕೊಪ್ಪಳ ಕಂಟ್ರೋಲ್ ರೂಂ.: 9480803700 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಫೆ.12 ರಂದು ಕೊಪ್ಪಳದಲ್ಲಿ ವಾಕ್ ಇನ್ ಇಂಟರ್‌ವ್ಯೂವ್ 

ಕೊಪ್ಪಳ  05:  ಕೊಪ್ಪಳದ ತಿಕೋಟಿಕರ್ ಪೆಟ್ರೋಲ್ ಬಂಕ್ ಹತ್ತಿರದ ಟೈಗರ್ ಕ್ಯಾಪಿಟಲ್ ಪ್ರೈ. ಲಿ., ವತಿಯಿಂದ ಫೆಬ್ರವರಿ 12 ರಂದು ಬೆಳಿಗ್ಗೆ 9 ಗಂಟೆಯಿಂದ 1 ಗಂಟೆಯವರೆಗೆ ವಾಕ್ ಇನ್ ಇಂಟರ್‌ವ್ಯೂವ್ ಆಯೋಜಿಸಲಾಗಿದೆ.  

ರಿಲೇಶನ್‌ಶಿಪ್ ಮ್ಯಾನೇಜರ್ ಹುದ್ದೆ ಖಾಲಿ ಇದ್ದು, ಕೊಪ್ಪಳ, ಕುಷ್ಟಗಿ, ಯಲಬುರ್ಗಾ, ಕುಕನೂರು, ಗಂಗಾವತಿ ತಾಲ್ಲೂಕುಗಳಿಗೆ ಆಯ್ಕೆ ಮಾಡಿಕೊಳ್ಳಲಾಗುವುದು. ಯಾವುದೇ ಪದವಿ ವಿದ್ಯಾರ್ಹತೆ ಹೊಂದಿದ  18 ರಿಂದ 30 ವರ್ಷ ನಿರುದ್ಯೋಗಿ ಯುವಕರು ದೃಢೀಕರಿಸಲಾದ ತಮ್ಮ ವಿದ್ಯಾರ್ಹತೆಯ ಎಲ್ಲ ಪ್ರಮಾಣ ಪತ್ರಗಳ 2 ಪ್ರತಿಗಳೊಂದಿಗೆ ಮತ್ತು ಆಧಾರ ಕಾರ್ಡಿನ ಪ್ರತಿ, ಬಯೋಡಾಟಾ (ರೆಸುಮ್) ಹಾಗೂ ಪಾಸ್‌ಪೋರ್ಟ್‌ ಅಳತೆಯ 2 ಭಾವಚಿತ್ರಗಳೊಂದಿಗೆ ಈ ವಾಕ್ ಇನ್ ಇಂಟರ್‌ವ್ಯೂವನಲ್ಲಿ ಭಾಗವಹಿಸಿ, ಉದ್ಯೋಗದ ನೆರವನ್ನು ಪಡೆಯಬಹುದಾಗಿದೆ. ನೇರ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ ಉಚಿತ ಪ್ರವೇಶವಿದ್ದು, ಯಾವುದೇ ಶುಲ್ಕ ಇರುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಆಡಳಿತ ಭವನ, ಮೊದಲನೇ ಮಹಡಿ, ಕೊಪ್ಪಳ ಇವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ದ್ರಾಕ್ಷಿ ಕಲ್ಲು ಕಂಬ ಕಳ್ಳತನ ಪ್ರಕರಣ: ಅಪರಾಧಿಗಳಿಗೆ ದಂಡ ಸಹಿತ ಜೈಲು ಶಿಕ್ಷೆ ಪ್ರಕಟ 

ಕೊಪ್ಪಳ  5:  ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಆನೆಗುಂದಿ ಸೀಮಾದಲ್ಲಿ ದ್ರಾಕ್ಷಿ ಕಲ್ಲು ಕಂಬಗಳನ್ನು ಕಳ್ಳತನ ಮಾಡಿದ್ದ ಪ್ರಕರಣದಲ್ಲಿ ಆರೋಪಿಗಳ ಮೇಲಿನ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗಳಿಗೆ ದಂಡ ಸಹಿತ ಜೈಲು ಶಿಕ್ಷೆ ಪ್ರಕಟಿಸಿ ಗಂಗಾವತಿಯ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್‌.ಸಿ ನ್ಯಾಯಾಲಯದ ನ್ಯಾಯಾಧೀಶರಾದ ನಾಗೇಶ ಪಾಟೀಲ ಅವರು ಫೆಬ್ರವರಿ 4 ರಂದು ತೀರ​‍್ು ಪ್ರಕಟಿಸಿದ್ದಾರೆ. 

