ಬಂಡಿಗಣಿ ಮಠದ ದಾನೇಶ್ವರ ಸ್ವಾಮಿಜಿ ಅಸ್ತಂಗತ
Karnataka Suvarna Rajyotsava Award winner known as Dasoha Swamiji
ದಾಸೋಹ ಸ್ವಾಮಿಜಿ ಎಂದು ಹೆಸರಾದ ಕರ್ನಾಟಕ ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ವಿಜೇತ
ವರದಿ : ಗೀತಾ ಗೊಂದಕರ
ರಬಕವಿ-ಬನಹಟ್ಟಿ 05: ಕರ್ನಾಟಕ, ಮಹಾರಾಷ್ಟ್ರ, ಆಂಧ್ರ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಜರುಗುವ ಜಾತ್ರೆ, ಮಹೋತ್ಸವ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳಿಗೆ ಆಗಮಿಸುವ ಲಕ್ಷಾಂತರ ಭಕ್ತಾದಿಗಳಿಗೆ ಅನ್ನದಾಸೋಹ ಮಾಡಿ, ಶ್ರೀಶೈಲಂ ಜಗದ್ಗುರುಗಳಿಂದ ದಾಸೋಹ ರತ್ನ ಬಿರುದು ಪಡೆದ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿ ಬಸವಗೋಪಾಲ ನೀಲಮಾಣಿಕ ಮಠದ ಶ್ರೀ ದಾನೇಶ್ವರರು ಅನಾರೋಗ್ಯದಿಂದ ನಿಧನರಾಗಿದ್ದಾರೆ.
ದಾನೇಶ್ವರರು ಮೂಲತಃ ಅವರು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಸವದಿ ಗ್ರಾಮದವರು. 19-09-1950 ರಂದು ಜನಿಸಿದ ಅವರು ಮುಂದೆ ತಮ್ಮ ಇಪ್ಪತ್ತನೇ ವಯಸ್ಸಿನಲ್ಲಿ (1970) ಬಂಡಿಗಣಿಗೆ ಬಂದು ಸ್ವತಃ ದುಡಿದು ಬಸವಗೋಪಾಲ ಮಠ ಕಟ್ಟಿಸಿ ತಂದೆ ನಂದೇಶನ ಪೂಜೆ ಮಾಡುತ್ತಾ ಜೀವನ ನಡೆಸಿದರು.
1970 ರಿಂದ ತಂದೆ ನಂದೇಶ ಶ್ರೀವೆಂಕಟೇಶ್ವರ ದಯದಿಂದ ಮೂಲ ಮಠ ಕ್ಷೇತ್ರಗಳಲ್ಲದೆ ಬಂಡಿಗಣಿಯಲ್ಲಿ ಸ್ವಂತ ಸ್ಥಳ ತೆಗೆದುಕೊಂಡು ಮಠವನ್ನು ಸ್ಥಾಪಿಸಿದರು. ಮಠಕ್ಕೆ ಬರುವ ಭಕ್ತಾದಿಗಳಿಗೆ ದಾಸೋಹದ ವ್ಯವಸ್ಥೆ ಮಾಡಿದರು. ದಾಸೋಹದಿಂದ ಜಗತ್ತಿಗೆ ಶಾಂತಿ ದೊರೆಯುತ್ತದೆ ಎಂಬ ಉದ್ಧೇಶದಿಂದ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಜರುಗುವ ಧಾರ್ಮಿಕ ಕಾರ್ಯಕ್ರಮಗಳಿಗೆ ದಾಸೋಹ ಏರಿ್ಡಸುತ್ತಾ ಬಂದರು.
ಮಠದ ಜಮೀನಿನಲ್ಲಿ ಬೆಳೆ ಬೆಳೆದ ದವಸ-ಧಾನ್ಯಗಳಿಂದ ದಾಸೋಹ ಮಾಡುತ್ತಿದ್ದು ವಿಶೇಷವಾಗಿದೆ. ಮಠಕ್ಕೆ ಬರುವ ಭಕ್ತರು ತಮ್ಮ ಬೇಡಿದ ಇಷ್ಠಾರ್ಥ ಫಲ ನೀಡಿದ ನಂತರ ಮಠಕ್ಕೆ ತಮ್ಮಗಾದಷ್ಟು ದವಸ-ಧಾನ್ಯ ನೀಡುತ್ತಿದ್ದರು. ಪ್ರತಿ ಸೋಮವಾರ ಹಾಗೂ ಪ್ರತಿ ಅಮವಾಸ್ಯೆ ದಿನದಂದು ಮಠದಲ್ಲಿ ಸುಮಾರು ಹತ್ತು ಸಾವಿರ ಜನ ಭಕ್ತರಿಂದ ಕೂಡಿದ ಸತ್ಸಂಗ ನಡೆಯುತ್ತಿತು.
