ಬಿಎಲ್ ಎ ಎಸ್ ಐ ಆರ್ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿರಿ : ಶಾಸಕ ಪಠಾಣ
Know complete information about BLASIR: MLA Pathana
ಲೋಕದರ್ಶನ ವರದಿ
ಶಿಗ್ಗಾವಿ 25: ಪ್ರತಿಯೊಬ್ಬ ಬಿ ಎಲ್ ಎ ಎಸ್ ಐ ಆರ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳ ಬೇಕು ಎಂದು ಶಾಸಕ ಯಾಸೀರ ಅಹ್ಮದಖಾನ ಪಠಾಣ ಹೇಳಿದರು. ಪಟ್ಟಣದ ಗುಜರಾತ್ ಶಾದಿ ಮಹಲನಲ್ಲಿ ನಡೆದ ಹಾವೇರಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಶಿಗ್ಗಾವ್ ಸವಣೂರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಬಿ ಎಲ್ ಎ -2 ರವರಿಗೆ ಎಸ್ ಐ ಆರ್ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ಅವರು ನಿಮ್ಮ ಬೂತನಲ್ಲಿ ಯಾವುದೇ ವೋಟರ್ ಗಳು ರದ್ದಾಗಬಾರದು ಅದು ನಿಮ್ಮ ಜವಾಬ್ದಾರಿಯಾಗಿರುತ್ತದೆ ಪ್ರತಿಯೊಬ್ಬರಿಗೆ ವೋಟರ್ ನೋಂದಣಿಯನ್ನು ಮಾಡಿಸಬೇಕು ಎಂದರು.
ಜಿಲ್ಲಾ ಅಧ್ಯಕ್ಷ ಸಂಜೀವ ಕುಮಾರ ನೀರಲಗಿ ಮಾತನಾಡಿ ಮೊದಲನೆಯದಾಗಿ ಬಿ ಎಲ್ ಎ ಗಳ ಕೆಲಸವನ್ನು ಏನೇ ಎಂದು ತಿಳಿದುಕೊಳ್ಳಬೇಕು ಒಂದು ಬೂತನಲ್ಲಿ ಪಕ್ಷ ಗೆಲ್ಲಬೇಕೆಂದರೆ ಬಿ ಎಲ್ ಎ ಗಳ ಮಹತ್ವ ಮತ್ತು ಕೆಲಸ ಬಹಳಷ್ಟು ಇದೆ ಬಿ ಎಲ್ ಎ ಗಳು ತಮ್ಮ ಬೂತನಲ್ಲಿ ಎಷ್ಟು ವೋಟರ ಗಳಿವೆ ಯಾವುದು ಹೊಸದಾಗಿ, ರದ್ದಾಗಿರುವ , ವರ್ಗಾವಣೆಯಾಗಿರುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಿರ ಬೇಕು ಬೂತ ಗೆಲ್ಲಬೇಕು ಅಂದರೆ ಬಿ ಎಲ್ ಎ ಗಳು ಹಾಗೂ ಅಧ್ಯಕ್ಷರು ಪ್ರಾಮಾಣಿಕವಾಗಿ ಕೆಲಸಮಾಡಿ ಪಕ್ಷವನ್ನು ಗೆಲ್ಲಿಸಬೇಕು ಎಂದರು.ಉಪನ್ಯಾಸಕ ಮುತ್ತುರಾಜ್ ರವರು ಎಸ್ ಐ ಆರ್ ಬಗ್ಗೆ ಸವಿಸ್ತಾರವಾಗಿ ವಿವರಣೆ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರ ಮೆಹರವಾಡೆ, ಶಿಗ್ಗಾವಿ ಬ್ಲಾಕ್ ಅಧ್ಯಕ್ಷ ಎಸ್.ಎಫ್. ಮಣಕಟ್ಟಿ, ಸವಣೂರ ಬ್ಲಾಕ್ ಅಧ್ಯಕ್ಷ ರಮೇಶ ಹರಿಜನ, ಒಬಿಸಿ ಘಟಕ ಅದ್ಯಕ್ಷ ಕೃಷ್ಣಪ್ಪ ಕಂಬಳಿ, ಶಂಬು ಆಜೂರ್, ಮಹಾಂತೇಶ್ ಸಾಲಿ ಸೇರಿದಂತೆಬಿ ಎಲ್ ಎ 2 ಗಳು ಮತ್ತು ಹಿರಿಯ ಹಾಗೂ ಯುವ ಮುಖಂಡರು ಉಪಸ್ಥಿತರಿದ್ದರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 