ಸವದತ್ತಿಯಲ್ಲಿ ಕರ್ನಾಟಕ ಜರ್ನಲಿಸ್ಟ್ ಯುನಿಯನ್ ಟ್ರಸ್ಟ್ ಸಭೆ
Karnataka Journalist Union Trust meeting at Savadatti
ಸವದತ್ತಿ 02; ಕರ್ನಾಟಕ ಜರ್ನಲಿಸ್ಟ್ ಯುನಿಯನ್ ಟ್ರಸ್ಟ್‌ನ ಸಭೆ ಸವದತ್ತಿಯಲ್ಲಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುರಗೇಶ ಬಿ ಶಿವಪೂಜಿ ರಾಜ್ಯಾಧ್ಯಕ್ಷರು ಕರ್ನಾಟಕ ಪತ್ರಕರ್ತರ ಸಂಘರವರು ವಹಿಸಿಕೊಂಡಿದ್ದರು. ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷರಾದ ಸುದೇಶ ಕುಮಾರರವರು ಪ್ರಸ್ತಾವಿಕ ನುಡಿಗಳನ್ನಾಡಿದರು. ಮುರಗೇಶ ಬಿ ಶಿವಪೂಜಿ ಯವರು ಸಂಘದಕಾರ್ಯ ಚಟುವಟಿಕೆಗಳ ಕುರಿತು ಸಭೆಗೆ ತಿಳಿಸಿದರು.
ಯಾವುದೇ ಸರ್ಕಾರದ ಅನುದಾನ ವಿಲ್ಲದೇ ಸಂಘದ ಸಹಕಾರದಿಂದ ಅನುಕೂಲ ವಾಗುವಷ್ಟು ಹಣದ ಸಹಾಯ ವನ್ನು ನಮ್ಮ ಪತ್ರಕರ್ತರಿಗೆ ಆರ್ಥಿಕವಾಗಿ ಸಹಾಯ ಮಾಡುತ್ತಾ ಹೊರಟಿದ್ದೇವೆ. ಸುಮಾರು 6.70 ಲಕ್ಷ ಹಣವನ್ನು 2014-2024ರ 10 ವರ್ಷದ ಅವಧಿಯಲ್ಲಿ ಟ್ರಸ್ಟ್ ವತಿಯಿಂದ ವತಿಯಿಂದ ಪತ್ರಕರ್ತರಿಗೆ ಅನಾರೋಗ್ಯ ಸಂದರ್ಭದಲ್ಲಿ ಮತ್ತು ನಿಧನರಾದ ಸಂದರ್ಭದಲ್ಲಿ ಸಹಾಯ ಮಾಡಿದೆ.
ಬೆಳಗಾವಿ ಮತ್ತು ಉತ್ತರಕನ್ನಡ ಜಿಲ್ಲೆಯಲ್ಲಿ ಕೋ ಆಪರೇಟಿವ್ ಸೊಸೈಟಿಯನ್ನು ಸಂಘದ ವತಿಯಿಂದ ಸ್ಥಾಪಿಸಲಾಗಿದೆ.
ಕೆಲಸ ಕೊಟ್ಟು ಕೂಲಿ ನೀಡುವ ಮೂಲಕ ಕೋ ಆಪರೇಟಿವ್ ಸೊಸೈಟಿಗೆ ಸಹಾಯ ಮಾಡಲು ಇಚ್ಛಿಸುವ ವ್ಯಕ್ತಿಗಳಿದ್ದರೆ ನಮಗೆ ಸಹಾಯ ಸಹಕಾರ ಮಾಡಬಹುದು ಎಂದು ಕರ್ನಾಟಕ ಪತ್ರಕರ್ತರ ಸಂಘ ರಾಜ್ಯಾದ್ಯಕ್ಷರಾದ ಮುರುಗೇಶ್ ಶಿವಪೂಜಿ ರವರು ಮನವಿ ಮಾಡಿಕೊಂಡರು. ದೇಶದಲ್ಲಿ ಒಟ್ಟು 22 ರಾಜ್ಯದಲ್ಲಿ ನಮ್ಮ ಸಂಘ ಕೆಲಸ ಮಾಡುತ್ತಿದೆ. ದೇಶದ ಎರಡನೇ ಸಂಘ ನಮ್ಮ ಕರ್ನಾಟಕ ಪತ್ರಕರ್ತರ ಸಂಘ ನಮ್ಮದಾಗಿದೆ ಎಂದರು.
