ಸ್ವಾತಂತ್ರ್ಯೋತ್ಸವ ಆಚರಿಸಿಕೊಂಡ ಕಜಕಿಸ್ತಾನ್ನೂರ್-ಸುಲ್ತಾನ್,

ಡಿಸೆಂಬರ್ 17 (ಕ್ಸಿನ್ಹುವಾ) ಕಜಕಿಸ್ತಾನ್ ತನ್ನ 28 ನೇ ಸ್ವಾತಂತ್ರ್ಯ ದಿನವನ್ನು ದೇಶಾದ್ಯಂತ ಪಟಾಕಿ ಸಿಡಿಸಿ  ಮತ್ತು ಭವ್ಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ   ಆಚರಿಸಿಕೊಂಡಿದೆ.ಈ ಸಮಯದಲ್ಲಿ ಹಲವು  ರಾಜ್ಯಗಳ ಮುಖ್ಯಸ್ಥರು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಅಭಿನಂದನಾ ಸಂದೇಶ ಕಳಿಸಿದ್ದಾರೆ.    "ಡಿಸೆಂಬರ್ 16, 1991 ಕಜಕಿಸ್ತಾನ್  ಇತಿಹಾಸದಲ್ಲಿ ಹೊಸ ಯುಗವನ್ನು ತೆರೆಯಿತು, ಪ್ರಗತಿ ಮತ್ತು ನಾವೀನ್ಯತೆಗೆ ಅಭೂತಪೂರ್ವ ಅವಕಾಶ ಒದಗಿಸಿ, ದೇಶವು ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದೆ, ಪರಿಣಾಮಕಾರಿ ಆಡಳಿತ ವ್ಯವಸ್ಥೆ ಮತ್ತು ಬಲವಾದ ಆರ್ಥಿಕತೆಯನ್ನು ನಿರ್ಮಿಸಿದೆ" ಎಂದು  ಕಜಕಿಸ್ತಾನದ  ಅಧ್ಯಕ್ಷ ಕಾಸಿಮ್-ಜೋಮಾರ್ಟ್ ಟೋಕಾಯೆವ್  ಟ್ವೀಟ್ ಮಾಡಿದ್ದಾರೆ .   ಕಜಕಿಸ್ತಾನ್ ಮೊದಲ  ಅಧ್ಯಕ್ಷರಾದ ನರ್ಸುಲ್ತಾನ್ ನಜರ್ಬಾಯೆವ್ ಅವರು ತಮ್ಮ ದೇಶ ಕೇವಲ 28 ವರ್ಷಗಳಲ್ಲಿ ಇತರ ದೇಶಗಳಿಗೆ ಸರಿಸಾಟಿಯಾಗುವ ಕೆಲಸ ಮಾಡಿದೆ  ಅಲ್ಪಸಮಯದಲ್ಲಿ  ಅಭಿವೃದ್ಧಿಯ ವೇಗ ಹೆಚ್ಚಿಸಿಕೊಂಡಿದೆ ಎಂದರು.    "ಸ್ವಾತಂತ್ರ್ಯ ಬಂದಾಗಿನಿಂದ, ನಾವು ಮುಕ್ತ ಮಾರುಕಟ್ಟೆ ಆರ್ಥಿಕತೆಯನ್ನು ನಿರ್ಮಿಸಿ, ಪರಿಣಾಮಕಾರಿಯಾಗಿ ಹೂಡಿಕೆಯನ್ನು ಆಕರ್ಷಿಸುವಲ್ಲಿ ಯಶಸ್ಸು ಸಾಧಿಸಲಾಗಿದೆ ಎಂದು  ಹೇಳಿದ್ದಾರೆ.    ಡಿಸೆಂಬರ್ 16, 1991 ರಂದು, ಕ ಜಕಿಸ್ತಾನ್  ವಿಶೇಷ ಸಾಂವಿಧಾನಿಕ  ಅಂಗೀಕರಿಸಿ, ಮತ್ತು ಸ್ವಾತಂತ್ರ್ಯವನ್ನು ಘೋಷಿಸಿತು, ಮತ್ತು ಅಂದಿನಿಂದ, ಈ ದಿನವನ್ನು ರಾಷ್ಟ್ರೀಯ ರಜಾದಿನವೆಂದು ಪರಿಗಣಿಸಲಾಗಿದೆ.