ಹನಮಂತಪ್ಪ ಕುರಿಗೆ ಕರುನಾಡ ಕಣ್ಮಣಿ ಪ್ರಶಸ್ತಿ ಪ್ರದಾನ
ಲೋಕದರ್ಶನ ವರದಿ
ಕೊಪ್ಪಳ 15: ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಬೆಂಗಳೂರು ಹಾಗೂ ಸುರ್ವೇ ಕಲ್ಚರಲ್ ಅಕಾಡೆಮಿ ಕೊಡಮಾಡುವ 2019ನೇ ಸಾಲಿನ ಕರುನಾಡ ಕಣ್ಮಣಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಶುಕ್ರವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ನಯನ ರಂಗಮಂದಿರದಲ್ಲಿ ಶಿಕ್ಷಕ ಹಾಗೂ ಜನಪದ ಗಾಯಕಗಾರ ಹನಮಂತಪ್ಪ ಕುರಿ ಅವರಿಗೆ ಕರುನಾಡ ಕಣ್ಮಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
64ನೇ ಕನ್ನಡ ರಾಜ್ಯೋತ್ಸವ ಆಚರಣೆ ಪ್ರಯುಕ್ತ, ಬೆಂಗಳೂರಿನ ನಯನ ರಂಗಮಂದಿರದಲ್ಲಿ ಡಿ. 12 ಮತ್ತು 13 ರಂದು ಹಮ್ಮಿಕೊಂಡ 5 ನೇ ರಾಷ್ಟ್ರೀಯ ನೃತ್ಯ ಕಲಾ ಮೇಳದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ, ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ರಮೇಶ ಸುವರ್ೆ, ಗೌರವ ಅಧ್ಯಕ್ಷ ಹಾಗೂ ಹಿರಿಯ ತಂತ್ರಜ್ಞ ಡಾ. ಸುರೇಶ ಎಲ್. ಶರ್ಮಾ, ಉತ್ತರ ಕನರ್ಾಟಕ ವಿಭಾಗದ ಸಂಚಾಲಕ ಬಿ.ಎಚ್.ಹೊಂಗಲ್, ಸುರ್ವೇ ಕಲ್ಚರಲ್ ಅಕಾಡೆಮಿ ಅಧ್ಯಕ್ಷ ದೇವೆಂದ್ರ ಕುಮಾರ ನಿಗಡೆ, ಪ್ರಧಾನ ಕಾರ್ಯದಶರ್ಿ ಕಿಶನ್ ಸುರ್ವೇ ಇದ್ದರು.
ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಶ್ರೀ ಕುಮಾರಚಂದ್ರಶೇಖರನಾಥ ಸ್ವಾಮೀಜಿ ವಹಿಸಿದ್ದರು. ಉದ್ಘಾಟಕರಾಗಿ ಚೆಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಅಧ್ಯಕ್ಷರಾಗಿ ಸಾಹಿತಿ ಹಾಗೂ ಕೃಷಿ ತಜ್ಞ ಡಾ. ಶರಶ್ಚಂದ್ರ ರಾನಡೆ, ಮುಖ್ಯ ಅತಿಥಿಗಳಾಗಿ ಹಿರಿಯ ಚಲನಚಿತ್ರ ಕಲಾವಿದ ಬ್ಯಾಂಕ್ ಜನಾರ್ಧನ್, ಚಿಕ್ಕಹೆಜ್ಜಾಜಿ ಮಹದೇವ, ಚಲನಚಿತ್ರ ನಟಿಯರಾದ ಮೀನಾ, ಡಿ.ವಿ.ಸೌಜನ್ಯ ಹಾಗೂ ಸಾಮಾಜಿಕ ಹೋರಾಟಗಾರ ಡಾ. ಅಂಬರೀಷ್ ಜಿ. ಭಾಗವಹಿಸಿದ್ದರು.
ಮಾಜಿ ಸಚಿವರಾದ ರಾಮಚಂದ್ರಗೌಡರು, ಶಶಿಕಾಂತ ಅ. ನಾಯಕ ಹಾಗೂ ಮಾಜಿ ಶಾಸಕ, ಕಲಾವಿದ ನೆ.ಲ.ನರೇಂದ್ರಬಾಬು ಅವರು ಸಾಧಕರಿಗೆ ಪ್ರಶಸ್ತಿ ವಿತರಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 