ಪ್ರಕರಣದ ಸಾರಾಂಶ: 

ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರೋಪಿ ನಂ.1 ರಿಂದ 7 ನೇದ್ದವರು ಕೂಡಿಕೊಂಡು ಯಾವುದೇ ಇಲಾಖೆಯಿಂದ ಅಧಿಕೃತವಾಗಿ ಪರವಾನಿಗೆಯನ್ನು ಪಡೆದುಕೊಳ್ಳದೇ ರಾಯಲ್ಟಿ ಪಾವತಿಸದೇ ಅನಧಿಕೃತವಾಗಿ ಆನೆಗುಂದಿ ಸೀಮಾದಲ್ಲಿ ಬರುವ ಸರಕಾರಿ ಗುಡ್ಡ ಸರ್ವೆ ನಂ. 193 ನೇದ್ದರಲ್ಲಿ ಅತಿಕ್ರಮ ಪ್ರವೇಶ ಮಾಡಿ ಉದ್ದನೆಯ ದ್ರಾಕ್ಷಿ ಕಲ್ಲು ಕಂಬಗಳನ್ನು ಒಡೆದು ತೆಗೆದು ಕಳ್ಳತನ ಮಾಡಿ ಆರೋಪಿ 1 ನೇದ್ದವನು ಆರೋಪಿ 2 ನೇದ್ದವನ ಮಾಲೀಕತ್ವದ ಟಾಟಾ ಕಂಪನಿಯ ಲಾರಿ ನಂಬರ್ ಕೆಎ-28/ಬಿ-7024 ನೇದ್ದರಲ್ಲಿ ಲೋಡ್ ಮಾಡಿಕೊಂಡು ಸಾಗಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಸಾಕ್ಷಿ 1 ನೇದ್ದವರು ಪಂಚರಾದ ಸಾಕ್ಷಿ 2 ಮತ್ತು 3 ಹಾಗೂ ಕಂದಾಯ ಇಲಾಖೆ, ಪೋಲಿಸ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯವರಾದ ಸಾಕ್ಷಿ 4 ರಿಂದ 8 ನೇದ್ದವರುಗಳು ಕೂಡಿಕೊಂಡು ದಿನಾಂಕ: 24-07-2021 ರಂದು ಬೆಳಗಿನ ಜಾವ 5-45 ಗಂಟೆಯ ಸುಮಾರಿಗೆ ದಾಳಿ ಮಾಡಿ ಆನೆಗುಂದಿ ಗುಡ್ಡದಲ್ಲಿ ಲಾರಿಯನ್ನು ಹಿಡಿದು ಆರೋಪಿತರು ಕಳ್ಳತನ ಮಾಡಿದ್ದ ಲಾರಿಯಲ್ಲಿದ್ದ ರೂ.24,000/- ಬೆಲೆ ಬಾಳುವ 15 ಟನ್ ದ್ರಾಕ್ಷಿ ಕಲ್ಲು ಕಂಬಗಳನ್ನು ಜಪ್ತಿ ಮಾಡಿದ್ದರು. 