ಪ್ರತಿ ವರ್ಷ ಬಂಡಿಗಣಿ ಮಠದಿಂದ ಆಂಧ್ರ್ರದೇಶದ ಶ್ರೀಶೈಲ, ಮಹಾರಾಷ್ಟ್ರದ ಪಂಢರಪುರ, ತೆಲಂಗಾಣದ ತಿರುಪತಿ, ಹುಲಜಂತಿ, ಗುಡ್ಡಾಪುರ, ತುಳಜಾಪುರ, ಕೊಲ್ಲಾಪುರ ಸೇರಿದಂತೆ ಕರ್ನಾಟಕದ ಬನಹಟ್ಟಿ, ಹೊಸೂರ, ಯಡೂರ, ಕೊಣ್ಣೂರ, ಮಾಚಕನೂರ, ಖಿಳೇಗಾಂವ, ಸೊಗಲ, ಎಲ್ಲಮ್ಮನಗುಡ್ಡ, ಚಿಂಚಲಿ, ಸಂಡೂರ, ಕಡಪಟ್ಟಿ, ಸೀತಿಮನಿ, ಕಟಗೇರಿ, ಶಿರಸಂಗಿ ಕೊಕಟನೂರ, ನಾವಲಗಿ, ಕುಲ್ಲಹಳ್ಳಿ, ಜಮಖಂಡಿ, ಕಟಗೇರಿ, ನಾವಲಗಿ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ದಾಸೋಹ ನಡೆಸುತ್ತಿದ್ದರು.
ಮಠದ ಶಾಖಾ ಮಠಗಳಂತೆ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿಯ ಸವದಿ, ಬೆಳಗಲಿ, ಹಳ್ಳೂರ, ಮುಧೋಳ, ಕೆಸರಗೊಪ್ಪ, ಮಧುರಖಂಡಿ, ಪಿ.ಜಿ.ಮಲ್ಲಾಪೂರ, ಅವರಾದಿ, ಅರಳಿಮಟ್ಟಿ, ಮೂಡಲಗಿ, ದುರದುಂಡಿ, ಅರಭಾಂವಿ, ಗುರ್ಲಾಪುರ, ಅಥಣಿ, ಮದಭಾಂವಿ, ಪರಮಾನಂದವಾಡಿ, ಹಾಲಳ್ಳಿ, ಹೊನಕುಪ್ಪಿ, ಮುದ್ದೇನೂರ, ನಂದಗಾಂವ, ಬೊಂಬಲಾಡ, ಘಟಪ್ರಭಾ, ಇಟ್ನಾಳ, ಜಗದಾಳ, ಕುಲಹಳ್ಳಿ, ಚಿಮ್ಮಡ, ಮಹಾಲಿಂಗಪುರ, ಜಮಖಂಡಿ, ಕಂಕಣವಾಡಿ, ಜನವಾಡ, ಖಾನಟ್ಟಿ, ಹಂದಿಗುಂದ, ಸಮೀರವಾಡಿ ಸೇರಿದಂತೆ ಅನೇಕ ಗ್ರಾಮಗಲ್ಲಿ ಸಪ್ತಾಹಗಳು ನಡೆಯುತ್ತವೆ.
