ಹಲಗೇರಿ ಕೂಸಿನ ಮನೆಗೆ ಲಂಡನ್ ಕಿಂಗ್ಸ್ ಕಾಲೇಜು ಸಂಶೋಧನಾ ತಂಡ ಭೇಟಿ
King's College London research team visits Halageri Nursery
ಹಲಗೇರಿ ಕೂಸಿನ ಮನೆಗೆ ಲಂಡನ್ ಕಿಂಗ್ಸ್ ಕಾಲೇಜು ಸಂಶೋಧನಾ ತಂಡ ಭೇಟಿ
ಕೊಪ್ಪಳ 08: ಜಿಲ್ಲೆಯಲ್ಲಿರುವ ಕೂಸಿನ ಮನೆ ಕಾರ್ಯನಿರ್ವಹಣೆ ಕುರಿತು ಲಂಡನ್ ಕಿಂಗ್ಸ್ ಕಾಲೇಜು ಸಂಶೋಧನಾ ತಂಡವು ಮಂಗಳವಾರ (ಏ.8ರಂದು) ಕೊಪ್ಪಳ ತಾಲೂಕಿನ ಹಲಗೇರಿಯ ಕೂಸಿನ ಮನೆಗೆ ಜೊಸೆಫ್ ಪೌಲ್ ಮತ್ತು ತಂಡ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು.
ಕೂಸಿನ ಮನೆಯಲ್ಲಿಯ ಮಕ್ಕಳ ದಾಖಲಾತಿ ರಜಿಸ್ಟರ್ ಪರೀಶೀಲಿಸಿ ಕೇರ್ ಟೆಕರ್‌ಗಳಿಗೆ ಹಣ ಪಾವತಿಯಾಗಿರುವ ಬಗ್ಗೆ ಸಂವಾದ ನಡೆಸಿತು. ನಂತರ ಪ್ರತಿ ದಿನ ಮಕ್ಕಳಿಗೆ ಮುಂಜಾನೆ ಮತ್ತು ಮಧ್ಯಾಹ್ನ ಆಹಾರ ವಿತರಣೆ ಕುರಿತು ಪಂಚಾಯತ ಅಭಿವೃದ್ದಿ ಅಧಿಕಾರಿ ಹಾಗೂ ಕೇರ್ ಟೆಕರ್ಸ್ ವಿವರಿಸಿದರು.
ಕೂಸಿನ ಮನೆಗೆ ಬರುವ ಮಕ್ಕಳ ದಾಖಲಾತಿ, ಮಕ್ಕಳ ಆರೈಕೆ, ಪೌಷ್ಠಿಕ ಮತ್ತು ಅಪೌಷ್ಠಿಕ ಮಕ್ಕಳಿಗೆ ಮೆನು ಚಾರ್ಟ ಪ್ರಕಾರ ಆಹಾರ ವಿತರಣೆ, ಮಕ್ಕಳ ಆರೋಗ್ಯ ತಪಾಸಣೆ ಮತ್ತು ಮಕ್ಕಳ ಆರೈಕೆದಾರರ ವೇತನಕ್ಕೆ ಸಂಬಂಧಿಸಿದ ವಹಿಗಳನ್ನು ಪರೀಶೀಲಿಸಿದರು. ಪಾಲಕರು ತಮ್ಮ ಮಕ್ಕಳನ್ನು ಕೂಸಿನ ಮನೆಯಲ್ಲಿ ಬಿಟ್ಟು ಬರುತ್ತಿರುವದರಿಂದ ಆಗುತ್ತಿರುವ ಅನುಕೂಲತೆ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕೂಲಿ ಕೆಲಸಕ್ಕೆ ಪಾಲಕರು ಹೋಗುತ್ತಿರುವದರಿಂದ ಮಕ್ಕಳ ಆರೈಕೆಗೆ ಕೂಸಿನ ಮನೆ ಬಹಳಷ್ಟು ಅನುಕೂಲವಾಗಿದೆ ಎಂದು ಪಾಲಕರಾದ ಸುನಂದಾ ವಿವರಿಸಿ, ಈ ಕೇಂದ್ರದಲ್ಲಿ ಮಕ್ಕಳಿಗೆ ಹಾಲು, ಮೊಟ್ಟೆ, ಬಾಳೆಹಣ್ಣು, ಹೆಸರು ಬೆಳೆ ಪಾಯಸ, ರಾಗಿ ಗಂಜಿ, ಉಪ್ಪಿಟ್ಟು ಸೇವನೆ ಮಾಡುತ್ತಿರುವದರಿಂದ ಮಕ್ಕಳಲ್ಲಿ ಅಪೌಷ್ಠಿಕ ಕೊರತೆ ನಿಗಿಸುತ್ತದೆ ಎಂಬ ಮಾಹಿತಿ ನೀಡಿದರು.
ಪ್ರತಿ ತಿಂಗಳಿಗೊಮ್ಮೆ ಕೂಸಿನ ಮನೆಯ ಮಕ್ಕಳ ಆರೋಗ್ಯ ತಪಾಸಣೆ ಜರುಗಿಸಿ ಅವರ ಬೆಳವಣಿಗೆ, ತೂಕ ಇತ್ಯಾದಿ ಮಾಹಿತಿಯನ್ನು ರಜಿಸ್ಟರ್‌ನಲ್ಲಿ ದಾಖಲಿಸುತ್ತಿರುವದರಿಂದ ಪ್ರತಿ ಮಗುವಿನ ಆರೋಗ್ಯದ ಖಚಿತಪಡಿಸಿಕೊಳ್ಳಲು ಅನುಕೂಲವಾಗುತ್ತಿರುವ ಕುರಿತು ಪಂಚಾಯತ ಅಭಿವೃದ್ಧಿ ಅಧಿಕಾರಿ ವಿವರಿಸಿದರು. ಸಂಶೋಧನಾ ತಂಡವು ಹಲಗೇರಿ ಕೂಸಿನ ಮನೆ ಕಾರ್ಯನಿರ್ವಹಣೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಯಲ್ಲಪ್ಪ ಓಜನಹಳ್ಳಿ, ಪಂಚಾಯತ ಅಭಿವೃದ್ಧಿ ಅಧಿಕಾರಿ ಅಶೋಕ ರಾಂಪುರ, ಕಾರ್ಯದರ್ಶಿ ದೊಡ್ಡನಗೌಡ ಪಾಟೀಲ್, ಗ್ರಾಮ ಪಂಚಾಯತ ಸದಸ್ಯರಾದ ಕಳಕನಗೌಡ ಹಳೆಮನಿ, ಮಕ್ಕಳ ಆರೈಕೆದಾರರಾದ ಭರಮವ್ವ ಹರಿಜನ, ಅನ್ನಪೂರ್ಣ ಸಂಜಿವಗೌಡ್ರ, ಡಿಇಒ ಪಂಚಾಕ್ಷರಿ, ಮಾಲತೇಶ ಉಪಸ್ಥಿತರಿದ್ದರು.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 