ಕರ್ನಾಟಕ ಜಾನಪದಕ್ಕೆ ಅತ್ಯಂತ ಸುದೀರ್ಘ ಮತ್ತು ಶ್ರೀಮಂತ ಇತಿಹಾಸವಿದೆ : ಸುಬ್ಬಣ್ಣ ಅಭಿಮತ
Karnataka's folklore has a very long and rich history: Subbanna's view
ಬಳ್ಳಾರಿ. ಆ. 23: ಬ್ರಿಟಿಷ್ ಬರಹಗಾರ ’ವಿಲಿಯಂ ಜಾನ್ ಥಾಮ್ಸ್’ ಅವರು 1836 ರ ಆಗಸ್ಟ್ 22 ರಂದು ಮೊದಲ ಬಾರಿಗೆ "ಫೋಲ್ಕ್-ಲೋರ್" (ಈಠಞಟಠಜ) ಅಂದರೆ ’ಜಾನಪದ’ ಎಂಬ ಪದವನ್ನು ಬಳಸಿದರು. ಈ ನೆನಪಿಗಾಗಿ ಪ್ರತಿವರ್ಷ ಆಗಸ್ಟ್ 22 ರಂದು ವಿಶ್ವ ಜಾನಪದ ದಿನವನ್ನು ಆಚರಿಸಲಾಗುತ್ತದೆ. ದೇಶ ಮತ್ತು ವಿದೇಶಗಳ ಪರಂಪರೆ, ಸಾಂಪ್ರದಾಯಿಕ ಕಲೆ, ಸಂಸ್ಕೃತಿ, ಜಾನಪದ ಗೀತೆಗಳು, ಕುಣಿತಗಳು, ಕಥೆಗಳು ಮತ್ತು ಆಚಾರ-ವಿಚಾರಗಳನ್ನು ಉಳಿಸಿ, ಬೆಳೆಸುವುದು ಅಲ್ಲದೆ ಕರ್ನಾಟಕದ ಜಾನಪದಕ್ಕೆ ಅತ್ಯಂತ ಸುದೀರ್ಘ ಮತ್ತು ಶ್ರೀಮಂತ ಇತಿಹಾಸವಿದೆ.
ಇತ್ತೀಚಿನ ದಿನಗಳಲ್ಲಿ ಅಳಿವಿನ ಅಂಚಿನಲ್ಲಿರುವ ತೊಗಲುಗೊಂಬೆ ಆಟ, ಕೋಲಾಟ, ಸಣ್ಣಾಟ, ಸಂಪ್ರದಾಯ ಪದ, ಬೀಸುವ ಪದ, ಬಿಸೋಪದ, ಡೊಳ್ಳಿನ ಪದ, ಚೌಡಿಕಿ ಪದಗಳು ಹೀಗೆ ಗ್ರಾಮೀಣ ಭಾಗದ ಜಾನಪದ ಕ್ರೀಡೆಗಳ ಬಗ್ಗೆ ಅರಿವು ಮೂಡಿಸಲು ಮುಂದಿನ ಜನಾಂಗಕ್ಕೆ ಪರಿಚಯಿಸುವ ಉದ್ದೇಶದಿಂದ ವಿಶ್ವ ಜಾನಪದ ದಿನಾಚರಣೆ ಆಚರಿಸಲಾಗುತ್ತದೆ ಎಂದು ತೊಗಲು ಗೊಂಬೆ ಕಲಾವಿದ ಸುಬ್ಬಣ್ಣ ಅಭಿಪ್ರಾಯಪಟ್ಟರು.
ಅವರು ನಗರದ ಎಸ್‌ಎನ್ ಪೇಟೆಯ ಶ್ರೀ ಕೃಷ್ಣ ಪ್ಲಾಜಾ ಸಭಾಂಗಣದಲ್ಲಿ ವೀಣಾಶ್ರೀ ಮಹಿಳಾ ಕಲಾ ಸಂಘ ಸಂಗನಕಲ್ಲು ಇವರು ಹಮ್ಮಿಕೊಂಡಿದ್ದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದವರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ತುಂಗ ಗಂಗಾ ಕಲಾ ಟ್ರಸ್ಟ್ ನ ಅಧ್ಯಕ್ಷರಾದ ನಾಗಭೂಷಣ್ ಭಾಗವಹಿಸಿ ಮಾತನಾಡಿ, ಈ ನೆಲದ ಕಲೆಯ ಸಂಸ್ಕೃತಿ ಪರಂಪರೆಯ ಅಡಿಪಾಯವೇ ಜಾನಪದ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವೀಣಾಶ್ರೀ ಮಹಿಳಾ ಕಲಾ ಸಂಘದ ಅಧ್ಯಕ್ಷೆ ಉಷಾ, ಚೌಡಕಿ ಕಲಾವಿದ ಲಕ್ಷ್ಮಣ, ತಾಂಡವ ನೃತ್ಯ ಕಲಾ ಟ್ರಸ್ಟಿನ ಅಧ್ಯಕ್ಷರಾದ ವಿನಯ್ ಮತ್ತು ಇತರರು ಉಪಸ್ಥಿತರಿದ್ದರುಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಿರುಗುಪ್ಪದ ಚೌಡಕಿ ಲಕ್ಷ್ಮಣ ಇವರಿಂದ ಚೌಡಕಿ ಪದಗಳ ಗಾಯನ ಎಲ್ಲರನ್ನೂ ಆಕರ್ಷಿಸುವಂತೆ ಮಾಡಿತು.ಬಳ್ಳಾರಿಯ ಅಮೃತ ತಂಡದವರಿಂದ ಜಾನಪದ ನೃತ್ಯ ಕಾರ್ಯಕ್ರಮಕ್ಕೆ ಮೆರಗನ್ನು ತಂದರೆ ವೀರೇಶ ದಳವಾಯಿವರಿಂದ ಜಾನಪದ ಗೀತೆ ಕಾರ್ಯಕ್ರಮ ಎಲ್ಲರನ್ನು ಮನರಂಜಿಸಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 