ಕಂಪ್ಲಿಯ ಸಾಯಿಬಾಬ ಮಂದಿರದಲ್ಲಿ ಕಾರ್ತೀಕ ದೀಪೋತ್ಸವ ಸಮಾರಂಭ

ಕಂಪ್ಲಿಯ ಸಾಯಿಬಾಬ ಮಂದಿರದಲ್ಲಿ ಕಾರ್ತೀಕ ದೀಪೋತ್ಸವ ಸಮಾರಂಭ Kartik Deepotsav ceremony at Saibaba temple in Kampli

ಕಂಪ್ಲಿ   24: ಪಟ್ಟಣದ ಸತ್ಯನಾರಾಯಣ ಪೇಟೆಯಲ್ಲಿರುವ ಶ್ರೀ ಶಿರಡಿ ಸಾಯಿಬಾಬ ಮಂದಿರದಲ್ಲಿ ಕಾರ್ತೀಕ ಮಾಸದ ಹಿನ್ನಲೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಕಾರ್ತೀಕ ದೀಪೋತ್ಸವವು ಶ್ರದ್ಧಾಭಕ್ತಿ ಮತ್ತು ಸಂಭ್ರಮಗಳಿಂದ ಜರುಗಿತು. 

ಕಾರ್ತೀಕ ದೀಪೋತ್ಸವದ ಅಂಗವಾಗಿ ಮಂದಿರದಲ್ಲಿ ಸಾಯಿಬಾಬ ಅವರ ಅಮೃತ ಶಿಲಾಮೂರ್ತಿಗೆ ಬೆಳಿಗ್ಗೆ ವಿವಿಧ ಅಭಿಷೇಕಗಳು, ಅಷ್ಟೋತ್ತರ, ಕಾಕಡಾರತಿ, ಮಹಾಮಂಗಳಾರತಿ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು. 

ಸಾಯಿಬಾಬರ ಮಂಟಪವನ್ನು ವಿವಿಧ ರೀತಿಯ ದೀಪಗಳು ಹಾಗೂ ವೈವಿದ್ಯಮಯ ಹೂಗಳಿಂದ ಅಲಂಕರಿಸಿದ್ದರು. ಸಂಜೆ ವಿಶೇಷ ಪೂಜೆಯ ನಂತರ ಕಾರ್ತೀಕ ದೀಪೋತ್ಸವಕ್ಕೆ ಮಂದಿರದ ಪದಾಧಿಕಾರಿಗಳು ಮತ್ತು ಮಂದಿರದ ಅರ್ಚಕರಾದ ರಾಜೇಂದ್ರ ಪುರೋಹಿತ ದೀಪಗಳನ್ನು ಹಚ್ಚುವ ಮೂಲಕ ಚಾಲನೆ ನೀಡಿದರು. 

ನಂತರ ಮಂದಿರಕ್ಕೆ ಆಗಮಿಸಿದ ಸಾವಿರಾರು ಸಾಯಿಬಾಬ ಸದ್ಭಕ್ತರು ಸಾವಿರಾರು ದೀಪಗಳನ್ನು ಬೆಳಗಿಸಿದರು. ಸಂಜೆ ಸಂದ್ಯಾರತಿ,ವಿಶೇಷ ಪಲ್ಲಕ್ಕಿ ಸೇವೆ ಹಾಗೂ ರಾತ್ರಿ 8 ಗಂಟೆಗೆ ಶೇಷ ಆರತಿ ಜರುಗಿದವು. ಸಕಲ ಸದ್ಭಕ್ತರು ಸಾಯಿಬಾಬರ ಪಲ್ಲಕ್ಕಿ ಹೊತ್ತು ಮಂದಿರದ ಸುತ್ತ ಪ್ರದಕ್ಷಿಣಿ ಹಾಕಿ ತಮ್ಮ ಭಕ್ತಿಯ ಹರಕೆಯನ್ನು ಸಮರ​‍್ಿಸಿದರು. ಸಕಲ ಸದ್ಭಕ್ತರಿಗೆ ಪ್ರಸಾದ ವಿತರಣೆ ಜರುಗಿತು. ಕೊನೆಯ ಕಾರ್ತೀಕ ದೀಪೋತ್ಸವದಲ್ಲಿ ಪಟ್ಟಣವೂ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಮಹಿಳೆಯರು ಭಾಗವಹಿಸಿ ಸಾಯಿಬಾಬ ಭಜನೆ ಮತ್ತು ಸಾಯಿ ಸಹಸ್ರನಾಮವನ್ನು ಪಠಿಸಿದರು.