ಆರೋಪಿತರ ವಿರುದ್ಧ ಕಲಂ. 447, 379 ಐಪಿಸಿ ಅಡಿ ಪ್ರಕರಣ ದಾಖಲಾಗಿತ್ತು. ಆರೋಪಿತರ ಮೇಲೆ ತನಿಖೆಯಲ್ಲಿ ಸಾಕ್ಷ್ಯಾಧಾರಗಳು ಕಂಡುಬಂದಿದ್ದರಿಂದ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಆಗಿನ ತನಿಖಾಧಿಕಾರಿಯಾದ ಪ್ರಕಾಶ ಉಮಚಗಿ ಅವರು ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ತದನಂತರ ಪ್ರಕರಣದ ಸವಿಸ್ತಾರ ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಾಲಯವು ಪ್ರಕರಣದ ಆರೋಪಿ ನಂ-1 ಅರುಣ ಚವ್ಹಾಣ, ಆರೋಪಿ ನಂ-2 ಗುರ​‍್ಪ ಶಿಳ್ಳಿ, ಆರೋಪಿ ನಂ-3 ಕೃಷ್ಣಮೂರ್ತಿಅಮೂರ್ತಿ, ಆರೋಪಿ ನಂ-4 ಚನ್ನಬಸಪ್ಪ ಕೆ. ಆರೋಪಿ ನಂ-5 ನಾಗರಾಜಅತಂಗರಾಜ, ಆರೋಪಿ ನಂ-6 ಗೋಪಿ, ಆರೋಪಿ ನಂ-7 ಕುಮಾರ ಇವರ ಮೇಲೆ ವಿಚಾರಣೆಯಲ್ಲಿ ಸಾಕ್ಷ್ಯಾಧಾರಗಳು ಕಂಡುಬಂದಿದ್ದರಿಂದ ಆರೋಪಿತರು ದೋಷಿಯೆಂದು ನಿರ್ಣಯಿಸಿ ನ್ಯಾಯಾಲಯ ತೀರ​‍್ು ಪ್ರಕಟಿಸಿದೆ.ಆರೋಪಿತರಿಗೆ ಭಾರತೀಯ ದಂಡ ಸಂಹಿತೆ ಕಲಂ 447 ಅಪರಾಧಕ್ಕೆ 3 ತಿಂಗಳು ಕಾಲ ಸಾದಾ ಸೆರೆಮನೆವಾಸ ಅನುಭವಿಸತಕ್ಕದ್ದು ಮತ್ತು ತಲಾ ರೂ.500/- ಜುಲ್ಮಾನೆ ಮತ್ತು ಭಾರತೀಯ ದಂಡ ಸಂಹಿತೆ ಕಲಂ 379 ಅಪರಾಧಕ್ಕೆ 3 ವರ್ಷ ಸೆರೆವಾಸ ಅನುಭವಿಸತಕ್ಕದ್ದು ಮತ್ತು ತಲಾ ರೂ.10,000/- ಜುಲ್ಮಾನೆ ಶಿಕ್ಷೆಯನ್ನು ವಿಧಿಸಿ ನ್ಯಾಯಾಧೀಶರು ಆದೇಶಿಸಿದ್ದಾರೆ. 

ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ನಿರಂಜನಸ್ವಾಮಿ ಡಾ.ದೇವಯ್ಯ ಸ್ವಾಮಿ ಹಿರೇಮಠ ಇವರು ವಾದ ಮಂಡಿಸಿದ್ದರು. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಶ್ರೀಶೈಲ್, ವೆಂಕಟೇಶ, ಆಂಜಿನಿ ರವರು ಪ್ರಕರಣದ ವಿಚಾರಣೆಯ ಸಮಯದಲ್ಲಿ ಸಾಕ್ಷಿಗಳನ್ನು ಸಮಯಕ್ಕೆ ಸರಿಯಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಸಾಕಷ್ಟು ಸಹಕಾರ ನೀಡಿದ್ದಾರೆ ಎಂದು ಗಂಗಾವತಿಯ ಸಹಾಯಕ ಸರ್ಕಾರಿ ಅಭಿಯೋಜಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.ಫೆ.7 ಮತ್ತು 8 ರಂದು ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ-2025-26 

ಕೊಪ್ಪಳ  05:  ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು, ಅಪರ ಆಯ್ತುಕರ ಕಛೇರಿ ಕಲಬುರಗಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಶಾಲಾ ಶಿಕ್ಷಣ ಇಲಾಖೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ 2025-26ರ ಉದ್ಘಾಟನಾ ಕಾರ್ಯಕ್ರಮವನ್ನು ಫೆ.7 ಮತ್ತು 8 ರಂದು ಬೆಳಿಗ್ಗೆ 10 ಗಂಟೆಗೆ ಕಾರಟಗಿಯ ಕರ್ನಾಟಕ ಪಬ್ಲಿಕ್ ಶಾಲೆಯ(ಪ್ರೌಢಶಾಲಾ ವಿಭಾಗ) ಶ್ರೀ ಸಿದ್ದೇಶ್ವರ ರಂಗ ಮಂದಿರದಲ್ಲ್ಲಿ ಆಯೋಜಿಸಲಾಗಿದೆ. 

