ದೇಶಕ್ಕಾಗಿ ಶ್ರಮಿಸುತ್ತಿರುವ ಯೋಧರಿಗೆ ಗೌರವ ಕೊಡಿ: ಹಾರಿಕಾ ಮಂಜುನಾಥ

ದೇಶಕ್ಕಾಗಿ ಶ್ರಮಿಸುತ್ತಿರುವ ಯೋಧರಿಗೆ ಗೌರವ ಕೊಡಿ:  ಹಾರಿಕಾ ಮಂಜುನಾಥ Kargil, Operation Sindoor victory celebration by ex-soldiers

ಮಾಜಿ ಸೈನಿಕರಿಂದ ಕಾರ್ಗಿಲ್, ಆಪರೇಷನ್ ಸಿಂಧೂರ್ ವಿಜಯೋತ್ಸವ:               

ಬೆಳಗಾವಿ 26: ಸೈನಿಕರ ತ್ಯಾಗ, ಬಲಿದಾನ, ಸೇವಾ ಮನೋಭಾವನೆಯಿಂದಾಗಿ ನಾಡಿನಲ್ಲಿ ನಾವಿಂದು ಸುರಕ್ಷಿತವಾಗಿ ಇದ್ದೀವಿ. ದೇಶ  ಅಭಿವೃದ್ಧಿಯತ್ತ ಸಾಗಲು ಸೈನಿಕರೇ ಕಾರಣ, ಈ ನಿಟ್ಟಿನಲಿ ಪ್ರತಿಯೊಬ್ಬ ಯೋಧನಿಗೂ ಗೌರವ ನೀಡುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದು  ಯುವ ವಾಗ್ಮಿ, ಲೇಖಕಿ ಹಾರಿಕಾ ಮಂಜುನಾಥ ಅವರು ಹೇಳಿದರು.  

ನಗರದ ಧರ್ಮನಾಥ ಭವನದಲ್ಲಿ ಮಾಜಿ ಸೈನಿಕ ಸಂಘಟನೆಯ ಮಹಾ ಒಕ್ಕೂಟದಿಂದ ಭಾನುವಾರ  ಆಯೋಜಿಸಲಾದ ಕಾರ್ಗಿಲ್ ವಿಜಯೋತ್ಸವ ಹಾಗೂ ಆಪರೇಷನ್ ಸಿಂಧೂರ್ ವಿಜಯೋತ್ಸವದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು, ದೇಶ ಇಷ್ಟೊಂದು  ತಂತ್ರಜ್ಞಾನದಲ್ಲಿ ಮುಂದೆ ಸಾಗಲು, ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದ್ದೆವೆ ಎಂದರೆ ಸೈನಿಕರ ತ್ಯಾಗ ಅಡಗಿದೆ. ಅವರು ಮೈ ಕೊರೆಯುವ ಚಳಿಯನ್ನು ಲೆಕ್ಕಿಸದೇ ಸೈನಿಕರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ.  ಹೀಗಾಗಿ ನಾವು ದೇಶದೊಳಗಡೆ ಸುರಕ್ಷಿತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಅವರ ತ್ಯಾಗಕ್ಕೆ ನಾವು ತಲೆ ಬಾಗಿಸಿ ನಡೆಯೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

ನಮ್ಮ ದೇಶದ ಸೈನ್ಯ ಸಾಕಷ್ಟು ಪ್ರಬಲವಾಗಿದೆ. ಹೀಗಾಗಿ ಪಿಕೆ ತಲೆ ಬಾಗಿದರು. ನಮ್ಮ ಸೈನಿಕರು ಬಹಳಷ್ಟು ಬಲಶಾಲಿಗಳು, ಉಗ್ರರನ್ನು ಸದೆಬಡಿದ ನಮ್ಮ ಯೋಧರನ್ನು ಇಡೀ ದೇಶವೇ ಸ್ಮರಿಸಿ, ಬೆಂಬಲಿಸುತ್ತಿದೆ. ದೇಶವನ್ನು ಸದಾ ಸಂರಕ್ಷಿಸಿಕೊಳ್ಳುವಂತಹ ಶಕ್ತಿ ಭಾರತಕ್ಕಿದ್ದು, ಉಗ್ರರನ್ನು ಪೋಷಿಸುವ ದೇಶಕ್ಕೆ ತಕ್ಕ ಪಾಠ ಕಲಿಸಲಾಗುತ್ತಿದೆ. ದೇಶದ ಯೋಧರಿಗೆ ಗೌರವ ಮತ್ತು ಬೆಂಬಲಿಸುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯವಾಗಿದೆ ಎಂದರು. 

