ರಾಜ್ಯದಿಂದ ಎಮ್‌.ಇ.ಎಸ್ ಸಂಘಟನೆ ನಿಷೇಧಿಸುವಂತೆ ಕರ್ನಾಟಕ ಬಂದ್

ರಾಜ್ಯದಿಂದ ಎಮ್‌.ಇ.ಎಸ್ ಸಂಘಟನೆ ನಿಷೇಧಿಸುವಂತೆ ಕರ್ನಾಟಕ ಬಂದ್ Karnataka bandh to ban MES organization from the state

ಹಾವೇರಿ 22: ರಾಜ್ಯದಿಂದ ಎಮ್‌.ಇ.ಎಸ್ ಸಂಘಟನೆ ನಿಷೇಧಿಸುವಂತೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಹಾವೇರಿ ಜಿಲ್ಲಾ ಸಮಿತಿಯ ಕರ್ನಾಟಕ ಬಂದ್‌ಗೆ ನೀಡಿದ ಕರೆಗೆ ಬೆಂಬಲಿಸಿ ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಶನಿವಾರ ಬೃಹತ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.  

ಸಂಘಟನೆಯ ಜಿಲ್ಲಾಧ್ಯಕ್ಷರಾದ ರಾಮು ತಳವಾರ ಮಾತನಾಡಿ ಎಂ.ಇ.ಎಸ್‌. ಸಂಘಟನೆಯು ರಾಜ್ಯದಲ್ಲಿ ಹಲವಾರು ದುಷ್ಕೃತ್ಯಗಳನ್ನು ನಡೆಸುತ್ತಾ ಬಂದಿದ್ದು ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳ ನಡುವೆ ಭಾಷೆಯ ವಿಚಾರವಾಗಿ ಕಂದಕ ಉಂಟು ಮಾಡಿ ಪದೇ ಪದೇ ರಾಜ್ಯದಲ್ಲಿ ಅಶಾಂತಿ ನಿರ್ಮಾಣವಾಗಲು ಕಾರಣೀಭೂತವಾಗಿದೆ. ಇತ್ತೀಚೆಗೆ ಬೆಳಗಾವಿ ನಗರದಲ್ಲಿ ಬಸ್‌ಕಂಡಕ್ಟರ್ ಒಬ್ಬರನ್ನು ಅಮಾನುಶವಾಗಿ ಥಳಿಸಿ ರಾಜ್ಯಮಟ್ಟದಲ್ಲಿ ವಿವಾದ ಉಂಟಾಗಲು ಕಾರಣವಾಗಿತ್ತು. ಅನಾವಶ್ಯಕವಾಗಿ ರಾಜ್ಯದಲ್ಲಿ ಅಶಾಂತಿ ಉಂಟು ಮಾಡುತ್ತಿರುವ ಎಂ.ಇ.ಎಸ್‌. ಸಂಘಟನೆಯನ್ನು ರಾಜ್ಯದಿಂದ ಶಾಶ್ವತವಾಗಿ ನಿರ್ಮೂಲನೆ ಮಾಡಬೇಕು ಅಲ್ಲದೇ ಉತ್ತರ ಕರ್ನಾಟಕ ಭಾಗವು ಅಭಿವೃದ್ಧಿ ಕಾರ್ಯಗಳಿಂದ ತೀರಾ ಹಿಂದುಳಿದಿದ್ದು ಇಲ್ಲಿನ ನೀರಾವರಿ ಯೋಜನೆಗಳು, ಶಿಕ್ಷಣ, ಆರೋಗ್ಯ ಮುಂತಾದ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿದಾಗ ಸಮಗ್ರ ಕರ್ನಾಟಕ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದರು.   

ಜಿಲ್ಲಾ ಮಹಿಳಾ ಸಮಿತಿಯ ಅಧ್ಯಕ್ಷರಾದ ಸುಮಾ ಪುರದ ಮಾತನಾಡಿ ಬೆಂಗಳೂರು ನಗರ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗೆ ಕುಡಿಯುವ ನೀರಿನ ಜೊತೆಗೆ ಇಲ್ಲಿನ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಮೇಕೆದಾಟು ಯೋಜನೆಯ ನಿರ್ಮಾಣವು ತುಂಬಾ ಅಗತ್ಯವಾಗಿದ್ದು ಸದರಿ ಕಾರ್ಯವನ್ನು ರಾಜ್ಯ ಸರ್ಕಾರ ಕೂಡಲೇ ಚಾಲನೆ ನೀಡಿ ಈ ಭಾಗದ ಬಹುದಿನಗಳ ಬೇಡಿಕೆಯಾಗಿರುವ ಮೇಕೆದಾಟು ಯೋಜನೆಯನ್ನು ರಾಜ್ಯ ಸರ್ಕಾರ ಶೀಘ್ರವೇ ಅನುಷ್ಠಾನಗೊಳಿಸಬೇಕೆಂದರು. 

ಸಂದರ್ಬದಲ್ಲಿ ಜಿಲ್ಲಾ ಮಹಿಳಾ ಉಪಾಧ್ಯಕ್ಷರಾದ ಪ್ರೇಮಾ ಮುದಿಗೌಡ್ರ ಬ್ಯಾಡಗಿ ತಾಲೂಕು ಸಮಿತಿ ಅಧ್ಯಕ್ಷರಾದ ಮಂಜುನಾಥ ದಾನಪ್ಪನವರ, ಹಿರೇಕೆರೂರ ತಾಲೂಕು ಸಮಿತಿ ಅಧ್ಯಕ್ಷರಾದ ವಿರೇಶ ಹಡಪದ, ಹಾನಗಲ್ಲ ತಾಲೂಕು ಸಮಿತಿ ಅಧ್ಯಕ್ಷರಾದ ಉಮೇಶ ಮುದಿಗೌಡ್ರ, ರಾಣೆಬೆನ್ನೂರ ತಾಲೂಕು ಸಮಿತಿ ಅಧ್ಯಕ್ಷರಾದ ನಾಗರಾಜ ಎರಬಾಳ ಶಿಗ್ಗಾಂವಿ ಅಧ್ಯಕ್ಷರಾದ ಸುರೇಶ ವನಹಳ್ಳಿ ಪ್ರವೀಣ ಖಾಗದ, ಬಸವಣ್ಣಯ್ಯ ಬಸಾಪೂರಮಠ, ಶಿವಪ್ಪ ಬಳಲಕೊಪ್ಪ. ಗೀತಾ ದಂಡೆಮ್ಮನವರ ರೇಣುಕಾ ಗಡಿಯಣ್ಣನವರ, ಬಸವರಾಜ ಬಸಾಪೂರ. ಪಾರಮ್ಮ ಹಾವನೂರ ಜ್ಯೋತಿ ಚೌಡದಾನಪುರ, ಸಾವಿತ್ರಿ ಹಾವೇರಿ. ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.