ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ: ಕೊಪ್ಪಳ ಜಿಲ್ಲಾ ಘಟಕದ ಎಲ್ಲಾ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆ
Karnataka Working Journalists Association elections: All office bearers of Koppal district unit elec
ಕೊಪ್ಪಳ 30: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2025- 28ನೇ ಸಾಲಿನ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲಾ ಘಟಕದ ಎಲ್ಲಾ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆ ಗೊಂಡಿದ್ದಾರೆ ಎಂದು ಚುನಾವಣಾ ಅಧಿಕಾರಿ ದುರ್ಗಪ್ಪ ತಿಪ್ಪನಾಳ ಪ್ರಕಟಿಸಿದ್ದಾರೆ.
ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಹನುಮಂತ ಹಳ್ಳಿಕೇರಿ ಆ ವಿರೋಧ ಆಯ್ಕೆಗೊಂಡರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾಗಿ ನಾಗರಾಜ್ ವೈ ಪುನರ್ ಆಯ್ಕೆಗೊಂಡಿದ್ದಾರೆ. ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಸ್ಥಾನಕ್ಕೆ ವೀರಣ್ಣ ಕಳ್ಳಿಮನಿ ಅವರು ಅವಿರೋಧ ಆಯ್ಕೆ ಗೊಂಡಿದ್ದಾರೆ.ಅದರಂತೆ ಇನ್ನುಳಿದ ಸ್ಥಾನಗಳಿಗೆ ಕೂಡ ಆವಿರೋಧ ಆಯ್ಕೆಗೊಂಡಿದ್ದು ಜಿಲ್ಲಾ ಉಪಾಧ್ಯಕ್ಷರಾಗಿ ಕೊಪ್ಪಳ ಕೇಂದ್ರ ಸ್ಥಾನದ ರಾಜು ಬಿ.ಆರ್, ಕಾರಟಗಿಯ ಎಚ್, ಚಾಂದಸಿಂಗ್ ರಜಪೂತ ಮತ್ತು ಗಂಗಾವತಿಯ ಪ್ರಸನ್ನ ದೇಸಾಯಿ ಆಯ್ಕೆಗೊಂಡಿದ್ದಾರೆ. ಜಿಲ್ಲಾ ಕಾರ್ಯದರ್ಶಿ ಸ್ಥಾನಕ್ಕೆ ಕೊಪ್ಪಳ ಕೇಂದ್ರ ಸ್ಥಾನದ ರುದ್ರಗೌಡ ಪಾಟೀಲ್, ಕುಷ್ಟಗಿಯ ರವೀಂದ್ರ ಬಾಕಳೆ ಮತ್ತು ಗಂಗಾವತಿಯ ವೃಷಬೇಂದ್ರ ಸ್ವಾಮಿ ಹಿರೇಮಠ್ ಮತ್ತು ಖಜಾಂಚಿಯಾಗಿ ಕೊಪ್ಪಳದ ಫಕೀರ್ಪ ಗೋಟುರ ಆಯ್ಕೆಗೊಂಡಿದ್ದಾರೆ. ಉಳಿದಂತೆ ಜಿಲ್ಲಾ ಕಾರ್ಯಕಾರಿ ಸಮಿತಿಯ ಒಟ್ಟು 15 ಸ್ಥಾನದಲ್ಲಿ 13 ಜನ ಸದಸ್ಯರು ಮಾತ್ರ ತಮ್ಮ ಉಮೇದುವಾರಿಕೆ ನಾಮಪತ್ರ ಸಲ್ಲಿಸಿದ್ದಾರೆ.ಇದರಲ್ಲಿ ಕೊಪ್ಪಳದ ಬ್ರಹ್ಮಾನಂದ ಬಡಿಗೇರ್, ಸಿದ್ದು ಹಿರೇಮಠ ,ಶಿವಕುಮಾರ್ ಹಿರೇಮಠ, ಕುಕನೂರಿನ ಬಸವರಾಜ್ ಕೊಡ್ಲಿ, ಆಲಾವುದ್ದೀನ್ ಎಮ್ಮಿ, ಕೊಪ್ಪಳದ ಧರ್ಮಣ್ಣ ಹಟ್ಟಿ, ಗಂಗಾವತಿಯ ಜೆ.ವಸಂತ್ ಕುಮಾರ್ ,ಕೊಪ್ಪಳದ ಮೊಹಮ್ಮದ್ ಅಖಿಲ್ ಉಡೇವು, ಗಂಗಾವತಿಯ ಹನುಮೇಶ್ ಬಟಾರಿ, ಕುಷ್ಟಗಿಯ ಬಸವರಾಜ ಪಲ್ಲೆದ, ಗಂಗಾವತಿಯ ಕೆ.ಎಂ ,ಶರಣಯ್ಯ ಸ್ವಾಮಿ, ಕೊಪ್ಪಳದ ಮಂಜುನಾಥ್ ಪೂಜಾರ್ ಮತ್ತು ಮಂಜುನಾಥ್ ಗೊಂಡಬಾಳ ಅವಿರೋಧ ಆಯ್ಕೆಗೊಂಡಿದ್ದಾರೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ದುರ್ಗಪ್ಪ ತಿಪ್ಪನಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರುಗಳಾದ ಎಂ ಸಾಧಿಕ ಅಲಿ, ಎಚ್.ಎಸ್ ಹರೀಶ್, ಜಿ.ಎಸ್. ಗೋನಾಳ್, ಎನ್. ಎಂ. ದೊಡ್ಡಮನಿ, ಶಿವರಾಜ್ ನುಗದೋಣಿ, ಗಂಗಾವತಿಯ ವೆಂಕಟೇಶ್ ಕುಲಕರ್ಣಿ, ಕೃಷ್ಣ ವಿರಾಪುರ ,ವಿಶ್ವನಾಥ ಬೆಳಗಲ್ಮಠ, ಎಂ.ಜೆ ಶ್ರೀನಿವಾಸ, ಶಿವಪ್ಪ ನಾಯಕ್ ,ನಾಗರಾಜ್ ಇಂಗಳಗಿ, ಕಾರಟಗಿಯ ಸಿದ್ದನಗೌಡ, ಶರಣಪ್ಪ, ಕನಕಗಿರಿಯ ಮಧುಸೂದನ ರೆಡ್ಡಿ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದು ನೂತನ ಪದಾಧಿಕಾರಿಗಳೆಲ್ಲರಿಗೂ ಸನ್ಮಾನಿಸಿ ಶುಭ ಕೋರಿದರು.
ಇದೆ ವೇಳೆ ಚುನಾವಣೆ ಕಾರ್ಯ ಯಶಸ್ವಿಯಾಗಿ ನಿರ್ವಹಿಸಿದ ಸಹಕಾರಿ ಸಂಘಗಳ ನಿಬಂಧಕರ ಕಚೇರಿಯ ದುರ್ಗಪ್ಪ ತಿಪ್ಪನಾಳ ರವರು ಜಿಲ್ಲಾ ಚುನಾವಣಾ ಅಧಿಕಾರಿಯಾಗಿ ಉತ್ತಮ ಕಾರ್ಯ ನಿರ್ವಹಿಸಿ ಪ್ರಕಟಗೊಳಿಸಿರುವುದಕ್ಕೆ ಸಂಘದ ಪದಾಧಿಕಾರಿಗಳು ಮತ್ತು ಪತ್ರಕರ್ತ ಸದಸ್ಯರು ಸೇರಿಕೊಂಡು ಅವರನ್ನು ಸನ್ಮಾನಿಸಿ ಅಭಿನಂದಿಸಿದರು,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 