ಭಾರತ ದೇಶವೇ ಪರಾಕ್ರಮ ದೇಶ , ಭಾರತೀಯ ಸೈನಿಕರು   ಯಾವುದೇ  ಯುದ್ದಗಳಿಗೆ ತಲೆಬಾಗಿಲ, ವಿರೋಧಿಗಳ ತಲೆಗಳ ಲೆಕ್ಕ ಕೊಟ್ಟಿದ್ದಾರೆ.  ಶಸ್ತ್ರಾಸ್ತ್ರಗಳ ಇಲ್ಲದೇ ಎದೆಗೆ ಎದೆ.. ಕೊಟ್ಟು .. ಹೋರಾಡುವ ಶಕ್ತಿ ,  ಬಲಶಾಲಿ ಭಾರತೀಯ ಸೈನಿಕರಿಗೆ  ಮಾತ್ರ ಇರೊದು.  ಯಾವುದೇ ಗುಂಡಿಗೆ ಅಂಜದ ಪರಾಕ್ರಮಿಗಳು ಭಾರತೀಯ ಸೈನಿಕರು ಎಂದರು.  ಸಾವಿರಾರು ಸೈನಿಕರು ಯುದ್ದದಲ್ಲಿ ಮಡಿದಿದ್ದಾರೆ. ಆದರೆ, ಅವರು ಮಡಿದಾಗ ಹೆತ್ತ ತಾಯಿ ಹೊತ್ತ ಭೂಮಿ ಭಾರತ ಮಾತೆಯನ್ನು ನೆನೆದು ಉಸಿರು ಅರ​‍್ಿಸುತ್ತಾರೆ ಎಂದು ಹೇಳಿದರು. 

ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತಕ್ಕೆ ಎಚ್ಚರಿಕೆ ಕೊಟ್ಟಿದ ಪಾಕ್ ಸೇನಾಧಿಕಾರಿ ಕಡೆಗೂ ಭಾರತ  ಸೇನಾಶಕ್ತಿಗೆ  ತಲೆಬಾಗಿದರು. ಈ ವೇಳೆ  93 ಸಾವಿರ ಪಾಕಿಸ್ತಾನದ ಸೈನಿಕರು ಜೀವದಾನ ಮಾಡಿ ಪಾಕ್ ಗೆ ಕಳಿಸಿಲಾಗಿದೆ. ಆದರೆ, ಹೇಡಿ ಪಾಕಿಗಳು 54 ಭಾರತೀಯ ಸೈನಿಕರನ್ನು ಮರಳಿ ದೇಶಕ್ಕೆ ಕಳಿಸದೆ ಹೇಡಿ ತನ್ನ ಮೆರೆದಿದ್ದಾರೆ ಎಂದು ಹೇಳಿದರು. 

ಆಂಗ್ಲರು ಬಿಟ್ಟು ಹೋದ ಎಬಿಸಿಡಿ ( ಚಿಛಛಿಜ) ಬಿಟ್ಟು,  ದೇಶಕ್ಕಾಗಿ ಜೀವತ್ಯಾಗ ಮಾಡಿದ ಸೈನಿಕರ ಹೆಸರನ್ನು ಮಕ್ಕಳಿಗೆ ಕಲಿಸಿಕೊಡಬೇಕು. ಸೈನಿಕರು ಯಾವತ್ತೂ ಮಾಜಿ ಸೈನಿಕರು ಆಗಲು ಸಾಧ್ಯವಿಲ್ಲ. ಅವರು ಯಾವಾಗಲು ನವ ತರುಣರು ಎಂದರು. 

