ಕಾಂಗ್ರೆಸ್ ಎಸ್ ಸಿ ಘಟಕದ ಜಿಲಾ ್ಲಉಪಾಧ್ಯಕ್ಷರಾಗಿ ಕೆರೆಹಳ್ಳಿ ನೇಮಕ

ಕಾಂಗ್ರೆಸ್ ಎಸ್ ಸಿ ಘಟಕದ ಜಿಲಾ ್ಲಉಪಾಧ್ಯಕ್ಷರಾಗಿ ಕೆರೆಹಳ್ಳಿ ನೇಮಕ Kerehalli appointed as district vice-president of Congress SC unit

ಕೊಪ್ಪಳ   21: ಕಾಂಗ್ರೆಸ್‌ನ ಕಚೇರಿಯಲ್ಲಿ ನಡೆದ ಎಸ್ ಸಿ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಉಪಾಧ್ಯಕ್ಷರಾಗಿ ಪರಶುರಾಮ್ ಕೆರೆಹಳ್ಳಿ ಅವರು ನೇಮಕ ಗೊಂಡಿದ್ದಾರೆ. ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷರಾದ ಅಮರೇಗೌಡ ಬಯ್ಯಾಪುರ, ಹಾಗೂ ಎಸ್ ಸಿ ಘಟಕದ ರಾಜ್ಯಾಧ್ಯಕ್ಷರಾದ ಆರ್‌.ಧರ್ಮಸೇನ್‌ರವರು ಆದೇಶ ಮೇರೆಗೆ ಹಾಗೂ ಎಸ್ ಸಿ ಘಟಕದ ಜಿಲ್ಲಾಧ್ಯಕ್ಷರಾದ ಗಾಳೆಪ್ಪ  ಹೆಚ್‌. ಪೂಜಾರ್‌ಅವರ ಆದೇಶ ಮೇರೆಗೆ, ಮತ್ತು ಸಚಿವರಾದ ಶಿವರಾಜ್ ಎಸ್ ತಂಗಡಗಿರವರ ಸಹಕಾರದೊಂದಿಗೆ ಮತ್ತು ಜನಪ್ರಿಯ ಸಂಸದರಾದ ಮಾನ್ಯಕೆ.ರಾಜಶೇಖರ್ ಹಿಟ್ನಾಳ್ ರವರು ಮತ್ತು ಶಾಸಕರಾದ ಶ್ರೀ ಕೆ.ರಾಘವೇಂದ್ರ ಹಿಟ್ನಾಳ್ ರವರ ಸಹಕಾರದೊಂದಿಗೆ ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲಾ ವರಿಷ್ಠರ ಸೂಚನೆ ಮೇರೆಗೆ  ಪರಶುರಾಮ್ ಕೆರೆಹಳ್ಳಿ ರವರುಎಸ್ ಸಿ ಘಟಕದ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. 

 ಕೊಪ್ಪಳ ನಗರದ ಕಾಂಗ್ರೆಸ್ ಕಾರ್ಯದಲ್ಲಿ ಜಿಲ್ಲಾ ಮಟ್ಟದ ಪ್ರಗತಿ ಪರೀಶೀಲನಾ ಪದಾಧಿಕಾರಿಗಳ ಸಭೆಯಲ್ಲಿ ಕೊಪ್ಪಳ ಜಿಲ್ಲೆಯ ಗೌರವಾನ್ವಿತ  ಹಿರಿಯ ಕಾಂಗ್ರೆಸ್ ಮುಖಂಡರ ಜೊತೆಯಲ್ಲಿ, ರಾಜ್ಯಕಮಿಟಿ ಪದಾಧಿಕಾರಿಗಳ, ಜಿಲ್ಲಾ ಪದಾಧಿಕಾರಿಗಳ ಹಾಗೂ ಕೊಪ್ಪಳ ಜಿಲ್ಲೆಯ ಎಸ್ ಸಿ  ಘಟಕದ ಎಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳ, ನಗರ  ಪದಾಧಿಕಾರಿಗಳ ಸಮ್ಮುಖದಲ್ಲಿ ಕೂಕುನೂರು, ಯಲಬುರ್ಗಾ, ಹನುಮಸಾಗರ, ಕುಷ್ಟಗಿ, ಕನಕಗಿರಿ, ಕಾರಟಗಿ, ಗಂಗಾವತಿ ಕೊಪ್ಪಳ, ಎಲ್ಲಾ ಪದಾಧಿಕಾರಿಗಳು ಕಾರ್ಯಕರ್ತರ ಸಭೆಯಲ್ಲಿ ಪರಶುರಾಮ್ ಕೆರೆಹಳ್ಳಿ  ಅವರಿಗೆ ಆದೇಶ ಪ್ರತಿಯನ್ನು ನೀಡಿದರು.     