ಸವದತ್ತಿ ಶಾಸಕ ವಿಶ್ವಾಶ ವೈದ್ಯ ಮಾತನಾಡಿ ನಮ್ಮ ಕ್ಷೇತ್ರದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದಕ್ಕೆ ಮೊದಲು ಎಲ್ಲಾ ಜಿಲ್ಲೆಯ ಪತ್ರಕರ್ತರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ನಾನು ಒಬ್ಬ ಜನ ಪ್ರತಿನಿಧಿಯಾಗಿ ನೀವು ನನಗೆ ಕೊಡುವ ಜವಾಬ್ದಾರಿಯನ್ನು ನಾನು ನನ್ನ ಕೈಲಾದ ಸಹಾಯ ಮಾಡಿ ನಿಮ್ಮೊಂದಿಗೆ ನಾನಿರುತ್ತೇನೆ. ದೇಶದಲ್ಲಿ ಮತ್ತು ರಾಜ್ಯದಲ್ಲಿ ನಿಮ್ಮ ಸಂಘವು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲಿ ತಾಯಿ ಸವದತ್ತಿ ಯಲ್ಲಮ್ಮ ನ ತಾಯಿಯ ಆಶೀರ್ವಾದ ವಿರಲಿ ಎಂದು ಶುಭ ಹಾರೈಸಿದರು.
ನಂತರ ಕಾರ್ಯಕ್ರಮಗಳನ್ನು ರಾಜ್ಯಾದ್ಯಕ್ಷರು ಸಭೆಯಅಧ್ಯಕ್ಷತೆಯನ್ನು ವಹಿಸಿದ್ದರು. ಕರ್ನಾಟಕ ಪತ್ರಕರ್ತರ ಸಂಘದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡುವುದಕ್ಕೆ ಸಭೆಯಲ್ಲಿ ನಿರ್ಣಯ ಮಾಡಲಾಯಿತು. ಸ್ಮರಣ ಸಂಚಿಕೆಗೆ ಜಾಹೀರಾತು ಸಂಗ್ರಹಿಸಿ ಕಾರ್ಯಕ್ರಮ ಕ್ಕೆ ಸಂಪನ್ಮೂಲ ಕ್ರೋಡಿಕರಣಕ್ಕೆ ಅನುಕೂಲ ಮಾಡುವಂತೆಎಲ್ಲಾಜಿಲ್ಲಾಅಧ್ಯಕ್ಷರಿಗೂ ತಿಳಿಸಲಾಗುವುದು.ಎಂದು ಬಸವರಾಜ ಪುಟ್ಟಿ ಸಭೆಗೆ ತಿಳಿಸಿದರು.
ಪತ್ರಿಕಾ ವಿತರಕರ ಸಂಘದರಾಜ್ಯಾಧ್ಯಕ್ಷ ಶಂಕರಕುದರಿಮೋತಿ ಮಾತಾನಾಡಿ ಪತ್ರಿಕಾ ವಿತರಕರನ್ನುಇದುವರೆಗೂಯಾವುದೇ ಸಂಘ ಗುರಿತಿಸಿರಲಿಲ್ಲ, ಆದರೆಕರ್ನಾಟಕ ಪತ್ರಕರ್ತರ ಸಂಘವು ನಮ್ಮನ್ನು ತಮ್ಮೊಂದಿಗೆ ಸೇರೆ್ಡ ಮಾಡಿ ಕೊಂಡಿರುವುದು ಬಹಳ ಸಂತೋಷದ ವಿಚಾರ ,ಹಾಗೂ ಸಂಘದ ಟ್ರಸ್ಟಿನ ನೂತನಆಹ್ವಾನಿತ ಟ್ರಸ್ಟಿ ಆಗಿ ಸವದತ್ತಿಯಲ್ಲಿಆಯ್ಕೆ ಮಾಡಿರುವುದಕ್ಕೆತುಂಬ ಹೃದಯದ ಧನ್ಯವಾದಗಳನ್ನು ಅರ್ಿಸಿದರು.
