ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಚುನಾವಣೆ:: ಜಬಿಉಲ್ಲಾ ಪ್ರಚಾರ : ಬೆಂಬಲಿಸಲು ಮನವಿ
Karnataka State Bar Council Elections:: Zabiullah campaign: Appeal to support
ಕೊಪ್ಪಳ 12 : ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಚುನಾವಣೆ 2026 ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ ನ್ಯಾಯವಾದಿ ಶೇಕ್ ಇಸ್ಮಾಯಿಲ್ ಜಬಿವುಲ್ಲಾ ರವರು ಕೊಪ್ಪಳ ಜಿಲ್ಲೆಯಲ್ಲಿ ಮತಯಾಚನೆ ಮಾಡಿ ಸ್ಪರ್ಧಿಸಿರುವ ತಮಗೆ ಬೆಂಬಲಿಸುವಂತೆ ಮತದಾರರ ನ್ಯಾಯವಾದಿಗಳಲ್ಲಿ ಅವರು ಮನವಿ ಮಾಡಿಕೊಂಡರು, ಇತ್ತೀಚಿಗೆ ಕೊಪ್ಪಳಕ್ಕೆ ಭೇಟಿ ನೀಡಿದ ಅವರು ಇಲ್ಲಿನ ಜಿಲ್ಲಾ ವಕೀಲರ ಸಭಾಭವನದಲ್ಲಿ ಪ್ರಚಾರ ಸಭೆ ನಡೆಸಿ ಮನವಿ ಮಾಡಿಕೊಂಡರು ಬರುವ ಮಾರ್ಚ್ 11 ರಂದು ನಡೆಯಲಿರುವ ಚುನಾವಣೆಯಲ್ಲಿ ನನಗೆ ಹೆಚ್ಚಿನ ಮತಗಳನ್ನು ನೀಡಿ ಬೆಂಬಲಿಸಬೇಕು ಎಂದು ಮನವಿ ಮಾಡಿಕೊಂಡ ಅವರು ವಕೀಲರ ಪರಿಷತ್ತಿನ ಸರ್ವತೋಮುಖ ಅಭಿವೃದ್ಧಿಗಾಗಿ ಮತ್ತು ನ್ಯಾಯಾದಿಗಳ ಸಂಘಟನೆ ಬಲಿಷ್ಠ ಗೊಳಿಸುವುದರ ಜೊತೆಗೆ ಕಕ್ಷಿದಾರ ಸಾರ್ವಜನಿಕರಿಗೆ ಇನ್ನೂ ಉತ್ತಮ ರೀತಿಯಲ್ಲಿ ನ್ಯಾಯ ಒದಗಿಸಿ ಕೊಡುವ ಕೆಲಸ ಎಲ್ಲರೂ ಸೇರಿ ಮಾಡಲು ಮತ್ತು ನಮ್ಮ ಸಂಘಟನೆ ಬೆಳೆಸಲು ನನಗೆ ಅವಕಾಶ ನೀಡಬೇಕು,
ನ್ಯಾಯವಾದಿಗಳ ನ್ಯಾಯ ಸಮ್ಮತವಾದಂತ ಎಲ್ಲಾ ಬೇಕು ಬೇಡಿಕೆಗಳ ಈಡೇರಿಕೆಗಾಗಿ ಪ್ರಮಾಣಿಕವಾಗಿ ಶ್ರಮಿಸುವೆ ಎಂದು ಶೇಕ್ ಇಸ್ಮಾಯಿಲ್ ಜಬಿವುಲ್ಲಾ ಹೇಳಿದರು, ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಏ ವಿ ಕಣವಿ, ಉಪಾಧ್ಯಕ್ಷ ಬಿವಿ ಸಜ್ಜನ್, ಕಾರ್ಯದರ್ಶಿ ಪ್ರಕಾಶ್ ಹಾದಿಮನಿ ಮಾಜಿ ಅಧ್ಯಕ್ಷ ಹನುಮೇಶ್ ಮುರಡಿ , ಆಸಿಫ್ ಸರ್ದಾರ್, ಬೆಳ್ಳಪ್ಪ, ಖಜಾಂಚಿ ರಾಜ ಸಾಬ್, ಸದಸ್ಯ ನ್ಯಾಯವಾದಿಗಳಾದ ಹನುಮಂತ್ ರಾವ್ , ಪ್ರದೀಪ್ ಬಾಗಲ್ ಕೋಟೆ ಪ್ರಕಾಶ್ ಆನಂದ ಹಳ್ಳಿ ,ಕೊಪ್ಪಳ ನಗರಸಭೆಯ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್, ರಿಯಾಜ್ ಅಹಮದ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು,
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 