ಖಾಜಾ ಹುಸೇನ್ ಸಾಬ್ ಬಗನಾಳ ನಿಧನ : ಅಂತ್ಯಕ್ರಿಯೆ : ಗಣ್ಯ ರಿಂದ ತೀವ್ರ ಸಂತಾಪ
Khaja Hussain Saab Bagana passes away: Funeral: Deepest condolences from dignitaries
ಕೊಪ್ಪಳ 05: ಅಲ್ಪಸಂಖ್ಯಾತ ಸಮುದಾಯದ ಹಿರಿಯ ನಿವಾಸಿ ಸಮಾಜ ಸೇವಕರಾದ ಖಾಜಾ ಹುಸೇನ್ ಸಾಬ್ ಬಗನಾಳ ( 76) ಬುಧವಾರ ನಿಧನ ಹೊಂದಿದರು, ಅವರ ಅಂತ್ಯಕ್ರಿಯೆ ಅವರ ಸ್ವ ನಿವಾಸ, ಸ್ವಗ್ರಾಮ ತಾಲೂಕಿನ ಚಿಕ್ಕ ಬಗನಾಳ ಗ್ರಾಮದ ಮುಸ್ಲಿಂ ಖಬರಸ್ಥಾನ ದಲ್ಲಿ ಇಸ್ಲಾಂ ಧರ್ಮದ ಧಾರ್ಮಿಕ ವಿಧಿ ವಿಧಾನ ದೊಂದಿಗೆ ಗುರುವಾರ ಬೆಳಿಗ್ಗೆ ಜರುಗಿತು, ಮೃತರು ತನ್ನ ಹಿಂದೆ ಪತ್ನಿ ಇಬ್ಬರು ಗಂಡು ಮಕ್ಕಳು ಮತ್ತು ನಾಲ್ಕು ಜನ ಹೆಣ್ಣು ಮಕ್ಕಳನ್ನು ಸೇರಿದಂತೆ ಸಹೋದರರು ,ಅಳಿಯಂದರು, ಸೊಸೆಯೈಂದಿರು, ಮೊಮ್ಮಕ್ಕಳು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ, ಮೃತರು ಈ ಹಿಂದೆ ಕೊಪ್ಪಳ ಪುರಸಭೆ ಇದ್ದಾಗ ಪುರಸಭೆಯ ಸದಸ್ಯರಾಗಿದ್ದರು ಅಲ್ಲದೆ ಕಾಂಗ್ರೆಸ್, ಜನತಾದಳ ,ಕೆಸಿಪಿ ಪಕ್ಷದಲ್ಲಿ ಕಾರ್ಯ ನಿರ್ವಹಿಸಿರುವುದಲ್ಲದೆ ಒಬ್ಬ ಸಜ್ಜನ ರಾಜಕಾರಣಿ ,ಸಮಾಜ ಸೇವಕರು ಯಾಗಿ ಉತ್ತಮ ಕಾರ್ಯ ನಿರ್ವಹಿಸಿ ಜನಸಾಮಾನ್ಯರ ಪ್ರೀತಿ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದರು, ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಚಿಕಿತ್ಸೆಗಾಗಿ ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರುಎಳೆದರು,ಸುದ್ದಿ ತಿಳಿದ ತಕ್ಷಣ ಹಲವು ಜನ ರಾಜಕಾರಣಿಗಳು ಜನ ಪ್ರತಿ ನಿಧಿಗಳು ,ವಿವಿಧ ಸಂಘಟನೆಗಳ ಪದಾಧಿಕಾರಿಗಳು ,ಅಂಜುಮನ್ ಕಮಿಟಿ, ಪಂಚ್ ಕಮಿಟಿಯ ಸದಸ್ಯರು , ಪ್ರಮುಖರು, ಸೇರಿದಂತೆ ಅಪಾರ ಸಂಖ್ಯೆ ಯಲ್ಲಿ ಸಾರ್ವಜನಿಕರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಮೃತರ ಆತ್ಮಕ್ಕೆ ಆ ಸೃಷ್ಟಿಕರ್ತ ಅಲ್ಲಾಹನು ಮಗಫಿರತ್ ಕರುಣಿಸಲಿ ಎಂದು ಪ್ರಾರ್ಥಿಸಿದರು ಮತ್ತು ಅವರ ಕುಟುಂಬ ವರ್ಗಕ್ಕೆ ಈ ದುಃಖ ಭರಿಸುವ ಶಕ್ತಿ ದಯಪಾಲಿಸಲೆಂದು ಆ ಸೃಷ್ಟಿಕರ್ತ ಅಲ್ಲಾಹ ನಲ್ಲಿ ಪ್ರಾರ್ಥಿಸಿದ್ದಾರೆ,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 