ಶಾಸಕ ಕಾಗೆ, ಸವದಿ ಪ್ರಯತ್ನದಿಂದ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಯಶಸ್ವಿ
Khilegaon Basaveshwara lift irrigation project successful due to MLA Kage, Savadi's efforts
ಸಂಬರಗಿ 27: ಗಡಿ ಗ್ರಾಮಗಳ ರೈತರ ಕನಸಾಗಿರುವ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯ ನೀರು ಕೊನೆಯ ಹಂತಕ್ಕೆ ಸಂಬರಗಿ, ಕಲ್ಲೋತ್ತಿ, ಜಂಬಗಿ ಇನ್ನೀತರ ಗ್ರಾಮಕ್ಕೆ ಶಾಸಕ ರಾಜು ಕಾಗೆ, ಶಾಸಕ ಲಕ್ಷ್ಮಣ ಸವದಿ ಇವರ ಸತತ ಪ್ರಯತ್ನದಿಂದ ನೀರು ತಲುಪಿದೆ ಎಂದು ಜಂಬಗಿ ಪಿ.ಕೆ.ಪಿ.ಎಸ್. ಅಧ್ಯಕ್ಷರಾದ ರಾಜೇಂದ್ರ ಪಾಟೀಲ ಹೇಳಿದರು.
ಜಂಬಗಿ-ಸಂಬರಗಿ ಮಧ್ಯದಲ್ಲಿ ಇರುವ ಕೆನಾಲ ಹತ್ತಿರ ನೀರಾವರಿ ಯೋಜನೆಯ ಮುಖ್ಯ ಅಭಿಯಂತರರು ಪ್ರವೀಣ ಹುಣಸಿಕಟ್ಟಿ ಇವರನ್ನು ಸತ್ಕರಿಸಿ ಮಾತನಾಡಿ ಅವರು ಶಾಸಕರ ಜೊತೆ ಈ ನೀರು ತಲುಪಲು ಅಧಿಕಾರಿಗಳು ಮುಖ್ಯ ಶ್ರಮ ಇದ್ದು, ರೈತರು ಹಲವಾರು ಬಾರಿ ಬೀದಿಗಿಳಿದ ನಂತರ ಕೆಲಸ ಚುರುಕುಗೊಂಡು ಕಾಲುವೆಗೆ ನೀರು ಹರಿದಿದೆ. ಸುತ್ತ-ಮುತ್ತಲಿನ ಗ್ರಾಮಗಳ ಜಮೀನಿನಲ್ಲಿ ಎಲ್ಲಿ ನೋಡಿದರು ನೀರು ಕಾಣುತ್ತಿದೆ. ಇನ್ನುಳಿದ ಕೆಲಸವನ್ನು ಶೀಘ್ರದಲ್ಲಿ ಪೂರ್ಣಗೊಳಿಸಿ ಇನ್ನುಳಿದ ಗ್ರಾಮಕ್ಕೆ ನೀರು ತಲುಪಿಸಬೇಕೆಂದು ಅವರು ವಿನಂತಿ ಮುಖಾಂತರ ಮನವಿ ಮಾಡಿಕೊಂಡರು.
ಈ ವೇಳೆ ಸಂಬರಗಿ ಗ್ರಾಮ ಪಂಚಾಯತ ಅಧ್ಯಕ್ಷರಾದ ವಿಠ್ಠಲ ಗಸ್ತಿ, ಜಂಬಗಿ ಗ್ರಾಮದ ಗ್ರಾಮ ಪಂಚಾಯತ ಸದಸ್ಯರಾದ ಯಶವಂತ ಪಾಟೀಲ, ಸಂಜಯ ಮಾಳಿ, ರಾಜೇಂದ್ರ ಪಾಟೀಲ, ವಿಠ್ಠಲ ಗುರವ, ಎರಡೂ ಗ್ರಾಮಗಳ ಗಣ್ಯರು ಹಾಗೂ ರೈತರು ಉಪಸ್ಥಿತ ಇದ್ದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 