ಕರ್ನಾಟಕ ಹಿ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾರ್ಯಕಾರಿಣಿ ಸಭೆ

 ಕರ್ನಾಟಕ ಹಿ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾರ್ಯಕಾರಿಣಿ ಸಭೆ Karnataka Hi Hubli Dharwad Metropolitan District Executive Meeting

ಲೋಕದರ್ಶನ ವರದಿ 



ಕರ್ನಾಟಕ ಹಿ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾರ್ಯಕಾರಿಣಿ ಸಭೆ 

ಹುಬ್ಬಳ್ಳಿ 11 : ನಗರದ ಸುಪ್ರಸಿದ್ಧ  ಸಿದ್ಧಾರೂಢ ಮಠದ ಸಭಾಂಗಣದಲ್ಲಿ  ಮಾದಾರ ಚೆನ್ನಯ್ಯ ಸೇವಾ ಸಮಿತಿ, ಕರ್ನಾಟಕ ಹಿ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಘೋಷಣೆ, ತಾಲೂಕು ಸಮಿತಿಗಳ ರಚನೆ, ಮುಂದಿನ ಸಾಲಿನ ಕಾರ್ಯಯೋಜನೆ, ಸಂಘಟನೆಯ ವಿಸ್ತರಣೆ ಹಾಗೂ ಸಮಾಜಮುಖಿ ಚಟುವಟಿಕೆಗಳ ಬಲವರ್ಧನೆ ಕುರಿತು ಚರ್ಚಿಸಲಾಯಿತು.ಸಭೆಯನ್ನು ಉದ್ಘಾಟಿಸಿದ ಸಮಿತಿಯ ಜಿಲ್ಲಾಧ್ಯಕ್ಷ ಸತ್ಯನಾರಾಯಣ್ ಎಂ. ಮಾತನಾಡಿ “ ಮಾದಾರ ಚೆನ್ನಯ್ಯ ಸ್ವಾಮೀಜಿಯವರು ಮಾದಿಗ ಸಮುದಾಯದ ಶಿಕ್ಷಣ, ಸಾಮಾಜಿಕ ಜಾಗೃತಿ ಮತ್ತು ಸಮಾನ ಹಕ್ಕುಗಳ ಹೋರಾಟದಲ್ಲಿ ಅಸಾಧಾರಣ ಸೇವೆ ಸಲ್ಲಿಸುತ್ತಿದ್ದಾರೆ. ಈ ಸೇವೆಯ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಲು ಪ್ರತಿಯೊಬ್ಬರೂ ಸಕ್ರಿಯವಾಗಿ ಮುಂದೆ ಬರಬೇಕು” ಎಂದು ಹೇಳಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಕೊಂಡಪಲ್ಲಿ “ಮಾದಿಗ ಸಮುದಾಯದ ರಾಜ್ಯ ಹಾಗೂ ದೇಶದ ಮಟ್ಟಕ್ಕೆ ತಲುಪಿಸಿದ ಪರಮಪೂಜ್ಯ ಡಾ. ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಗಳ ಎರಡು ದಶಕಗಳ ಪರಿಶ್ರಮ ಅನನ್ಯ. ಸಮುದಾಯದ ಸರ್ವಾಂಗಿಣ ಅಭಿವೃದ್ದಿಗಾಗಿ ಅವರ ಮಾರ್ಗದರ್ಶನದಲ್ಲಿ ಮಾದಾರ ಚೆನ್ನಯ್ಯ ಸೇವಾಸಮಿತಿಯು ರೂಪುಗೊಂಡಿದೆ. ಇಂದು ಸಮುದಾಯ ಎದುರಿಸುತ್ತಿರುವ ಸವಾಲುಗಳಿಗೆ ಸಮೀಕರಣದ ನೂತನ ಪ್ರಯೋಗವಾದ ‘ ಶಿವಶರಣ ಮಾದಾರ ಚನ್ನಯ್ಯ ಸೇವಾ ಸಮಿತಿ’ ಮೌಲಿಕ ಉತ್ತರಗಳನ್ನು ನೀಡುವತ್ತ ನಿಸ್ವಾರ್ಥ ಸೇವೆ ಮುಂದುವರಿಸಲಿದ್ದು, ಮಟ್ಟದ ಸಂಘಟನಾ ಬಲವರ್ಧನೆ ನಮ್ಮ ಪ್ರಮುಖ ಗುರಿಯಾಗಿದೆ,” ಎಂದ ಅವರು. ಅದೇ ಸಂದರ್ಭದಲ್ಲಿ, “ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ವೈಭವವನ್ನು ಜನರಿಗೆ ತಲುಪಿಸುವ ಜೊತೆಗೆ ಬೇರೆ ಸಮುದಾಯಗಳೊಂದಿಗೂ ಸಹ ಸಾಮರಸ್ಯ ಬೆಸೆಯುವ ಜವಾಬ್ದಾರಿಯನ್ನೂ ಸಮಿತಿ ನಿಷ್ಠೆಯಿಂದ ನಿರ್ವಹಿಸಲಿದೆ” ಎಂದು ಹೇಳಿದರು.ರಾಜ್ಯಾಧ್ಯಕ್ಷರಾದ  ಹೂಡಿ ಮಂಜುನಾಥ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ವಿವಿಧ ಸಂಘಟನಾ ಚಟುವಟಿಕೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಗುಡಿಹಾಳ ಅವರು ಮಾತನಾಡುತ್ತ “ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಸಮುದಾಯವನ್ನು ಸಂಘಟಿಸುವ ಮಹತ್ತರ ಜವಾಬ್ದಾರಿಯನ್ನು ಸೇವಾಸಮಿತಿಯು ನಿರ್ವಹಿಸಲಿದೆ. ಪ್ರತಿ ವಿಧಾನಸಭಾ ಕ್ಷೇತ್ರ, ಹೋಬಳಿ ಮತ್ತು ಗ್ರಾಮ ಮಟ್ಟಕ್ಕೆ ಸಮಿತಿಗಳನ್ನು ರಚಿಸಿ ಬಲಪಡಿಸುವುದು ಮುಖ್ಯ” ಎಂದರು.ರಾಜ್ಯ ಕಾರ್ಯಕಾರಿಣಿ ಸದಸ ಪರಶುರಾಮ ಮಲ್ಯಾಳ ಅವರು, “ಶ್ರೀಗಳ ಮೌಲ್ಯಾಧಾರಿತ ಬದುಕು ಸಮಾಜಕ್ಕೆ ದಾರೀದೀಪ. ಸಮಾಜದ ಏಳಿಗೆಗೆ ಸೇವಾ ಮನೋಭಾವವೇ ಮೂಲ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.  

ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಅಣ್ಣಾ ದೊರೈ ಅವರು ಮಾತನಾಡಿ “ಪಕ್ಷಭೇಧಗಳನ್ನು ಬದಿಗಿಟ್ಟು, ರಾಜಕೀಯ ಶಕ್ತಿ ಪಡೆಯಲು ನಾವೆಲ್ಲ ಒಗ್ಗಟ್ಟಿನ ನಿರ್ಣಯ ಕೈಗೊಳ್ಳಲು ಸಹ ಇಂತಹ ಒಂದು ಸಮಿತಿಯ ಅವಶ್ಯಕತೆ ಇದೆ” ಎಂದು ನುಡಿದರು. ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಶ್ರೀ ಗೋವಿಂದ ಬೆಲ್ಡೋಣಿ ಅವರು ಮಾತನಾಡಿ “ಯುವಶಕ್ತಿಯ ಪಾಲ್ಗೊಳ್ಳುವಿಕೆ ಸೇವಾಸಮಿತಿಯಲ್ಲಿ ಹೆಚ್ಚಾಗಿ ಆಗಬೇಕು. ಯುವಕರಿಗೆ ಪ್ರಾಧಾನ್ಯತೆ ನೀಡಿ ಅವರ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮಾರ್ಗೋಪಾಯಗಳನ್ನು ಪರಮಪೂಜ್ಯ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯಲಿ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ್ ನೀರಲಕೇರಿ ಅವರು, “ಮಾದಿಗ ಸಮುದಾಯದ ಸಬಲೀಕರಣಕ್ಕೆ ಶಿಕ್ಷಣವೇ ಮೊದಲ ಹೆಜ್ಜೆ. ಸಾಮಾಜಿಕ ಹಾಗೂ ಆರ್ಥಿಕ ಬಲವರ್ಧನೆಗೂ ಸಂಘಟಿತ ಚಟುವಟಿಕೆ ಅಗತ್ಯ. ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಸಮುದಾಯದ ಹಿತವನ್ನು ಮೊದಲಿಗೆ ಇಟ್ಟು ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು,” ಎಂದು ಹೇಳಿದರು.ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಶಾಲು ಹೊದೆಸಿ ಸನ್ಮಾನಿಸಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.ಸಭೆಯಲ್ಲಿ ಹಿರಿಯರಾದ  ಮೇಘರಾಜ ಹಿರೆಮನಿ, ಶರೀಫ್ ಶಿರಗುಪ್ಪಿ, ಮಹೇಂದ್ರ ಹುಣಶ್ಯಾಳ, ಹಾಲಪ್ಪ, ಗುರುನಾಥ ಅತ್ತಿಗುಡ್ಡ, ಸುರೇಶ ಖಾನಾಪುರ, ಶ್ರೀನಿವಾಸ ಕುಸಗೂರ, ಮಹೇಶ ತಗರಗುಂಟಿ, ಪ್ರಶಾಂತ ಅಣ್ಣಿಗೇರಿ, ಸುರೇಶ ಹುಬ್ಳಿಕರ, ಶ್ರೀನಿವಾಸುಲು ಬಾಪನಪಲ್ಲಿ ಮುಂತಾದವರು ಭಾಗವಹಿಸಿದ್ದರು.ದಯವಿಟ್ಟು ಮೇಲಿನ ಸುದ್ದಿಯನ್ನು ಪ್ರಕಟಿಸಬೇಕೆಂದು ವಿನಂತಿ.ಧನ್ಯವಾದಗಳು,ಮಂಜುನಾಥ ಕೊಂಡಪಲ್ಲಿರಾಜ್ಯ ಪ್ರಧಾನ ಕಾರ್ಯದರ್ಶಿಗಳು.ಕ: 8884448050