ಈ ಸಂದರ್ಭದಲ್ಲಿಜನಪ್ರಿಯ ಸಂಸದರಾದ ರಾಜಶೇಖರ್ ಹಿಟ್ನಾಳ್ ಅವರು, ಮಾಜಿಜಿಲ್ಲಾ ಪಂಚಾಯಿತಿ ಸದಸ್ಯರಾದ ಗೂಳಪ್ಪ  ಹಲಗೇರಿರವರು, ಎಸ್ ಸಿ ಘಟಕದ ರಾಜ್ಯ ಉಪಾಧ್ಯಕ್ಷರಾದ ಕನ್ನಿರಾಮ್ ರಾಥೋಡ್ ಗುಲ್ಬರ್ಗಾ, ಕೆಪಿಸಿಸಿ ರಾಜ್ಯ ಸಂಚಾಲಕರಾದ ನಾಗರಾಜ್ ನಾಯಕ್ ಚೆನ್ನಗಿರಿ , ಕೆಪಿಸಿಸಿ ಸಂಚಾಲಕರಾದ ಕಾಳಯ್ಯ ಮೈಸೂರ, ಎಸ್ ಸಿ ರಾಜ್ಯಕಮಿಟಿ ಸದಸ್ಯರುಗಳಾದ, ಶುಕ್ರರಾಜ್ ತಾಳಕೇರಿ, ದೇವೇಂದ್ರ​‍್ಪ ಪೂಜಾರ್‌ದದೆಗಲ್, ಶರಣಮ್ಮ ಯಲಬುರ್ಗಾ, ಜಿಲ್ಲಾ ಉಪಾಧ್ಯಕ್ಷರಾದ, ತಿಪ್ಪಣ್ಣ ಮ್ಯಾಗೇರಿ, 

ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹನುಮಂತಪ್ಪ ಸಿಂದೋಗಿ, ಜಿಲ್ಲಾ ಕಾರ್ಯದರ್ಶಿಗಳಾದ ಮಂಜುನಾಥ್ ಮೂಲಿ ಮನಿ, ಬಸವರಾಜ ಬೇವಿನಕಟ್ಟಿ, ರಮೇಶ ಚಲವಾದಿ ಯಲಬುರ್ಗಾ,  ಕುಷ್ಟಗಿ, ಎಲ್ಲಾಎಸ್ ಸಿ ಬ್ಲಾಕ್‌ಕಾಂಗ್ರೆಸ್ ಅಧ್ಯಕ್ಷರುಗಳಾದ, ಈಶಪ್ಪ ಕೂಕುನೂರು, ಚಂದ್ರು ಕುಷ್ಟಗಿ, ಶಿವಾನಂದ್ ಬಣಕಾರ್ ಯಲಬುರ್ಗಾ, ಮಾಂತೇಶ ವಡ್ಡರ್ ಹನುಮಸಾಗರ , 

ಶಾಂತಪ್ಪ ಬಸರಿಗಿಡ ಕನಕಗಿರಿ, ಶಿವಕುಮಾರ್ ಇಳಿಗಿನೂರು ಕಾರಟಗಿ, ಯಮನೂರ​‍್ಪ ದನಕನ ದೊಡ್ಡಿ ಗಂಗಾವತಿ, ಎಲ್ಲಾಎಸ್ ಸಿ  ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು  ಲಲಿತ ಕುಮಾರ ಮ್ಯಾಗೇರಿ ಛಲವಾದಿ, ಕಳಕೇಶ ಸೂಡಿಯಲಬುರ್ಗಾ, ಪಾಮಣ್ಣ ಕನಕಗಿರಿ, ಮಲ್ಲೇಶ್ ದೇವರಮನಿ  ಗಂಗಾವತಿ. ಹಾಗೂ ಕಾಂಗ್ರೆಸ್‌ನ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.