ಸಾಗರ ಪರಿಸರ ಸಂರಕ್ಷಣೆಯಲ್ಲಿ ಕರ್ನಾಟಕ ಮುಂಚೂಣಿ: ಡಿಎಫ್ ಒ ಮಾರಿಯಪ್ಪ

ಸಾಗರ ಪರಿಸರ ಸಂರಕ್ಷಣೆಯಲ್ಲಿ ಕರ್ನಾಟಕ ಮುಂಚೂಣಿ: ಡಿಎಫ್ ಒ ಮಾರಿಯಪ್ಪ   Karnataka is at the forefront in marine environment protection: DFO Mariyappa

ಕಾರವಾರ 08:   ಕಡಲ ಕಡಲಜೀವ ವೈವಿಧ್ಯತೆಯ ಸಂರಕ್ಷಣೆಯಲ್ಲಿ ಕರ್ನಾಟಕವು ಮಹತ್ತರ ಸಾಧನೆಯನ್ನು ಕೈಗೊಂಡಿದ್ದು,  ಸಾಗರ ಪರಿಸರವನ್ನು ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ವಾಗಿಸಲು  ಅಣಿಯಾಗಿದೆ ಎಂದು ಡಿಎಫ್ ಒ , ಅಂತೋನಿ ಮರಿಯಪ್ಪ  ಹೇಳಿದರು. ಕಡಲ ಜೀವಶಾಸ್ತ್ರ ಸ್ನಾತಕೋತ್ತರ ಕೇಂದ್ರದಲ್ಲಿ ಸೋಮವಾರ  ನಡೆದ ವಿಶ್ವ ಸಾಗರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಾಗರದ ಬಗ್ಗೆ ,ಸಾಗರ ಜೀವಿಗಳ ಅರಿವು ಹೆಚ್ಚುತ್ತಿದೆ.ಕಡಲಾಮೆಗಳ ಬಗ್ಗೆ ಈಚಿನ ವರ್ಷಗಳಲ್ಲಿ ಕಡಲವಾಸಿಗಳಲ್ಲಿ ಅರಿವು ಹೆಚ್ಚು. ಕಡಲಾಮೆ ಮರಿ ಬಿಡುವ ಉತ್ಸವವಾಗಿ ಬರುವ ದಿನಗಳಲ್ಲಿ ಬದಲಾಗಲಿದೆ ಎಂದರು.   ಹೊನ್ನಾವರ ಅರಣ್ಯ ಇಲಾಖೆಯ ಡಿಸಿಎಫ್  ಹಾಗೂ ಅಪ್ಸರಕೊಂಡ ಮುಗಳಿ ಮರೀನ್ ವನ್ಯಜೀವಿ ಸಂರಕ್ಷಣಾ ತಾಣದ ವಾರ್ಡನ್ ಸಿ.ಕೆ.ಯೋಗೀಶ್ ಮಾತನಾಡಿ ಕರ್ನಾಟಕದ ಮೊಟ್ಟ ಮೊದಲ ಸಾಗರ ಸಂರಕ್ಷಣ ಪ್ರದೇಶದ ಜೀವವೈವಿಧ್ಯತೆ ಮತ್ತು ಅದರ ಸಾರ್ವಜನಿಕ ಭಾಗಿತ್ವದ ನಿರ್ವಹಣೆ ಅದ್ಭುತವಾಗಿದೆ.  ಪರಿಸರ ಸಂರಕ್ಷಣೆ ಮಹತ್ವವನ್ನು ಸಾರುವ ಸಾಗರ ದಿನಾಚರಣೆ ವಿದ್ಯಾರ್ಥಿಗಳಲ್ಲಿ ಜಾಗೃತಿ ತಂದಿದೆ ಎಂದರು.    

