ಕಾಶಿಬಾಯಿ ಬಿರಾದಾರ ಅವರ ವಯೋನಿವೃತ್ತಿ: ಬೀಳ್ಕೊಡುಗೆ ಸಮಾರಂಭ
Kashibai Biradar's retirement: Farewell ceremony
ವಿಜಯಪುರ 31: ನಗರದ ಬಿ ಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ದಿ. 30 ಶನಿವಾರದಂದು ಮಹಾವಿದ್ಯಾಲಯದ ಬೋಧಕೇತರ ಸಿಬ್ಬಂದಿ ಕಾಶಿಬಾಯಿ ಬಿರಾದಾರ ಅವರ ವೃತ್ತಿಯಿಂದ ನಿವೃತ್ತಿಹೊಂದಿದ ಹಿನ್ನೆಲೆ ಬೀಳ್ಕೊಡುಗೆ ಸಮಾರಂಭ ನಡೆಯಿತು.ಈ ವೇಳೆಯಲ್ಲಿ ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ಧೆ ಮಾತನಾಡಿ ನಮ್ಮ ಮಹಾವಿದ್ಯಾಲಯದಲ್ಲಿ ಅತ್ಯಂತ ಕರ್ತವ್ಯ ನಿಷ್ಠೆಯಿಂದ, ಯಾವುದೆ ನ್ಯೂನ್ಯತೆ ಇಲ್ಲದೆ, ಪ್ರಾಮಾಣಿಕತೆಯಿಂದ ಸಂಸ್ಥೆಯಲ್ಲಿ ತಿಕೋಟಾದಿಂದ ವೃತ್ತಿ ಪ್ರಾರಂಭಿಸಿ ನಮ್ಮ ಮಹವಿದ್ಯಾಲಯ ಸೇರಿಂದಂತೆ ಒಟ್ಟು 31 ವರ್ಷಗಳ ತಮ್ಮ ಸೇವೆಯನ್ನು ಗೈದಿದ್ದಾರೆ ಇವರ ನಿವೃತ್ತಿ ಜೀವನದ ಸುಖಕರವಾಗಿ ಸಾಗಲೆಂದು ಶುಭ ಹಾರೈಸಿದರು.
ಈ ವೇಳೆಯಲ್ಲಿ ಎಲ್ ಎಸ್ ಪೂಜಾರಿ, ದುಲಂಗೆ ಮಾತನಾಡಿದರು. ಮಹಾವಿದ್ಯಾಲಯದಿಂದ ಕಾಶಿಬಾಯಿ ಬಿರಾದಾರ ದಂಪತಿಗಳಿಗೆ ಸನ್ಮಾಸಿಲಾಯಿತು.
ಈ ಸಂದರ್ಭಲ್ಲಿ ಬಿಎಲ್‌ಡಿಇ ಸಂಸ್ಥೆಯ ಕಛೇರಿ ನಿವೃತ್ತ ಅಧೀಕ್ಷಕರು ಎಸ್.ಕೆ ಬಿರಾದಾರ, ಕೆ.ಕೆ.ಪಾಟೀಲ, ಉಪ್ರಾಚಾರ್ಯ ಡಾ.ಅನೀಲ.ಭೀ,ನಾಯಕ, ಐಕ್ಯೂಎಸಿ ನಿರ್ದೇಶಕ ಡಾ.ಪಿ.ಎಸ್ ಪಾಟೀಲ, ಕಛೇರಿ ಆಧೀಕ್ಷಕ ಎಸ್.ಬಿ.ಹೇರಲಗಿ, ಜಗದೀಶ ಪಾಟೀಲ ಸೇರಿದಂತೆ ಇನ್ನಿತರ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.ಡಾ.ಉಷಾದೇವಿ ಹಿರೇಮಠ ನಿರೂಪಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 