ಕಾರ್ಯಕ್ರಮವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಮಧು ಬಂಗಾರ​‍್ಪ ಅವರು ಉದ್ಘಾಟಿಸುವರು. ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಎಸ್‌. ಹೊರಟ್ಟಿ ಅವರು ಕಾರ್ಯಕ್ರಮದ ಘನ ಉಪಸ್ಥಿತಿ ವಹಿಸುವರು. ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ತಂಗಡಗಿ ಶಿವರಾಜ ಸಂಗಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸ್ಪರ್ಧೆಗಳ ಉದ್ಘಾಟನೆ ಮಾಡುವವರು.  

ವಿಶೇಷ ಅತಿಥಿಗಳಾಗಿ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಕುಷ್ಟಗಿ ಶಾಸಕರಾದ ದೊಡ್ಡನಗೌಡ ಹನುಮಗೌಡ ಪಾಟೀಲ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ಶಾಸಕರಾದ ಬಸವರಾಜ ರಾಯರಡ್ಡಿ ಅವರು ಆಗಮಿಸುವರು.ಮುಖ್ಯ ಅತಿಥಿಗಳಾಗಿ ಕೊಪ್ಪಳ ಸಂಸದರಾದ ಕೆ.ರಾಜಶೇಖರ ಹಿಟ್ನಾಳ, ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ಗಂಗಾವತಿ ಶಾಸಕರಾದ ಜಿ.ಜನಾರ್ಧನ ರೆಡ್ಡಿ, ವಿಧಾನ ಪರಿಷತ್ ಸದಸ್ಯರುಗಳಾದ ಶಶೀಲ್ ಜಿ.ನಮೋಶಿ, ಡಾ.ಚಂದ್ರಶೇಖರ ಬಿ.ಪಾಟೀಲ, ಶರಣಗೌಡ ಅನ್ನದಾನಗೌಡ ಪಾಟೀಲ ಬಯ್ಯಾಪೂರ ಹಾಗೂ ಹೇಮಲತಾ ನಾಯಕ, ಪುಟ್ಟಣ್ಣ, ಡಿ.ಟಿ. ಶ್ರೀನಿವಾಸ, ಕೆ. ವಿವೇಕಾನಂದ, ಪ್ರಕಾಶ ಬಾಬಣ್ಣ, ಎಸ್‌.ಎಲ್‌. ಭೋಜೆಗೌಡ, ಮುನಿರಾಬಾದ್ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ತುಂಗಭದ್ರಾ ಯೋಜನೆಯ ಅಧ್ಯಕ್ಷರಾದ ಹಸನಸಾಬ ನಬಿಸಾಬ ದೋಟಿಹಾಳ, ಕಾರಟಗಿ ಪುರಸಭೆಯ ಅಧ್ಯಕ್ಷರಾದ ಮಂಜುನಾಥ ಮೇಗೂರು, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಭಾಗವಹಿಸುವರು. 

ವಿಶೇಷ ಆಹ್ವಾನಿತರಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ವಿ.ರಶ್ಮಿ ಮಹೇಶ, ಕೃಷ್ಣಭಾಗ್ಯ ಜಲ ನಿಗಮ ನಿಯಮಿತದ ವ್ಯವಸ್ಥಾಕ ನಿರ್ದೇಶಕರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಕೆ.ಪಿ ಮೋಹನರಾಜ್, ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಾದ ವಿಕಾಸ್ ಕಿಶೋರ್ ಸುರಳಕರ್, ಸಮಗ್ರ ಶಿಕ್ಷಣ ಮತ್ತು ರಾಜ್ಯ ಯೋಜನಾ ನಿರ್ದೇಶಕರಾದ ಕೆ.ವಿ. ವಿದ್ಯಾಕುಮಾರಿ ಎಂ., ಕಲಬುರಗಿಯ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಾದ ಪಾಂಡ್ವೆ ರಾಹುಲ್ ತುಕಾರಾಮ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಭರತ್ ಎಸ್‌. ಹಾಗೂ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಈಶ್ವರ ಉಳ್ಳಾಗಡ್ಡಿ ಅವರು ಆಗಮಿಸುವರು. 

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್‌.ಅರಸಿದ್ದಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಸೋಮಶೇಖರ ಗೌಡ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕರಾದ(ಅಭಿವೃದ್ಧಿ) ಅನಂತಕುಮಾರ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರದ ಜಗದೀಶ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.