ಕರ್ನಾಟಕ ಸ್ವಯಂ ಗಣತಿ: ಪ್ರಗತಿಯಲ್ಲಿ ಬಳ್ಳಾರಿ ಪ್ರಥಮ
Karnataka Self-Census: Bellary ranks first in progress
ಬಳ್ಳಾರಿ 16: ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ 2027ರ ಡಿಜಿಟಲ್ ಜನಗಣತಿ ಅಂಗವಾಗಿ ಸ್ವಯಂ ಗಣತಿ ಪ್ರಕ್ರಿಯೆಯು ಏ.01 ರಿಂದ ಆರಂಭವಾಗಿ ಆಶಾದಾಯಕವಾಗಿ ಮುನ್ನಡೆದು, ಕೊನೆಯ ದಿನವಾದ (ಬುಧವಾರ) ಏಪ್ರಿಲ್ 15ರ ಸಂಜೆ 6 ಗಂಟೆಯ ಅಂಕಿಅಂಶಗಳ ಪ್ರಕಾರ ರಾಜ್ಯದ ಒಟ್ಟಾರೆ ಪ್ರಗತಿ ಶೇ.4.80 ರಷ್ಟಾಗಿದೆ. ರಾಜ್ಯದ ಒಟ್ಟು ಅಂದಾಜು 1.68 ಕೋಟಿ ಮನೆಗಳ ಪೈಕಿ ಈವರೆಗೆ 8,08,621 ಕುಟುಂಬಗಳು ಯಶಸ್ವಿಯಾಗಿ ತಮ್ಮ ವಿವರಗಳನ್ನು ದಾಖಲಿಸಿವೆ.
ರಾಜ್ಯದಲ್ಲಿ ಒಟ್ಟು 1,68,57,713 ನೀರೀಕ್ಷಿತ ಕುಟುಂಬಗಳಲ್ಲಿ 8,08,621 ಮನೆಗಳು ಸ್ವಯಂ ಗಣತಿ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮಾಹಿತಿ ನೋಂದಾಯಿಸಿದ್ದು, ಏ.15 ರ ಸಂಜೆ 06 ರ ಅಂತ್ಯದವರೆಗೆ ಶೇ.4.80 ರಷ್ಟು ಪ್ರಗತಿಯಾಗಿದೆ.
ಜಿಲ್ಲಾವಾರು ಪಟ್ಟಿಯಲ್ಲಿ ಬಳ್ಳಾರಿ ಜಿಲ್ಲೆಯು ಮುಂಚೂಣಿಯಲ್ಲಿದ್ದರೆ, ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಬೆಂಗಳೂರು ನಗರ ಜಿಲ್ಲೆಯು ಅತ್ಯಂತ ಕಡಿಮೆ ಪ್ರಗತಿ ಸಾಧಿಸಿದೆ.*ಜಿಲ್ಲಾವಾರು ಸಾಧನೆ:*
ಬಳ್ಳಾರಿ: ಶೇ. 18.33
ದಕ್ಷಿಣ ಕನ್ನಡ: ಶೇ. 16.78
ಬಾಗಲಕೋಟೆ: ಶೇ. 16.08
ವಿಜಯನಗರ: ಶೇ. 11.38
ತುಮಕೂರು: ಶೇ. 10.48
ಬಳ್ಳಾರಿ ಜಿಲ್ಲೆಯು ಶೇ.18.33 ರಷ್ಟು ಪ್ರಗತಿ ಸಾಧಿಸುವ ಮೂಲಕ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ನೀರೀಕ್ಷಿತ 2,98,536 ಕುಟುಂಬಗಳ ಪೈಕಿ ಈಗಾಗಲೇ 54,735 ಕುಟುಂಬಗಳು ಗಣತಿ ಪ್ರಕ್ರಿಯೆ ಪೂರ್ಣಗೊಳಿಸಿವೆ. ದಕ್ಷಿಣ ಕನ್ನಡ ಜಿಲ್ಲೆಯು ಶೇ. 16.78 ರಷ್ಟು ಸಾಧನೆಯೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಬಾಗಲಕೋಟೆ ಶೇ. 16.08 ರೊಂದಿಗೆ ಮೂರನೇ ಸ್ಥಾನದಲ್ಲಿದೆ. ಕೊನೆಯಲ್ಲಿ ಕೋಲಾರ (ಶೇ. 1.12), ಬೆಂಗಳೂರು ನಗರ (ಶೇ. 1.42) ಮತ್ತು ಬೆಳಗಾವಿ (ಶೇ. 1.57) ಜಿಲ್ಲೆಗಳಿವೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 33,51,383 ಕುಟುಂಬಗಳಿದ್ದು, ಈವರೆಗೆ ಕೇವಲ 47,686 ಕುಟುಂಬಗಳು ಮಾತ್ರ ಗಣತಿಯಲ್ಲಿ ಪಾಲ್ಗೊಂಡಿವೆ. ಬೆಂಗಳೂರು ದಕ್ಷಿಣ (ಶೇ. 5.23) ಮತ್ತು ಬೆಂಗಳೂರು ಗ್ರಾಮಾಂತರ (ಶೇ.2.24) ಜಿಲ್ಲೆಗಳ ಪ್ರಗತಿಯೂ ಸಾಧಾರಣ ಮಟ್ಟದಲ್ಲಿದೆ.
ನಿಗದಿತ ಸಮಯದೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರವು ಈ ಡಿಜಿಟಲ್ ಸ್ವಯಂ ಎಣಿಕೆ ವಿಧಾನದ ಮೂಲಕ ಸಾರ್ವಜನಿಕರಿಗೆ ಸರಳ ಮತ್ತು ವೇಗವಾಗಿ ಮಾಹಿತಿ ನೀಡಲು ಅವಕಾಶ ಕಲ್ಪಿಸಿದ್ದು, ಬಳ್ಳಾರಿ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದಕ್ಕೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.ಏಪ್ರಿಲ್ 16 ರಿಂದ ಮೇ 15 ರವರೆಗೆ ಜನಗಣತಿದಾರರು ಮನೆ-ಮನೆಗೆ ಭೇಟಿ ನೀಡಿ ಮನೆಗಳ ಪಟ್ಟಿ ಮತ್ತು ಜನಗಣತಿ ಕಾರ್ಯವನ್ನು ಕೈಗೊಳ್ಳಲಿದ್ದಾರೆ. ಸಾರ್ವಜನಿಕರು ನಿಖರ ಮಾಹಿತಿ ನೀಡುವ ಮೂಲಕ ಜನಗಣತಿ ಕಾರ್ಯಕ್ಕೆ ಸಹಕರಿಸಬೇಕು ಎಂದು ಅವರು ವಿನಂತಿಸಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 