ಜಮೀಲ್ ಅಹ್ಮದಗೆ ಕರುನಾಡ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಲೋಕದರ್ಶನ ವರದಿ
ಕೊಪ್ಪಳ 20: ಕರ್ನಾಟಕ ಜಾಗೃತಿ ವೇದಿಕೆ ಬೆಂಗಳೂರು, ಕರ್ಮಭೂಮಿ ಕನ್ನಡ ಸಂಘ ಬಿಚ್ಚೊಲಿ, ಗೋವಾ ಸಂಘಟನೆಯ ಸಂಯುಕ್ತ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಸಹ ಗೋವಾದ ಬಿಚ್ಚೋಲಿ ನಗರದ ಹೀರಾಬಾಯಿ ಹಾಲ್ನಲ್ಲಿ 11ನೇ ಬಾರಿಗೆ ಜರುಗಿದ ಗೋವಾ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನದಲ್ಲಿ ಜಿಲ್ಲೆಯ ಕನಕಗಿರಿ ತಾಲೂಕಿನ ಹಿರೇ ಖೇಡಾ ಗರಾಮ ಪಂಚಾಯತಿಯ ಪಿ.ಡಿ.ಓ. ಜಮೀಲ್ ಅಹ್ಮದ ಇವರಿಗೆ ಕರುನಾಡ ಪದ್ಮಶ್ರೀ ಪ್ರಶಸ್ತಿಯನ್ನು ಗೋವಾದ ಮುಖ್ಯಮಂತ್ರಿ ಪ್ರಮೊಧ ಸಾವಂತರವರು ಗೋವಾ ಕನ್ನಡಿಗರ ಪರವಾಗಿ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಿದರು.
ಜಮೀಲ್ ಅಹ್ಮದ ರವರು ಕೊಪ್ಪಳ ಜಿಲ್ಲೆಯ ಕನಕಗಿರಿ ಹಾಗೂ ಗಂಗಾವತ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಉತ್ತಮ ಸೇವೆ ಮತ್ತು ಗ್ರಾಮಿಣಾಭಿವೃದ್ಧಿ ಹಾಗೂ ಪಂಚಾಯತರಾಜ ಕ್ಷೇತ್ರಲ್ಲಿನ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು, ಈ ಸಂದರ್ಭದಲ್ಲಿ ಕೇಂಧ್ರದ ಆಯುಶ ಇಲಾಖೆ ಮಂತ್ರಿ ಪ್ರಮೊಧ ನಾಯ್ಕೆ, ಬಿಚ್ಚೊಲಿ ಮಾಯಂ ಕ್ಷೇತ್ರದ ಶಾಸಕ ರಾಜೇಶ ಪಾಟ್ನೇಕರ್, ಸಮ್ಮೇಳನದ ಸರ್ವಾಧ್ಯಕ್ಷ ಡಾ. ವಿ.ಆರ್.ತಾಳಿಕೋಟಿ, ಕರ್ಮ ಭೂಮಿ ಕನ್ನಡ ಸಂಘ, ಗೋವಾದ ಅಧ್ಯಕ್ಷ ಹನುಮಂತ ರೆಡ್ಡಿ ಶಿರೂರ್, ಗೋವಾ ಕನ್ನಡಿಗರ ನಾಯಕ ಸಿದ್ದಣ್ಣ ಮೇಟಿ, ಬಿಚ್ಚೋಲಿ ನಗರಸಭೆ ಅಧ್ಯಕಕ್ಷ ಸತೀಷ್ ಗಾಂವ್ಕರ್, ಮಾಜಿ ಶಾಸಕ ನರೇಶ್ ಸಾವಾಳ್, ಸಂಘಟಕ ಮಹೇಶ ಸುರ್ವೆ ಹಾಗೂ ತಿರುಳುಗನ್ನಡ ಸಾಹಿತ್ಯ ಪರತಿಷ್ಠಾನದ ಜಿಲ್ಲಾಧ್ಯಕ್ಷ ಎಂ. ಸಾದಿಕ ಅಲಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 