26ರಂದು ಕಾರ್ಗಿಲ್, ಸಿಂಧೂರ್ ವಿಜಯೋತ್ಸವ: ಬೈಕ್ ರ್ಯಾಲಿ

26ರಂದು ಕಾರ್ಗಿಲ್, ಸಿಂಧೂರ್ ವಿಜಯೋತ್ಸವ: ಬೈಕ್ ರ್ಯಾಲಿ Kargil, Sindhur Victory Day on 26th: Bike Rally

ಬೆಳಗಾವಿ 21: ಅಖಿಲ ಕರ್ನಾಟಕ ಮಾಜಿ ಸೈನಿಕ ಸಂಘ ಜಿಲ್ಲಾ ಘಟಕದ ಬೆಳಗಾವಿ ಇವರ ಆಶ್ರಯದಲ್ಲಿ ದಿ. 26ರಂದು ಕಾರ್ಗಿಲ್ ಹಾಗೂ ಆಪರೇಷನ್ ಸಿಂಧೂರ್ ವಿಜಯೋತ್ಸವ ಕಾರ್ಯಕ್ರಮವನ್ನು  ನೆಹರು ನಗರದ ಕೆಪಿಟಿಸಿಎಲ್ ಸಮುದಾಯ ಭವನದಲ್ಲಿ ಮುಂ. 11ಘಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ಮಾಜಿ ಸೈನಿಕ ಸಂಘದ ಜಿಲ್ಲಾಧ್ಯಕ್ಷ ಬಸಪ್ಪ ತಳವಾರ ಹೇಳಿದರು.

ಸೋಮವಾರ ಬೆಳಗಾವಿಯಲ್ಲಿ ಮಾಧ್ಯಮಗೋಷ್ಟಿನ್ನುದ್ದೇಶಿಸಿ ಮಾತನಾಡಿದ ಅವರು ಜು.26 ರಂದು ಮುಂ. 8.30ರಿಂದ 10.30ರವರೆಗೆ ನೆಹರುನಗರದ ಕೆಪಿಟಿಸಿಎಲ್ ಹಾಲ್ ನಿಂದ ಹೊಸ ಗಾಂಧಿ ನಗರದ ಎಸ್‌ಸಿ ಮೋಟರ್ಸ್‌ವರೆಗೆ ಬೈಕ್ ರಾ​‍್ಯಲಿ ನಡೆಸಲಾಗುತ್ತದೆ. ಬಳಿಕ ಮಾಜಿ ಸೈನಿಕರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ. ಹಿರಿಯ ಮತ್ತು ಆದರ್ಶ ಮಾಜಿ ಸೈನಿಕರಿಗೆ, ಅಲ್ಲದೆ ಅಂಗವಿಕಲ ಮತ್ತು ಅನಾಥ ಮಕ್ಕಳಿಗೆ  ಸನ್ಮಾನ ಮಾಡಲಾಗುವುದು. ಅಲ್ಲದೆ, ನಿವೃತ್ತಿಯ ನಂತರ ಒಳ್ಳೆಯ ಸಮಾಜ ಸೇವೆ ಮಾಡಿದ ಮಾಜಿ ಸೈನಿಕರಿಗೆ ಜನರಲ್ ಕರಿಯಪ್ಪ ಅವಾರ್ಡ ಕೊಡಲಾಗುವುದು ನಂತರ 2ಘಂಟೆಗೆ ಮಧ್ಯಾಹ್ನದ ಭೋಜನ ಮತ್ತು ಲಕ್ಕಿ ಡ್ರಾ. ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಳವಾರ ಅವರು ಹೇಳಿದರು.

ಈರಣ್ಣಾ ಚಿಂಚಣಿ, ಬಸವರಾಜ ಶಿಂತ್ರೆ ಸುರೇಶ ಸನದಿ, ಬಸಪ್ಪ ಕಸಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.