ಕೋ.ಶಿವಾಪೂರ ಗ್ರಾಮದಲ್ಲಿ ಸಂಭ್ರಮದಿಂದ ಕಾರ್ತಿಕೋತ್ಸವ

Kartikotsava festival: Yaragatti news

ಯರಗಟ್ಟಿ 03: ಸಮೀಪದ ಕೆ. ಶಿವಾಪೂರ ಗ್ರಾಮದಲ್ಲಿ ಸೋಮವಾರ ದಿ.2ರಂದು ಅಮವಾಸ್ಯೆ ದಿನ ರಾತ್ರಿ ಗ್ರಾಮದ ಮಹಿಳೆಯರು ಆರತಿ ಬೆಳಗಿಸಿ ದೇವಸ್ಥಾನದ ಮುಂದೆ ನೂರಾರು ಮಹಿಳೆಯರು ಸೇರಿಕೊಂಡು ಶ್ರೀಬಸವೇಶ್ವರ ದೇವಸ್ಥಾನದ ಆವರಣದಲ್ಲಿ ವಿವಿದ ಭಣ್ಣಗಳ ರಂಗೋಲಿ ಚಿತ್ರ ಹಾಕಿ ನಂತರ ದೇವಸ್ಥಾನದ ಸುತ್ತಲು ದೀಪದಗಳನ್ನು ಹಚ್ಚಿ ಸಂಭ್ರಮಿಸಿದರು. 

ಇದರಲ್ಲಿ ಶ್ರಿಗಳಾದ ಚರಂತಯ್ಯಾ ಮರಳುಸಿದ್ದಸ್ವಾಮಿಜಿಯವರ ದಿವ್ಯ ಸಾನಿದ್ಯ ವಹಿಸಿ ಬಸವೇಶ್ವರ ದೇವಸ್ಥಾದ ಕಾರ್ತಿಕೋತ್ಸವ ಪ್ರತಿ ವರ್ಷದಂತೆ ಈ ವರ್ಷವು ಅತಿ ವಿಜ್ರಂಭನೆಯಿಂದ ಅಮೃತ ಹಸ್ತದಿಂದ ಚಾಲನೆ ನೀಡಿ ಮಾತನಾಡುತ್ತಾ ಜ್ಞಾನದ ಬಲದಿಂದ ಅಜ್ಞಾನವು ಕೇಡುನೋಡಯ್ಯಾ ದೀಪದ ಬಲದಿಂದ ತಮಂಜೆಯದ ಕೇಡು ನೋಡಯ್ಯಾ ಸತ್ಯತದ ಭಲದಿಂದ ಅಸತ್ಯತ ಕೇಡು ನೋಡಯ್ಯಾ ಈ ವಚನದ ಬಗ್ಗೆ ಸವಿಸ್ತಾರವಾಗಿ ಎಲ್ಲ ಬಕ್ತರಿಗೆ ತಿಳಿಸಿದರು. 

ಇದಕ್ಕೂ ಮೂದಲಿಗೆ ದೇವಸ್ಥಾನದಲ್ಲಿ ಅಭಿಷೇಕ ನೈವೆದ್ಯ ಮಹಾಪ್ರಸಾದ ಮಂಗಳಾರುತಿ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಸಡಗರ ಸಂಭ್ರಮದಿಂದ ಜರುಗಿದವು., ಭಾರತಿ ಮಠದ, ಗುರುದೇವಿ ಹೋಗಾರ, ಮಂಜುಳಾ ಕೋಳವಿ, ಕಾವೇರಿ ಚಿಕ್ಕಮಠ, ಭಾರತಿ ಕುಡ್ಲಿಂಗಪ್ಪಗೋಳ, ಮಶಿವಾನಂದ ಮಠಪತಿ, ಮಹಾದೇವ ಪೋಲಿಸ್, ಪುಂಡಲೀಕ ಭದಾಮಿ, ರಮೇಶ ಕುಡ್ಲಿಂಗಪ್ಪಗೋಳ, ರವಿಚಂದ್ರ ವಸ್ತ್ರದ, ಮುಂತಾದವರು ಉಪಸ್ಥಿರಿದ್ದರು.