ಮಾಜಿ ಸೈನಿಕ ಸಂಘಟನೆಯ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ಜಗದೀಶ್ ಪೂಜಾರಿ  ಅವರು ಮಾತನಾಡಿ, ಗಡಿಯಲ್ಲಿ ತಾಯಿನಾಡಿಗಾಗಿ ಬೆವರು ಸುರಿಸುತ್ತಿರುವ ಸೈನಿಕರ ಕುಟುಂಬವನ್ನು ರಕ್ಷಿಸುವ ಕಾರ್ಯ ನಮ್ಮಿಂದಾಗಬೇಕು.  ತಮ್ಮ ಕುಟುಂಬವನ್ನು ತೊರೆದು ದೇಶದ ರಕ್ಷಣೆ ಹಗಲಿರುಳು ಶ್ರಮಿಸುತ್ತಾರೆ.  ಅವರ ಕುಟುಂಬ ಕಷ್ಟದಲ್ಲಿದಾಗ ನಾವು  ಕೈ ಜೋಡಿಸಿ,  ಅವರ ರಕ್ಷಣೆ ಮಾಡುವ ಜವಾಬ್ದಾರಿ ನಮ್ಮದಾಗಿದೆ. 

ನಮ್ಮ ದೇಶದ ಬಗ್ಗೆ ಮತ್ತು ಯೋಧರ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ ಹೊಂದಿರಬೇಕು. ದೇಶಕ್ಕೆ ಅನ್ನ ನೀಡುವ ರೈತರಿಗೆ ಮತ್ತು ದೇಶದ ಗಡಿ ಕಾಯುವ ಯೋಧರಿಗೆ ಕೊಡುವ ಗೌರವ ಸೈನಿಕರಲ್ಲಿ ಮತ್ತಷ್ಟು ಶಕ್ತಿ ತುಂಬಲು ಸಾಧ್ಯ. 

ಸರ್ಕಾರ ವತಿಯಿಂದ ಸಹ ಕಾರ್ಗಿಲ್ ವಿಜಯೋತ್ಸವ  , ಅಪರೇಷನ್ ಸಿಂಧೂರ ವಿಜಯೋತ್ಸವ ಕಾರ್ಯಕ್ರಮ ಮಾಡುವ ಮೂಲಕ ಸೈನಿಕರಿಗೆ ಗೌರವ ಸಲ್ಲಿಸಬೇಕು ಎಂದು ಮನವಿ ಮಾಡಿಕೊಂಡರು. 

ಸೈನಿಕರಿಂದ ಬೃಹತ್ ಬೈಕ್ ರಾ​‍್ಯಲಿ: 

ಬೃಹತ್ ಬೈಕ್ ರ್ಯಾಲಿಗೆ ಬಿಜೆಪಿ ಮುಖಂಡಾದ ಮುರಗೇಂದ್ರಗೌಡ ಪಾಟೀಲ ಅವರು ಹಸಿರು ನಿಶಾನೆ ನೀಡಿದರು. ಬಳಿಕ ಭಾರತೀಯ ಸೇನೆಯ ಶೌರ್ಯ ಮತ್ತು ತ್ಯಾಗಕ್ಕೆ ಹೃತ್ಪೂರ್ವಕ ಗೌರವವಾಗಿ, ಕಾರ್ಗಿಲ್ ವಿಜಯೋತ್ಸವ ಹಾಗೂ ಆಪರೇಷನ್ ಸಿಂಧೂರ್ ವಿಜಯೋತ್ಸವದ ಹಿನ್ನೆಲೆಯಲ್ಲಿ ನಗರದ ಕಿಲ್ಲಾ ಕೋಟೆಯಿಂದ  ಬೃಹತ್ ಬೈಕ್ ರಾ​‍್ಯಲಿ ನಡೆಯಿತು. 

ಕಿಲ್ಲಾ ಕೋಟೆಯಿಂದ ಆರಂಭವಾದ ಸೈನಿಕರ  ಬೈಕ್ ರಾ​‍್ಯಲಿ ಸಂಗೊಳ್ಳಿ ರಾಯಣ್ಣ ವೃತ್ತ, ಕೇಂದ್ರ ಬಸ್ ನಿಲ್ದಾಣ, ಚನ್ನಮ್ಮ ವೃತ್ತದಿಂದ ವೇದಿಕೆ ಕಾರ್ಯಕ್ರಮದ ಧರ್ಮನಾಥ ಭವನದವರೆಗೆ ತಲುಪಿತು. ಬೈಕ್ ರಾ​‍್ಯಲಿಯಲ್ಲಿ ಸಹಸ್ರಾರು ಮಾಜಿ ಸೈನಿಕರು ಪಾಲ್ಗೊಂಡು  'ಭಾರತ್ ಮಾತಾ ಕೀ ಜೈ' ಎಂದು ಜೈ ಘೋಷ ಮೊಳಗಿಸುವ ಮೂಲಕ ಅಪಾರ ದೇಶಪ್ರೇಮ ಮೆರೆದರು. 