ದಾಸೋಹದಲ್ಲಿ ಹಾಲುಗ್ಗಿ, ಸಜ್ಜಕ, ಜಿಲೇಬಿ, ಹೋಳಿಗೆ, ಕಡಬು, ಮುಂಬೈ ಮಾದಲಿ, ತುಪ್ಪ, ಶಾಂಡಿಗೆ, ಭಜಿ, ಪೂರಿ, ಚಪಾತಿ ಭಾಜಿ, ಮಸಾಲಿ ಅನ್ನ, ಸಾಂಬಾರ, ತರಕಾರಿ ಸೇರಿದಂತೆ ಇನ್ನೂ ಅನೇಕ ತರಹದ ಪದಾರ್ಥಗಳನ್ನು ಮಾಡಿರುತ್ತಾರೆ. ದಾಸೋಹ ಕಾರ್ಯಕ್ಕೆ ಐದು ನೂರಕ್ಕೂ ಹೆಚ್ಚು ಜನ ಭಕ್ತರು ಭಾಗವಹಿಸುತ್ತಾರೆ. ಯಾವುದೇ ಜಾತ್ರೆ ಉತ್ಸವ ಇರಲಿ. ಕೇಳುವ ಭಕ್ತರಿಗೆ ಇಲ್ಲ ಎನ್ನದೇ ದಾಸೋಹದ ನೇತೃತ್ವ ವಹಿಸಿ ಆ ಸ್ಥಳಗಳಿಗೆ ತಾವೇ ಸ್ವತಃ ಹೋಗಿ ಅನ್ನ ಪ್ರಸಾದವನ್ನು ಹಂಚಿ ಬರುತ್ತಾರೆ. ಯಾವುದೇ ಜಾತಿ-ಧರ್ಮದ ಉತ್ಸವಗಳಾಗಿರಲಿ ಯಾವುದೇ ಭೇದ-ಭಾವ ತೋರದ ಸರ್ವ ಧರ್ಮ ಸಮಾನತೆಯ ಹರಿಕಾರರಾಗಿದ್ದರು. ಹೊಸೂರಿನ ಸಿರಾಜಸಾಬ-ಮುರಾದಸಾಬ ಉರುಸಿನ ದಾಸೋಹವನ್ನು ಏರಿ್ಡಸಿ, ಸ್ವಾಮಿಜಿಗಳೆ ಆಗಮಿಸಿ ಭಕ್ತರಿಗೆ ಅನ್ನಪ್ರಸಾದ ವಿತರಿಸುತ್ತಿದ್ದರು. ಈ ವರ್ಷ ಜರುಗಿದ ರನ್ನವೈಭವದ ಎರಡು ದಿನಗಳ ಕಾಲದ ನಡೆದ ಕಾರ್ಯಕ್ರಮದಲ್ಲಿ ಬಂಡಿಗಣಿ ಮಠದಿಂದ ಸುಮಾರು 60 ಸಾವಿರಕ್ಕೂ ಅಧಿಕ ಜನರಿಗೆ ಉಪಹಾರ ಹಾಗೂ ಭೋಜನದ ವ್ಯವಸ್ಥೆ ಮಾಡಿರುವುದು ಐತಿಹಾಸಿಕವಾಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ, ರಾಮದುರ್ಗ, ರಾಯಭಾಗ ತಾಲೂಕುಗಳಿಂದ ಪಾದಯಾತ್ರೆ ಮೂಲಕ ಸಾವಿರಾರು ಜನ ಬಂಡಿಗಣಿ ಆಗಮಿಸಿ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಮಠದಿಂದ ಶಾಲೆ, ಸಾಮೂಹಿಕ ವಿವಾಹ, ಗೋಶಾಲೆ, ಜೋಗಮ್ಮಗಳಿಗೆ ಅಡಲಗಿ ತುಂಬುವುದು ಸೇರಿದಂತೆ ಬಡ ಕುಟುಂಬಗಳ ಚೊಚ್ಚಲ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು.
2013 ರ ಶ್ರೀ ಕ್ಷೇತ್ರ ಯಡೂರ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಚಕ್ರವರ್ತಿ ದಾನೇಶ್ವರರಿಗೆ ಶ್ರೀಶೈಲ ಕ್ಷೇತ್ರದ ಶ್ರೀಮತ್ ಗಿರಿರಾಜ ಸೂರ್ಯ ಸಿಂಹಾಸನಾಧೀಶ್ವರ ಶ್ರೀ 1008 ಡಾ. ಚನ್ನಸಿದ್ದರಾಮ ಪಂಡಿತ್ಯರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಗಳು ದಾಸೋಹ ರತ್ನ ಎಂಬ ಪ್ರಶಸ್ತಿ ನೀಡಿ ಗೌರವಿಸಿದರು.