ಟ್ರಸ್ಟ್ ಗೆ ಸೇರೆ್ಡಯಾಗಬೇಕಾದರೆಟ್ರಸ್ಟ್ ಹೆಸರಿಗೆ 50 ಸಾವಿರ ನಿಗದಿ ಮಾಡಿದ್ದಕಾರಣ ಸಂಘದಟ್ರಸ್ಟ್ ಗೆ 50 ಸಾವಿರಚೆಕ್ ನ್ನು ಸಂಘದರಾಜ್ಯಾದ್ಯಕ್ಷರಿಗೆ ಹಸ್ತಾಂತರ ಮಾಡಿದರು.
ಟ್ರಸ್ಟ್‌ಜಾಗೆಯಕುರಿತು ವೇದಿಕೆಯಲ್ಲಿಚರ್ಚಿಸಲಾಯಿತು.
ಪತ್ರಕರ್ತರ ಸಂಘದಕುಟುಂಬಕ್ಕೆ ಸಹಾಯ ಮಾಡಿದ ಸದಸ್ಯರಿಗೆ ಸಂಘವು ಸಹಾಯ ಮಾಡಿದಕುರಿತು ಸಭೆಗೆ ಸಂಘದಉಪಾಧ್ಯಕ್ಷರಾದ ಸುದೇಶಕುಮಾರರವರು ತಿಳಿಸಿದರು.
ಗೋವಾ ರಾಜ್ಯದಲ್ಲಿಇಂಡಿಯನ್‌ಜರ್ನಲಿಸ್ಟ್‌ಯೂನಿಯನ್ ನ ಎರಡು ದಿನಗಳ ರಾಷ್ಟ್ರೀಯಕಾರ್ಯಕಾರಿಣಿ ಸಭೆ ನಡೆಸಲುತೀರ್ಮಾನ ಕೈಗೊಳ್ಳಬೇಕು ಎಂದು ಬಾಗಲಕೋಟಜಿಲ್ಲಾಧ್ಯಕ್ಷ ವಿಜಯಶಂಕರ್ ಹಾಗೂ ಕೊಪ್ಪಳ ಜಿಲ್ಲಾಅಧ್ಯಕ್ಷಆರ್ ಶರಣಪ್ಪ ಗುಮಗೇರಾ ಅವರು ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿಯು ಆಗಿರುವ ಮುರುಗೇಶ್ ಶಿವಪೂಜಿಯವರಿಗೆ ವಿನಂತಿಸಿದರು.
ಇವತ್ತಿನ ಈ ಸಭೆಗೆ ಆಗಮಿಸಿದ ಕೊಪ್ಪಳ,ವಿಜಯಪೂರ,ವಿಜಯನಗರ, ರಾಮನಗರ, ಚಾಮರಾಜನಗರ, ಬಾಗಲಕೋಟ,ಹಾವೇರಿ,ಸೊಲ್ಲಾಪುರ ,ಗದಗ,ಉತ್ತರಕನ್ನಡ ಜಿಲ್ಲೆಗಳ ಅಧ್ಯಕ್ಷರುಗಳು ಮತ್ತು ಹಿರಿಯ ಪತ್ರಕರ್ತ ಸುಭಾಸ ಬದನಿಕಾಯಿ, ಸೇರಿದಂತೆಎಲ್ಲಾ ಪತ್ರಿಕಾ ಬಳಗದವರಿಗೂ ಸನ್ಮಾನಿಸಿ ಸತ್ಕರಿಸಲಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 