ಸೈನಿಕರ ಈ ಬೈಕ್ ರಾ​‍್ಯಲಿಗೆ  ದೇಶಾಭಿಮಾನಿಗಳು "ಹೂ "  ಸುರಿದು ಸಂಭ್ರಮಿಸಿದರು. 

ಬಳಿಕ, ಮಾಜಿ ಸೈನಿಕರಿಂದ ಅಮರ ಜವಾನ್ ಜ್ಯೋತಿ ಗೆ ಗೌರವ ಸಲ್ಲಿಸಿ, ಒಂದು ನಿಮಿಷಗಳ ಕಾಲ ಮೌನ ಆಚರಣೆ ಸಲ್ಲಿಸಲಾಯಿತು. ಈ ವೇಳೆ   ಕಾರ್ಗಿಲ್ ವಿಜಯೋತ್ಸವದ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರ ಮಕ್ಕಳಿಗೆ ಹಾಗೂ ಆಪರೇಷನ್ ಸಿಂಧೂರ್ ನಲ್ಲಿ ಭಾಗಿಯಾಗಿ ತಮ್ಮ ಕೈ ಯನ್ನು ಕಳೆದುಕೊಂಡ ಬೆಳಗಾವಿ ಯೋಧನಿಗೆ ಗೌರವಿಸಿ, ಸನ್ಮಾನಿಸಲಾಯಿತು. 

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಜಗದೀಶ್ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದರು. ಉಪಾಧ್ಯಕ್ಷರಾದ ಸಂಗಪ್ಪ ಮೇಟಿ, ಮಾಜಿ ಶಾಸಕ ಅಂಜಯ ಪಾಟೀಲ,  ಬಿಜೆಪಿ ಮುಖಂಡರಾದ  ಮುರಗೇಂದ್ರಗೌಡ ಪಾಟೀಲ,  ಚೇತನ ಅಂಗಡಿ, ಡಾ. ಸತೀಶ ಚೌಲಿಗೇರಿ,  ಆಪರೇಷನ್ ಸಿಂಧೂರದಲ್ಲಿ ಭಾಗವಹಿಸಿದ ಸೈನಿಕರಾದ ಈರ​‍್ಪ ಜನಕಟ್ಟಿ, ಗಂಗಾಧರ ಬೆಟಗೇರಿ,  ಅಂತರಾಷ್ಟ್ರೀಯ ಕರಾಟೆಯಲ್ಲಿ ಚಿನ್ನದ ವೀಜೆತ ವೈಷ್ಟವಿ ನಿರ್ವಾಣಿ, ಚಿತ್ರ ನಟಿ ಪ್ರಿಯಾ ಸವಡಿ, ವೀರು ದೊಡ್ಡ ವೀರ​‍್ಪನವರ,  ರಮೇಶ ಚೌಗಲಾ,  ಪ್ರಧಾನ ಕಾರ್ಯದರ್ಶಿ ಶಿವಬಸಪ್ಪ ಕಾಡನ್ನವರ,  ಸಂತೋಷ ಹಿರೇಮಠ, ಗಣಪತ ದೇಸಾಯಿ, ಗೌಸಸಾಬ್ ಬಾಗೇವಾಡಿ,  ಸುರಜ ಪಾಟೀಲ, ಸುನೀತಾ ಪಟ್ಟಣಶೇಟ್ಟಿ, ವೈಶಾಲಿ ಸುದಾಗಾಡಿ, ಪ್ರತಿಭಾ ಭಂಡಿ, ಅಶೋಕ ಮಜಗಿ, ಸಂತೋಷ ಮಠಪತಿ ಹಾಗೂ ಇತರರು ಇದ್ದರು. ನಾಗೇಂದ್ರ ಕರವಿನಕೊಪ್ಪ,  ಗಂಗಮ್ಮಾ ಪಾಟೀಲ ನಿರೂಪಿಸಿದರು. ಸಂತೋಷ ಹಿರೇಮಠ ವಂದಿಸಿದರು