ಕೊಲ್ಹಾರ ದ್ಯಾಮವ್ವ ದೇವಿ ಜಾತ್ರೆ: ಮೇ 4ರಂದು ಕೃಷಿ ಮೇಳ

ಕೊಲ್ಹಾರ ದ್ಯಾಮವ್ವ ದೇವಿ ಜಾತ್ರೆ: ಮೇ 4ರಂದು ಕೃಷಿ ಮೇಳ Kolhara Dhyamava Devi Fair: Agricultural fair on May 4th


ಕೊಲ್ಹಾರ 22: ಪಟ್ಟಣದ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವದಲ್ಲಿ ಮೇ 4ರಂದು ಸೋಮವಾರ ಮುಂಜಾನೆ 10 ಗಂಟೆಗೆ ಕೃಷಿ ಮೇಳ ಪ್ರಾರಂಭ. ಮದ್ಯಾಹ್ನ 3 ಗಂಟೆಗೆ ಹಂದರ ತಪ್ಪಲು ಮೆರವಣಿಗೆ ಅರವಟಿಗಿ ಬಸವೇಶ್ವರ ದೇವಸ್ಥಾನದಿಂದ ಮೆರವಣಿಗೆ ಮುಖಾಂತರ ದೇವಸ್ಥಾನಕ್ಕೆ ಆಗಮಿಸಿ ಹಂದರ ತಪ್ಪಲ ಹಾಕುವದು ಹಾಗೂ ದೇವಸ್ಥಾನಕ್ಕೆ ಕಳಸಾರೋಹನ ಮಾಡುವುದು. 

ಮೇ 5ರಂದು ಮುಂಜಾನೆ 5 ಘಂಟೆಗೆ ಹೋಮಹವನ ಕಾರ್ಯಕ್ರಮದಲ್ಲಿ ನವದಂಪತಿಗಳು ಭಾಗವಹಿಸುವರು. ಮುಂಜಾನೆ 10ಗಂಟೆಗೆ ಶ್ರೀದೇವಿ ಗಂಗಾ ಸ್ಥಳಕ್ಕೆ ಹೋಗಿ ಗಂಗಾ ಸ್ನಾನ ಮುಗಿಸಿ ಪುನಃ ಸಕಲ-ವಾದ್ಯಗಳೊಂದಿಗೆ ಭವ್ಯ ಮೆರವಣಿಗೆ ಮುಖಾಂತರ ದೇವಸ್ಥಾನಕೆ ಮಧ್ಯಾಹ್ನ 3ಗಂಟೆಗೆ ದೇವಿ ಆಗಮನ, ಸಾಯಂಕಾಲ 6 ಗಂಟೆಗೆ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ, ವಿಶೇಷ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಾಗೂ ಧರ್ಮ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

ಮೇ 6ರಂದು ಮುಂಜಾನೆ 9ಗಂಟೆಗೆ ಮುತ್ತೈದೆಯರಿಗೆ ಉಡಿತುಂಬುವ ಹಾಗೂ ಆಧುನಿಕ ಸಮಾಜದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮಹಿಳೆಯ ಪಾತ್ರ ವಿಚಾರಗೋಷ್ಠಿ ಮಧ್ಯಾಹ್ನ 12ಗಂಟೆಗೆ ರೈತರಿಗೆ ಕೃಷಿ ತಜ್ಞರಿಂದ ಹಾಗೂ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ರೈತರಿಂದ ಕೃಷಿ ಸಂವಾದ ಕಾರ್ಯಕ್ರಮ ಇರುತ್ತದೆ. 

ಅರ್ಜಿ ಆಹ್ವಾನ: ಕೊಲ್ಹಾರ ತಾಲ್ಲೂಕು ವ್ಯಾಪ್ತಿಯಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇಕಡಾ 90 ಅಂಕ ಪಡೆದ ವಿದ್ಯಾರ್ಥಿಗಳು ಶಾಲಾ ದೃಡಿಕರಣ ಅಂಕ ಪಟ್ಟಿ ಹಾಗೂ ಆಧಾರ ಕಾರ್ಡ್‌ ದಾಖಲೆಗಳನ್ನು ಮೇ 1ರೊಳಗೆ ಅಗಸಿ ಹತ್ತಿರ ಇರುವ ಕೊಲ್ಹಾರ ವಿವಿಧೋದ್ದೇಶ ಸಹಕಾರಿ ಬ್ಯಾಂಕ್‌ನಲ್ಲಿ ಕೊಡಬೇಕು. ಗುರುವಾರ ಮೇ 7 ರಂದು ಸಾಯಂಕಾಲ 4ಗಂಟೆಗೆ ಹಂದರ ತಪ್ಪಲ ಇಳಿಯುವುದರೊಂದಿಗೆ ಜಾತ್ರಾ ಮಹೋತ್ಸವ ಮುಕ್ತಾಯಗೊಳ್ಳಲಿದೆ ಎಂದು ದ್ಯಾಮವ್ವ ದೇವಿ ಸೇವಾ ಸಮಿತಿಯವರು ತಿಳಿಸಿದ್ದಾರೆ. 

ಪತ್ರಿಕಾಗೋಷ್ಠಿಯಲ್ಲಿ ದ್ಯಾಮವ್ವ ದೇವಿ ಸೇವಾ ಸಮಿತಿ ಅಧ್ಯಕ್ಷ ಎಮ್ ಎಸ್ ಎಸ್ ಬೆಳ್ಳುಬ್ಬಿ, ಕಾರ್ಯದರ್ಶಿ ಈರಯ್ಯ ಮಠಪತಿ, ಬಸಪ್ಪ ಬಾಟಿ, ಸಂಗಪ್ಪ ಪತಂಗಿ, ನಾಮದೇವ ಪವಾರ, ಚೆನ್ನಯ್ಯ ಗಣಕುಮಾರ, ಮಲ್ಲಪ್ಪ ಗಣಿ, ಸಂಗಪ್ಪ ತುಂಬರಮಟ್ಟಿ, ರಾಜು ತುಂಬರಮಟ್ಟಿ ಹಾಜರಿದ್ದರು.