ಕಿತ್ತೂರು ಕರ್ನಾಟಕದ ವಿಭಾಗದ ಕರಡು ಪ್ರತಿ ತಯಾರಿಕೆ ಪ್ರಗತಿ ಪರೀಶೀಲನೆ ಸಭೆ

ಕಿತ್ತೂರು ಕರ್ನಾಟಕದ ವಿಭಾಗದ ಕರಡು ಪ್ರತಿ ತಯಾರಿಕೆ ಪ್ರಗತಿ ಪರೀಶೀಲನೆ ಸಭೆ  Kittur Karnataka Division Drafting Progress Review Meeting

ಕಿತ್ತೂರು ಕರ್ನಾಟಕದ ವಿಭಾಗದ ಕರಡು ಪ್ರತಿ ತಯಾರಿಕೆ ಪ್ರಗತಿ ಪರೀಶೀಲನೆ ಸಭೆ  

ಗದಗ 08: ರಾಜ್ಯ ಸರ್ಕಾರದ ಮಹತ್ವದ ವಿಕೇಂದ್ರೀಕರಣ ಯೋಜನೆ ಅನುಷ್ಠಾನದ ಭಾಗವಾಗಿ ಕಿತ್ತೂರು ಕರ್ನಾಟಕದ ಎಲ್ಲ ಜಿಲ್ಲೆಗಳ 2026-27 ನೇ ಸಾಲಿನ ಅಭಿವೃದ್ಧಿ ಯೋಜನೆಗಳ ಕರಡು ಪ್ರತಿ ತಯಾರಿಕೆ ಪ್ರಗತಿ ಪರೀಶೀಲನೆ ಸಭೆ ಬುಧವಾರ ಗದಗ ನಗರದ ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಮಚಾಯತ್ ರಾಜ್ ವಿವಿಯಲ್ಲಿ ಜರುಗಿತು.ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮುಂಬರುವ ಸಾಲಿನ ಅಭಿವೃದ್ಧಿ ಯೋಜನೆಗಳನ್ನು  ವಾರ್ಡ ವಾರು, ಗ್ರಾಮ ವಾರು, ಗ್ರಾಪಂ, ತಾಲ್ಲೂಕು, ಜಿಪಂ ಹಂತದಲ್ಕಿ ಸಭೆ ನಡೆಸಿ ಕರಡು ಪ್ರತಿಗಳನ್ನು ತಯಾರಿಸಿ ಜಿಲ್ಲಾಡಳಿತ ಪಡೆದಿದೆ.  

ಇದೇ ವರದಿಗಳ ಪ್ರಗತಿ ಪರೀಶೀಲನೆ ಸಭೆ ನಡೆದು ಸಾದಕ ಬಾಧಕ ಕುರಿತು ಚರ್ಚೆ ಜರುಗಿತು. ರಾಜ್ಯ ನೀತಿ ಮತ್ತು ಯೋಜನೆ ಆಯೋಗದ ಉಪಾಧ್ಯಕ್ಷ ಬಿ.ಆರ್‌. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾರ್ಚ ತಿಂಗಳಲ್ಲಿ ಬಜೆಟ್ ಮಂಡನೆ ಆಗುತ್ತದೆ. ಅದಕ್ಕೆ ಪೂರ್ವದಲ್ಲಿ ನವೆಂಬರ್ ಒಳಗಾಗಿ ಗ್ರಾಪಂ, ವಾರ್ಡ ಯೋಜನೆಗಳ ಕರಡು ಪ್ರತಿಗಳಿಗೆ ಅನುಮೋದನೆ ಪಡೆಯಬೇಕು ಎಂದು ಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದರು. ಆದರೆ, ಇನ್ನೂ ವರೆಗೂ ಸಮರ​‍್ಕವಾಗಿ ಅನುಷ್ಠಾನಗೊಂಡಿಲ್ಲ. ಇದಕ್ಕೆ ಸರ್ಕಾರಿ, ರಾಜಕಾರಣ, ಆಡಳಿತ ವ್ಯವಸ್ಥೆಯೇ ಕಾರಣವೆಂದರು.ವಿಕೇಂದ್ರೀಕರಣ ವ್ಯವಸ್ಥೆಯೂ ಸಮರ​‍್ಕವಾಗಿ ರಾಜ್ಯದಲ್ಲಿ ಅನುಷ್ಠಾನಗೊಂಡಿಲ್ಲ. ಕೇಂದ್ರೀಕರಣ ವ್ಯವಸ್ಥೆಯಿಂದ ಸರ್ವಾಧಿಕಾರತ್ವ ಅಧಿಕಗೊಳ್ಳುತ್ತದೆ.  

