ಬನಹಟ್ಟಿ ಬೈರನಹಟ್ಟಿಯಲ್ಲಿ ಖೇತ ಬಚಾವೋ ಅಭಿಯಾನ ಅರಿವು ಮೂಡಿಸುವ ಕಾರ್ಯಕ್ರಮ
Khet Bachao Abhiyan awareness program in Banahatti Bairanhatti
ಲೋಕದರ್ಶನ ವರದಿ
ಹುಲಕೋಟಿ 13: ಐ.ಸಿ.ಎ.ಆರ್-ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರ. ಹುಲಕೋಟಿ ಹಾಗೂ ಕೃಷಿ ಇಲಾಖೆ, ಗದಗ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ 12-06-2026 ರಂದು ನರಗುಂದ ತಾಲೂಕಿನ ಬನಹಟ್ಟಿ ಹಾಗೂ ಬೈರನಹಟ್ಟಿ ಗ್ರಾಮಗಳಲ್ಲಿ “ಜಮೀನು ಉಳಿಸಿ” (ಖೇತ ಬಚಾವೋ) ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ವಿನಾಯಕ ನಿರಂಜನ ಮಾತನಾಡಿ ಅಭಿಯಾನದ ಉದ್ದೇಶವಾದ ಮಣ್ಣಿನ ಆರೋಗ್ಯವನ್ನು ಕಾಪಾಡಾಲು ಕೃಷಿ ತ್ಯಾಜ್ಯಗಳ ಮರುಬಳಕೆ ಹಾಗೂ ಮಣ್ಣು ್ಘ ನೀರಿನ ಸಂರಕ್ಷಣೆಯ ಕುರಿತು ವಿವರಿಸಿದರು.
ಜೊತೆಗೆ ಸಾವಯವ ಪದಾರ್ಥಗಳ ಬಳಕೆಯಿಂದ ಮಣ್ಣಿನಲ್ಲಿ ಉಪಯುಕ್ತ ಸೂಕ್ಷ್ಮಾಣುಗಳ ಸಂಖ್ಯೆ ವೃದ್ಧಿಯಾಗಿ ಫಲವತ್ತತೆ ಹೆಚ್ಚುತ್ತದೆ ಎಂದು ತಿಳಿಸಿದರು. ಮತ್ತೋರ್ವ ವಿಜ್ಞಾನಿ ಡಾ. ಚೇತನಬಾಬು ಅವರು ತಮ್ಮ ತಾಂತ್ರಿಕ ಉಪನ್ಯಾಸದಲ್ಲಿ ಜೈವಿಕ ಗೊಬ್ಬರಗಳಾದ ಟ್ರೈಕೊಡರ್ಮಾ, ರೈಜೋಬಿಯಂ ಹಾಗೂ ಪಿ.ಎಸ್.ಬಿ ಗಳಿಂದ ಬೀಜೋಪಚಾರ ಮಾಡುವ ವಿಧಾನ ತಿಳಿಸಿಕೊಟ್ಟರು ಹಾಗೂ ಕೊಟ್ಟಿಗೆ ಗೊಬ್ಬರ ಹಾಗೂ ಗೋ ಉತ್ಪನ್ನಗಳ ಉಪಯುಕ್ತತೆಯನ್ನು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗದಗ ಜಂಟಿ ಕೃಷಿ ನಿರ್ದೇಶಕಿ, ಶ್ರೀಮತಿ ಚೇತನಾ ಪಾಟೀಲ ಇತ್ತೀಚಿನ ಜಾಗತಿಕ ಬಿಕ್ಕಟ್ಟಿನ ಪರಿಣಾಮದಿಂದ ಉಂಟಾಗುತ್ತಿರುವ ರಸಗೊಬ್ಬರಗಳ ಕೊರತೆ ಹಾಗೂ ಆ ಕೊರತೆಯನ್ನು ಎದುರಿಸಲು ರೈತಬಾಂಧವರು ಪರ್ಯಾಯ ಗೊಬ್ಬರಗಳ ಬಳಕೆ ಮಾಡಬೇಕು ಎಂದು ಸಂದೇಶ ನೀಡಿದರು. ಈ ಸಂಧರ್ಭದಲ್ಲಿ ರೈತರಿಗೆ ಉದ್ದು ಹಾಗೂ ತೊಗರಿಯ ಸುಧಾರಿತ ತಳಿಯ ಬೀಜಗಳನ್ನು ಕೃಷಿ ಇಲಾಖೆ ವತಿಯಿಂದ ಪ್ರಾತ್ಯಕ್ಷಿಕೆಗಾಗಿ ನೀಡಲಾಯಿತು. ನರಗುಂದ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ ಎಸ್.ಎಫ್.ಬೆಳವಟಿಗಿಯವರು ಸ್ವಾಗತಿಸಿದರು ಹಾಗೂ ಶ್ರೀ ಶಿವಾನಂದ ಸಾಠೆ ವಂದಿಸಿದರು. ಕಾರ್ಯಕ್ರಮಗಳಲ್ಲಿ ಒಟ್ಟು 200 ಕ್ಕೂ ಹೆಚ್ಚು ರೈತರು, ರೈತ ಮಹಿಳೆಯರು ಭಾಗವಹಿಸಿ ಮಾಹಿತಿ ಪಡೆದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 