ಸಾಗರ ಮತ್ಸ್ಯ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ ಕಾಳಿದಾಸ ಮಾತನಾಡಿ, ಭಾರತದ ಆರ್ಥಿಕತೆಯಲ್ಲಿ ನೀಲಿ ಕ್ರಾಂತಿಯ ಮಹತ್ತರ ಸಾಧನೆಯನ್ನು ತಂದಿದೆ.  ಮತ್ಸ್ಯ ಸಂಪತ್ತನ್ನು ಸಂರಕ್ಷಣೆ ಮತ್ತು ನಿರ್ವಹಣೆಯಲ್ಲಿ ಮಹತ್ತರ ಸಾಧನೆಯಾಗಿದೆ ಎಂದರು.  ಸಂಶೋಧನಾ ವಿದ್ಯಾರ್ಥಿ ರಜತ್ ಕುಮಾರ್ ಅಂಟಾರ್ಟಿಕಾ ಸಾಗರ ಪರಿಸರದ ಪ್ಲಾಂಕನ್ ಕುರಿತು ಕೈಗೊಂಡಿರುವ ಸಂಶೋಧನೆಯ ವರದಿಯನ್ನು ಪ್ರಸ್ತುತಪಡಿಸಿದರು. ವಿದ್ಯಾರ್ಥಿನಿಯರಾದ ಶ್ರೇಯಾ ಹಾಗೂ ನುಷಾ ಖಾನ್ ಕೈಗೊಂಡಿರುವ ಪ್ಯಾಂಕ್ಟನಗಳ ಕುರಿತ ಸಂಶೋಧನೆಯನ್ನು ವಿವರಿಸಿದ್ದರು. ಕಡಲ ಜೀವಶಾಸ್ತ್ರದ  ಡಾ. ಪ್ರಜ್ಞ, ಡಾ. ಶ್ರೀದೇವಿ, ಡಾ. ಗುಲ್ನಾಸ್ ಹಾಗೂ ಡಾ. ರಾಜಶ್ರೀ, ಅಪ್ಸರಕೊಂಡ ಮುಗುಳಿ ಕಡಲ ವನ್ಯಜೀವಿ ಧಾಮದ ಜೀವ ವೈವಿಧ್ಯತೆಯನ್ನು ವಿವರಿಸಿದರು.

ಕಡಲಜೀವ ಶಾಸ್ತ್ರದ ವಿದ್ಯಾರ್ಥಿ ಶಿಶಿರ್ ಸಾಗರ ವನ್ಯ ಜೀವಿಧಾಮದ ಪಕ್ಷಿಗಳನ್ನು ಪರಿಚಯಿಸಿದರು. ಸ್ನಾತಕೋತ್ತರ ಕೇಂದ್ರದ ಆಡಳಿತ ಅಧಿಕಾರಿ ಶಿವಕುಮಾರ್ ಹರಗಿ ಅತಿಥಿಗಳನ್ನು ಸ್ವಾಗತಿಸಿ ಮನುಕುಲದ ನಿರ್ವಹಣೆಯಲ್ಲಿ ಸಾಗರದ ಪ್ರಾಮುಖ್ಯತೆಯನ್ನು ವಿವರಿಸಿದರು.  ಅರಣ್ಯ ಇಲಾಖೆಯ ಎಸಿಎಫ್  ಕೆ.ಡಿ. ನಾಯಕ್, ಕಿರಣ ಎಂ ಹಾಗೂ ಉಪ ವಿಜ್ಞಾನ ಕೇಂದ್ರ ಕಾರವಾರದ ರೋಹನ್ ಭುಜಲೇ, ವಾಣಿಜ್ಯ ವಿಭಾಗದ ಡಾ. ಹನುಮಂತ ಮುಸ್ತಾರಿ, ವಿಜ್ಞಾನಿಗಳಾದ ಡಾ. ಮಹೇಶ್ ವಿ, ಡಾ. ರಘುರಾಮಡು ಹಾಗೂ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಶಿವರಾಮ್ ಮತ್ತು ಮೃತ್ಯುಂಜಯ ಉಪಸ್ಥಿತರಿದ್ದರು ವಿದ್ಯಾರ್ಥಿ ಗಣೇಶ್ ವಂದನಾರೆ​‍್ಣ ಮಾಡಿದ.