ಕೇಂದ್ರೀಕರಣ ವ್ಯವಸ್ಥೆಯಿಂದ ಗ್ರಾಮೀಣ ಮತ್ತು ನಗರದ ನಡುವೆ ಕಂದಕ ಸೃಷ್ಟಿ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಜಿಲ್ಲಾ ಯೋಜನಾ ಸಮಿತಿಯು ಅ.10 ರ ಒಳಗಾಗಿ ವಾರ್ಡವಾರು, ತಾಪಂ, ಜಿಪಂನಲ್ಲಿ ಸಭೆ ನಡೆಸಿ ಯೋಜನೆಗಳ ಕುರುಡು ಪ್ರತಿಗಳನ್ನು ವಿಕೇಂದ್ರೀಕರಣ ಸಮಿತಿಗೆ ಸಲ್ಲಿಕೆ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ನಿರ್ದೇಶನ ನೀಡಿದ್ದರು. ಕೇವಲ ಇನ್ನೂ ಎರಡು ದಿನ ಬಾಕಿ ಇರುವುದರಿಂದ ಚಮತ್ಕಾರ ಮಾಡಲು ಸಾಧ್ಯವಿಲ್ಲ. ಇನ್ನೂ 15 ದಿನಗಳ ಒಳಗಾಗಿ ವಾರ್ಡವಾರು, ತಾಪಂ, ಜಿಪಂಗಳಿಂದ ಅಭಿವೃದ್ಧಿ ಯೋಜನೆ ಗಳ ಕುರಿತು ಕರಡು ಪ್ರತಿ ಪಡೆದು ಸಭೆ ನಡೆಸಿ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಸಲ್ಲಿಡಬೇಕು. ಮುಂಬರುವ ಬಜೆಟ್ ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಮೀಸಲೀಡಲು ಸಾಧ್ಯವಾಗುತ್ತದೆ ಎಂದು ಉಪಾಧ್ಯಕ್ಷ ಬಿ.ಆರ್‌. ಪಾಟೀಲ ಹೇಳಿದರು.ಪ್ರದೇಶವಾರು ಗ್ರಾಮೀಣ ಭಾಗದ ಸಮಸ್ಯೆಗಳು ಬೇರೆ ಬೇರೆ ಆಗಿರುತ್ತವೆ. ಜಿಪಂ ಸಿಇಓಗಳು ಗ್ರಾಮೀಣ ಭಾಗದ ಅಭಿವೃದ್ಧಿ, ನೀರು ಸಂರಕ್ಷಣೆ, ಸಮುದಾಯದ ಅಭಿವೃದ್ಧಿಗೆ ಕನ್ನಡಿ ಆಗಿರುತ್ತಾರೆ.  

ಜತೆಗೆ ಕೋವಿಡ್ ನಂತರ ಸ್ಥಗಿತಗೊಂಡಿದ್ದ ಮಾನವ ಅಭಿವೃದ್ಧಿ ಸೂಚ್ಯಂಕ ಯೋಜನೆಯನ್ನು ಈಗ ಕೈಗೆತ್ತಿಕೊಳ್ಳಲಾಗಿದೆ ಎಂದರು. ಹಿರಿಯ ನಿರ್ದೆಶಕ ಹಾಗೂ ಪದನಿಮಿತ್ಯ ಸರದಕಾರದ ಕಾರ್ಯದರ್ಶಿ ಬಸವರಾಜ ಎಸ್ ಅವರು ಯೋಜನೆ ರೂಪಿಸುವಲ್ಲಿ ವಹಿಸಬೇಕಾದ ಅಂಶಗಳ ಬಗ್ಗೆ ತಿಳಿಸಿದರು.ಕಾರ್ಯಕ್ರಮದಲ್ಲಿ ಗ್ರಾಪಂ, ತಾಪಂ, ವಾರ್ಡ ಕುರಿತು ಸಭೆ ನಡೆಸದ ಕುರಿತು ಚರ್ಚೆ ಜರುಗಿತು. ಈ ವೇಳೆ ಜಿಪಂ ಬೆಳಗಾವಿ ಸಿಇಓ ರಾಹುಲ್ ಶಿಂದೆ, ವಿವಿ ಕುಲಪತಿ ಸುರೇಶ ನಾಡಗೌಡರ, ಬಾಗಲಕೋಟೆ ಸಿಇಓ ಶಶೀಧರ ಕುರೇರ, ಹಾವೇರಿ ಸಿಇಓ ರುಚಿ ಬಿಂದಾಲ, ಧಾರವಾಡ ಸಿಇಓ ಭುವನೇಶ ಪಾಟೀಲ, ವಿಜಯಪುರ ಸಿಇಓ ರಿಷಿ ಆನಂದ, ಉತ್ತರ ಕನ್ನಡ ಸಿಇಓ ದೀಲೀಪ್ ಶಶೀ, ಯೋಜನಾ ಇಲಾಖೆ ಜಂಟಿ ಕಾರ್ಯದರ್ಶಿ ಬಿ. ಜಾನಕಿರಾಂ, ಮಾಜಿ ಜಿಪಂ ಅಧ್ಯಕ್ಷ ವಾಸಣ್ಣ ಕುರಡಗಿ, ಜಿಲ್ಲಾಧಿಕಾರಿ ಸಿ.ಎನ್‌. ಶ್ರೀಧರ ಇತರರು ಇದ್ದರು.