ಸಡಗರ ಸಂಭ್ರಮದಿಂದ ಕರಿಸಿದ್ಧೇಶ್ವರ ಜಾತ್ರಾ ಮಹೋತ್ಸವ
Karisidheshwara Jatra festival celebrated with great enthusiasm
ಲೋಕದರ್ಶನ ವರದಿ
ದೇವರ ಹಿಪ್ಪರಗಿ 17: ಪಟ್ಟಣದ ಐತಿಹಾಸಿಕ ಕರಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಅತ್ಯಂತ ಸಡಗರ ಸಂಭ್ರಮ ಹಾಗೂ ಭಕ್ತಿ ಭಾವದಿಂದ ಜರುಗಿತು.
ಸೋಮವಾರ ಬೆಳಗಿನಜಾವದಿಂದಲೇ ಆರಂಭವಾದ ಧಾರ್ಮಿಕ ವಿಧಿವಿಧಾನಗಳು ಭಕ್ತರ ಮೈಮನಗಳಲ್ಲಿ ಭಕ್ತಿಯ ಸಂಚಲನ ಮುಡಿಸಿದವು. ಬೆಳಗಿನ 2 ಗಂಟೆಗೆ ದೇವಸ್ಥಾನದ ಗರ್ಭಗುಡಿಯಲ್ಲಿ ಪೂಜಾ ವಿಧಿವಿಧಾನಗಳು ವಿದ್ಯುಕ್ತವಾಗಿ ಚಾಲನೆಗೊಂಡವು. 5 ಗಂಟೆಗೆ ಕರಿಸಿದ್ಧೇಶ್ವರನಿಗೆ ಪವಿತ್ರ ಜಲದಿಂದ ಪಂಚಾಮೃತ ಅಭಿಷೇಕ ನೆರವೇರಿಸಿ, ಮನಮೋಹಕವಾಗಿ ಪುಷ್ಪಾಲಂಕಾರ ಮಾಡಲಾಯಿತು. ನಂತರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಡೊಳ್ಳು ಹಾಗೂ ವಿವಿಧ ವಾದ್ಯಮೇಳದೊಂದಿಗೆ ಕಲ್ಮೇಶ್ವರ ದೇವಸ್ಥಾನಕ್ಕೆ ಮೆರವಣಿಗೆಯ ಮೂಲಕ ಕರೆದೊಯ್ಯಲಾಯಿತು. ಅಲ್ಲಿ ಗಂಗಾಸ್ನಾನ ಪೂರೈಸಿ ಪುನಃ ಮೂಲ ದೇವಸ್ಥಾನಕ್ಕೆ ಭವ್ಯವಾಗಿ ಮರಳಿ ತರಲಾಯಿತು. ಕರಿಗಡಬು ಹಾಗೂ ತುಪ್ಪದ ವಿಶಿಷ್ಟ ನೈವೇದ್ಯವನ್ನು ದೇವರಿಗೆ ಸಮರ್ಿಸಿ ದೇವಸ್ಥಾನದಲ್ಲಿ ವ್ಯವಸ್ಥೆಮಾಡಿದ ಅನ್ನ ಪ್ರಸಾದವನ್ನು ಸೇವಿಸಿದರು. ಸ್ಥಳೀಯ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಂದ ಜಾತ್ರೋತ್ಸವದಲ್ಲಿ ಭಾಗವಹಿಸಿದ ಸಾವಿರಾರು ಭಕ್ತರಲ್ಲಿ ಸಾಕ್ಷಾತ್ಕಾರದ ತೃಪ್ತಿ ಎದ್ದು ಕಾಣುತ್ತಿತ್ತು.
ಕರಿಸಿದ್ಧೇಶ್ವರ ಗರ್ಭಗುಡಿಯಿಂದ ಹಿಡಿದು ದೇವಸ್ಥಾನ ಸಂಪೂರ್ಣ ಆವರಣ ಭಂಡಾರಮಯವಾಗಿತ್ತು. ಜಾತ್ರೆಗೆ ಬಂದ ಸಣ್ಣಮಕ್ಕಳಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬರ ಹಣೆಯಲ್ಲೂ ಭಂಡಾರ ಕಂಗೊಳಿಸುತ್ತಿತ್ತು. ಧಾರ್ಮಿಕ ಕಾರ್ಯಕ್ರಮದ ಜೊತೆಗೆ ಸಾಂಸ್ಕೃತಿಕ ಕಳೆ ಕಟ್ಟಲು ರಾತ್ರಿ ವಿಶೇಷ ಹಾಡಕಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಂಗಳೇಶ್ವರ ಶ್ರೀಶೈಲ ಹಾಗೂ ಸ್ಥಳೀಯ ಬಾಬು ಮೆಟಗಾರ ತಂಡದಿಂದ ನಡೆದ ಜುಗಲಬಂದಿ ಗಾಯನವು ಭಕ್ತರಿಗೆ ಜಾನಪದ ಕಲೆಯ ರಸದೌತಣವನ್ನು ಉಣಬಡಿಸಿತು. ಪುಂಡಲೀಕ ಅಫಜಲಪೂರ ಮತ್ತು ಮಾಳು ಬಾಬಾನಗರ, ಸತೀಶ ನಾಡಗೌಡ, ಬಾಳು ಹೊನಮಿಶಿ, ಮಾಳಪ್ಪ ದೇವಣಗಾಂವ, ಶರಣಪ್ಪ ಪೂಜಾರಿ, ಬಲವಂತ ಹೊನಮೀಷಿ, ಭೈರ್ಪ ಮಣ್ಣೂರ, ಜಟ್ಟೆಪ್ಪ ಒಗ್ಗರ, ಯಮನೂರಿ ದೇವಣಗಾಂವ, ಯಲ್ಲಪ್ಪ ಇಮ್ರಾಪೂರ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 