ರಾಷ್ಟ್ರೀಯ ಲೋಕ ಅದಾಲತ್; ಒಟ್ಟು 235 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು
Karnataka High Court, Dharwad Bench
ಕರ್ನಾಟಕ ಉಚ್ಛ ನ್ಯಾಯಾಲಯ, ಧಾರವಾಡ ಪೀಠ
ಧಾರವಾಡ ಡಿ.14: ಕರ್ನಾಟಕ ಉಚ್ಛ ನ್ಯಾಯಾಲಯದ ಧಾರವಾಡ ಪೀಠದಲ್ಲಿ ಇಂದು (ಡಿ.14) ರಾಷ್ಟ್ರೀಯ ಲೋಕ ಅದಾಲತ್‌ನ್ನು ಕರ್ನಾಟಕ ಉಚ್ಛ ನ್ಯಾಯಾಲಯ, ಧಾರವಾಡ ಪೀಠದ ಹಿರಿಯ ನ್ಯಾಯಮೂರ್ತಿಗಳಾದ ಶ್ರೀನಿವಾಸ್ ಹರೀಶ ಕುಮಾರ್ ಅವರ ನೇತೃತ್ವದಲ್ಲಿ ಏರಿ್ಡಸಲಾಗಿತ್ತು.
ಈ ಅದಾಲತನಲ್ಲಿ ನ್ಯಾಯಮೂರ್ತಿಗಳಾದ ಜೆ.ಎಮ್. ಖಾಜಿ ಮತ್ತು ಟಿ. ಜಿ. ಶಿವಶಂಕರೆಗೌಡ ಹಾಗೂ ಇವರೊಂದಿಗೆ ಲೋಕ ಅದಾಲತ್ ನ ಸದಸ್ಯರುಗಳಾದ ಎಮ್. ಟಿ. ಬಾಂಗಿ, ಅರ್ಚನಾ ಮಗದುಮ ಮತ್ತು ವಿ. ಜಿ. ದಳವಾಯಿ ಈ ರೀತಿಯಾಗಿ ಒಟ್ಟು ಮೂರು ಪೀಠಗಳನ್ನು ಆಯೋಜಿಸಲಾಗಿತ್ತು. ಸದರಿ ಅದಾಲತನಲ್ಲಿ ಒಟ್ಟು 500 ಪ್ರಕರಣಗಳನ್ನು ಕೈಗೈತ್ತಿಕೊಳ್ಳಲಾಗಿತ್ತು. ಆ ಪೈಕಿ ಒಟ್ಟು 235 ಪ್ರಕರಣಗಳನ್ನು ರೂ. 5,86,30,660/- ಮೊತ್ತಕ್ಕೆ ಇತ್ಯರ್ಥಪಡಿಸಲಾಯಿತು. ಈ ಲೋಕ ಅದಾಲತ್ ದಲ್ಲಿ ಸುಮಾರು 10 ವರ್ಷಗಳಿಂದ ಬಗೆಹರೆಯದ ದಿವಾಣಿ ಪ್ರಕರಣವನ್ನು ನ್ಯಾಯಮೂರ್ತಿ ಟಿ. ಜಿ. ಶಿವಶಂಕರೆಗೌಡ ಮತ್ತು ನ್ಯಾಯವಾದಿ ವಿ. ಜಿ. ದಳವಾಯಿ ಸದಸ್ಯರನ್ನೊಳಗೊಂಡ ಪೀಠವು ಸೂಕ್ತ ಸಲಹೆ ನೀಡುವುದರ ಮೂಲಕ ಮತ್ತು ಉಭಯ ಕಕ್ಷಿದಾರರ ವಕೀಲರುಗಳಾದ ಕಿರಣಕುಮಾರ ಎಸ್. ಚಟ್ಟಿಮಠ ಮತ್ತು ವಸಂತ ಬಿ. ಹೊಲ್ಕರ ಇವರ ಪ್ರಯತ್ನದೊಂದಿಗೆ ಪ್ರಕರಣವನ್ನು ರಾಜಿ ಸಂದಾನದ ಮೂಲಕ ಇತ್ಯರ್ಥಗೊಳಿಸಲಾಯಿತು ಎಂದು ಅಧಿಕ ವಿಲೇಖನಾಧಿಕಾರಿಗಳು (ನ್ಯಾಯಾಂಗ) ಮತ್ತು ಉಚ್ಛ ನ್ಯಾಯಾಲಯ ಕಾನೂನು ಸೇವಾ ಸಮಿತಿ ಧಾರವಾಡ ಪೀಠದ ಕಾರ್ಯದರ್ಶಿಗಳಾದ ಜೆರಾಲ್ಡ್ ರುಡಾಲ್ಫ್ ಮೆಂಡೋನ್ಸಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಕ್ಷುಲ್ಲಕ ಕಾರಣದಿಂದ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಹತ್ಯೆ : ಕಿತ್ತೂರು ಪೊಲೀಸರಿಂದ ಆರೋಪಿ ಬಂಧನ
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ, 