ಬಂಡಿಗಣಿಯ ಬಸವಗೋಪಾಲ ನೀಲಮಾಣಿಕ ಮಠದ ಚಕ್ರವರ್ತಿ ದಾನೇಶ್ವರ ಶ್ರೀಗಳಿಗೆ ಸಮಾಜಸೇವೆ ವಿಭಾಗದಲ್ಲಿ ಕರ್ನಾಟಕ ಸುವರ್ಣ ಮಹೋತ್ಸವ ಸಾಧಕ ಪ್ರಶಸ್ತಿಯನ್ನು ಕಳೆದ ವರ್ಷ ರಾಜ್ಯ ಸರ್ಕಾರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಪಡೆದಿದ್ದರು. ಅಲ್ಲದೆ ಕಳೆದ ತಿಂಗಳಿನಲ್ಲಿಯೇ ಸರ್ವ ಧರ್ಮ ಸಮಾನತೆಯ ಸಮಾರಂಭವನ್ನು ಏರಿ್ಡಸಿದ್ದರು. ಮುಖ್ಯಮಂತ್ರಿ ಸಿದ್ಧರಾಮ ಸೇರಿದಂತೆ ಸಚಿವರು, ಶಾಸಕರು, ಮಠಾಧೀಶರು, ಸರ್ವ ಧರ್ಮಗಳ ಪೂಜ್ಯರು ಸೇರಿದಂತೆ ಲಕ್ಷಾಂತರ ಭಕ್ತಾದಿಗಳು ಆಗಮಿಸಿದ್ದರು. ಎಲ್ಲರಿಗೂ ದಾಸೋಹ ಏರಿ್ಡಸಿದ್ದು ನೋಡಿ ಮುಖ್ಯಮಂತ್ರಿಗಳು ಅಚ್ಚರಿ ವ್ಯಕ್ತಪಡಿಸಿದ್ದರು.
ಮಠದ ಆವರಣದಲ್ಲಿ ಶನಿವಾರ ಬೆಳಿಗ್ಗೆ 5 ಗಂಟೆಯಿಂದ ಸಂಜೆ 4 ರವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುವುದು. ಸಂಜೆ 6 ಕ್ಕೆ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಉತ್ತರ ಕರ್ನಾಟಕ ಭಾಗದಲ್ಲಿ ಅಪಾರ ಭಕ್ತರನ್ನು ಹೊಂದಿದ್ದು, ಅಂತ್ಯ ಸಂಸ್ಕಾರಕ್ಕೆ ಲಕ್ಷಾಂತರ ಭಕ್ತರು ಬರುವ ನೀರಿಕ್ಷೆ ಇರುವದರಿಂದ ಪೊಲೀಸ್‌ರು ಸೂಕ್ತ ಬಂದೋಬಸ್ತ ಮಾಡಿದ್ದಾರೆ.
ಸಂತಾಪ : ಇಂಚಗೇರಿ ಮಠದ ರೇವಣಸಿದ್ಧೇಶ್ವರ ಮಹಾರಾಜರು, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ, ಜವಳಿ ಸಚಿವ ಶಿವಾನಂದ ಪಾಟೀಲ, ಮಾಜಿ ಸಚಿವ ಮುರುಗೇಶ ನಿರಾಣಿ, ಶಾಸಕರಾದ ಜಗದೀಶ ಗುಡಗುಂಟಿ, ಸಿದ್ದು ಸವದಿ, ಉಮಾಶ್ರೀ, ಮುಖಂಡರಾದ ಡಾಽಽ ಎ. ಆರ್. ಬೆಳಗಲಿ, ದೇವಲಸರ್ಕಾರ ದೇಸಾಯಿ, ಹರ್ಷವರ್ಧನ ಪಟವರ್ಧನ, ಪ್ರಭು ಕೋಪರ್ಡೆ, ಸಿದ್ದು ಕೊಣ್ಣೂರ, ಬಸವರಾಜ ಕೊಕಟನೂರ ಸೇರಿದಂತೆ ಅನೇಕ ಮಠಾಧೀಶರು, ಮುಖಂಡರು ಸಂತಾಪ ಸೂಚಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 