ಮಳೆ ಕೊರತೆಯಿಂದ ಮುಂಗಾರು ಬೆಳೆ ಹಾನಿ: ಸಂಕಷ್ಟದಲ್ಲಿ ರೈತರು
Kharif crop damage due to rainfall deficit: Farmers in distress
ಲೋಕದರ್ಶನ ವರದಿ
ಸಂಬರಗಿ 10: ಕಳೆದ ಎರಡು ತಿಂಗಳಿಂದ ಮಿರ್ಗಾ ಮತ್ತು ರೋಹಿಣಿ ಮಳೆಗಳ ಮೇಲೆ ಭರವಸೆಇಟ್ಟುರೈತರು ಮುಂಗಾರಿ ಬೆಳೆ 50ಅ ರಷ್ಟು ಬಿತ್ತನೆ ಮಾಡಿದ್ದರು.ಆದರೆಎರಡೂ ಮಳೆಗಳು ಕೈಕೊಟ್ಟ ಪರಿಣಾಮವಾಗಿರೈತರ ಮುಂಗಾರಿ ಬೆಳೆ ಬಿತ್ತನೆ ವಿಫಲಗೊಂಡಿದೆ.ರೈತರುಕಂಗಾಲಾಗಿದ್ದಾರೆ. ಸರಕಾರ ಬೆಳೆ ಪರೀಶೀಲಣೆ ಮಾಡಿಅವರಿಗೆ ನೆರವನ್ನು ನೀಡಬೇಕೆಂದುರೈತರು ಅಗ್ರಹಿಸಿದ್ದಾರೆ.
ಗಡಿಭಾಗದ ಗ್ರಾಮಗಳ ರೈತರು ಮಳೆಯ ಮೇಲೆ ಆಧಾರಿವಾಗಿದ್ದು, ಮಳೆಯಾದರೆ ಬೆಳೆ, ಇಲ್ಲವಾದರೆರೈತರು ಕಂಗಾಲಾಗುವ ಪರಿಸ್ಥಿತಿ ಎದುರಾಗುತ್ತದೆ.ಈ ವರ್ಷರೈತರುತೊಗರಿ, ಹೆಸರು, ಉದ್ದ, ಗೋವಿನಜೋಳ ಬಿತ್ತನೆ ಮಾಡಿದ್ದಾರೆ.ಆದರೆ ಮಳೆಯ ಕೊರತೆಯಿಂದ ನಾಟಿಯಾಗಿರುವ ಬೆಳೆ ಬತ್ತಿಹೋಗಿದ್ದಾವೆ. ಆದರೆ ಕೆಲವು ಗ್ರಾಮಗಳಲ್ಲಿ ಮುಂಗಾರಿ ಬೆಳೆ ಬಿತ್ತನೆ ಮಾಡಿದರೂ ಸಹ ಬೆಳೆ ನಾಟಿಯಾಗಿಲ್ಲ.
ಯಾಕೆಂದರೆತೆವಾಂಶಇಲ್ಲದಕಾರಣ ಬೆಳೆಯ ನಾಟಿಯ ಮೇಲೆ ಪರಿಣಾಮ ಬೀರಿದೆ.ರೈತರು ಮಳೆಗಾಗಿ ಗ್ರಾಮದೇವತೆಯಜಾತ್ರೆ ಮಾಡಿದರೂ ಸಹ ಮಳೆ ಆಗಿಲ್ಲ. ರೈತರುಕಂಗಾಲಾಗಿದ್ದಾರೆ. ಇದರ ಪರಿಣಾಮ ಪಾಂಡೆಗಾಂವ ಖಿಳೆಗಾಂವ, ಶಿರೂರ, ಸಂಬರಗಿ, ಜಂಬಗಿ, ಅರಳಟ್ಟಿ, ಮದಬಾವಿ, ಬೊಮ್ಮನಾಳ, ಶಿವನೂರ, ಕಲ್ಲೋತ್ತಿ ಈ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮುಂಗಾರಿ ಬೆಳೆ ಪೂರ್ಣವಾಗಿ ವಿಫಲಗೊಂಡಿದೆ. ಮರುಬಿತ್ತನೆ ಮಾಡುವ ಪರಿಸ್ಥಿತಿ ಎದುರಾಗಿದೆ.ರೈತರು ಮುಂದೇನು ಮಾಡುವುದು ಎಂದು ಯೋಚಿಸಿ ಕಂಗಾಲಾಗಿದ್ದಾರೆ.
ಈ ಕುರಿತುರೈತ ಹೋರಾಟಗಾರ ಮಹಾದೇವ ಮಡಿವಾಳ ಇವರನ್ನು ಸಂಪರ್ಕಿಸಿದಾಗ ಗಡಿಭಾಗದ ಗ್ರಾಮಗಳಿಗೆ ಮುಂಗಾರಿ ಬಿತ್ತಾನರೈತರು ಮಾಡಿದ್ದಾರೆ.ಆದರೆ ಬೆಳೆ ಸಂಪೂರ್ಣವಾಗಿ ಬತ್ತಿಹೋಗಿದೆ. ಸರಕಾರ ಬತ್ತಿ ಹೋಗಿರುವ ಬೆಳೆಗಳನ್ನು ಸರ್ವೇ ಮಾಡಿ ಪರಿಹಾರ ನೀಡಬೇಕೆಂದು ಅವರು ಅಗ್ರಹಿಸಿದ್ದಾರೆ. ಸಹಾಯಕ ಕೃಷಿ ನಿರ್ದೇಶಕರು ನಿಂಗಣ್ಣ ಬಿರಾದಾರಇವರನ್ನು ಸಂಪರ್ಕಿಸಿದಾಗ ಒಟ್ಟುತಾಲ್ಲೂಕಿನಲ್ಲಿ 56700 ಹೆಕ್ಟರ್ ಮುಂಗಾರಿ ಬೆಳೆಯ ಬಿತ್ತನೆಯ ಗುರಿ ಇತ್ತು. ಆದರೆ ಒಟ್ಟು 28000 ಹೆಕ್ಟರ್ ಬಿತ್ತನೆಆಗಿದೆ.ಆದರೆ ಮಳೆ ಇಲ್ಲದೆ ಮುಂಗಾರಿ ಬೆಳೆ ವಿಫಲಗೊಂಡಿದೆ. ಕಳೆದ ಎರಡು ದಿನಗಳಿಂದ ತಾಲ್ಲೂಕಿನಲ್ಲಿ ಭಾರಿ ಮಳೆಯಾದ ಪರಿಣಾಮರೈತರು ಮೆಕ್ಕೆಜೋಳ, ತೊಗರಿ ಬಿತ್ತನೆ ಮಾಡಿಬಹುದುಎಂದು ಹೇಳಿದರು.
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು
ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ಆರೋಪ
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ
ಡ್ರಗ್ ಅವೇರ್ನೆಸ್ ವೀಕ್: ಆಚರಣೆ, ಕಾರ್ಯಾಚರಣೆ 12.38 ಲಕ್ಷ ಮಾಕದ ವಶ, 16 ಪ್ರಕರಣ ದಾಖಲು, 4 ಬಂಧನ 